ಮರಗಂಟನಾಳ ಗ್ರಾಮದ ವ್ಯಾಪ್ತಿಯಲ್ಲಿ ಬೆಳೆದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದು, ಕೂಡಲೇ ಸರ್ಕಾರ ಬೆಳೆ ನಷ್ಟ ಪರಿಹಾರ ಒದಗಿಸಬೇಕೆಂದು ರೈತರು ಮನವಿ ನೀಡಿದರು.
ಬರಗಾಲಕ್ಕೆ ತುತ್ತಾಗಿ ಬೆಳೆ ಕೈಗೆಟುಕದೆ ರೈತರು ಕಂಗಾಲಾಗಿದ್ದರು.
ಈ ವರ್ಷ ಬೆಳೆ ಕೈಗೆಟುಕಲಿದೆ ಆಶಾಭಾವನೆ ಹೊಂದಿದ ರೈತರಿಗೆ ಧಾರಾಕಾರ ಸುರಿದ ಮಳೆಗೆ ಬೆಳೆ ನಾಶಗೊಂಡು ನಿರಾಶೆ ಉಂಟು ಮಾಡಿದೆ. ಸರ್ಕಾರ ಇದರ ಬಗ್ಗೆ ಗಮನ ಹರಿಸಬೇಕೆಂದು ರೈತರು ಮನವಿ ಮಾಡಿಕೊಂಡಿದ್ದಾರೆ .