ಧೃವ ಮಾಡಿದ ಈ ತಪ್ಪಿಗೆ ದರ್ಶನ್ ಪೊಗರು ಆಡಿಯೋ ಲಾಂಚ್ ಗೆ ಬರಲಿಲ್ಲ

Date:

ಧೃವ ಸರ್ಜಾ ಅಭಿನಯದ ಪೊಗರು ಚಿತ್ರದ ಆಡಿಯೋ ಬಿಡುಗಡೆ ನಿನ್ನೆ ದಾವಣಗೆರೆಯಲ್ಲಿ ಭರ್ಜರಿಯಾಗಿ ನಡೆಯಿತು. ಚಿತ್ರತಂಡದ ಜೊತೆ ಚಂದನವನದ ಹಲವು ಕಲಾವಿದರು ಹಾಜರಿದ್ದರು. ಇನ್ನು ಈ ಕಾರ್ಯಕ್ರಮಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬರಲಿದ್ದಾರೆ ಎಂಬ ಸುದ್ದಿ ಇತ್ತು. ಅಪಾರ ಅಭಿಮಾನಿಗಳು ಡಿ ಬಾಸ್ ಆಗಮನಕ್ಕೆ ಕಾಯುತ್ತಿದ್ದರು. ಆದರೆ ಡಿ ಬಾಸ್ ಬರಲೇ ಇಲ್ಲ..

 

 

ಹೌದು ದರ್ಶನ್ ಅವರು ಪೊಗರು ಆಡಿಯೋ ಕಾರ್ಯಕ್ರಮಕ್ಕೆ ಬರಲಿಲ್ಲ. ಇದು ಹಲವಾರು ಮಂದಿಗೆ ಬೇಸರ ಮೂಡಿಸಿದರೆ ಇನ್ನು ಕೆಲವರಲ್ಲಿ ಪ್ರಶ್ನೆಯನ್ನು ಮೂಡಿಸಿದೆ. ಕಾರ್ಯಕ್ರಮಕ್ಕೆ ಬರಬೇಕಿದ್ದ ದರ್ಶನ್ ಯಾಕೆ ಬರಲಿಲ್ಲ? ಡಿ ಬಾಸ್ ಬರದೇ ಇರಲು ಅಸಲಿ ಕಾರಣವೇನು? ಎಂಬ ಪ್ರಶ್ನೆಗೆ ಉತ್ತರ ಧೃವ ಸರ್ಜಾ ಮಾಡಿದ ಆ ಒಂದು ತಪ್ಪು..!

 

 

ಹೌದು ಫೆಬ್ರವರಿ 14 ದೇಶಕ್ಕೇ ಕರಾಳದಿನ. 2019 ರಲ್ಲಿ ನಡೆದ ಪುಲ್ವಾಮಾ ಅಟ್ಯಾಕ್ ನಲ್ಲಿ ಹಲವಾರು ವೀರಯೋಧರು ಬಲಿದಾನಗೈದರು. ಇಂಥಹ ದಿನ ದೇಶಕ್ಕೆ ಕರಾಳದಿನ ಎಂದು ನಿನ್ನೆ ದರ್ಶನ್ ಅವರು ಟ್ವೀಟ್ ಮಾಡಿದ್ದರು. ಆದರೆ ಧೃವ ಸರ್ಜಾ ಮಾತ್ರ ಅದೇ ದಿನ ಆಡಿಯೋ ಬಿಡುಗಡೆ ಮಾಡಿ ಕುಣಿದು ಕುಪ್ಪಳಿಸಿದರು. ಕರಾಳದಿನದಂದು ಸಂಭ್ರಮಿಸುವುದು ತಪ್ಪು ಎಂಬ ಕಾರಣದಿಂದಾಗಿ ದರ್ಶನ್ ಪೊಗರು ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದು ಹೇಳಲಾಗುತ್ತಿದೆ. ಕರಾಳದಿನದಂದು ಅದ್ದೂರಿ ಕಾರ್ಯಕ್ರಮ ಮಾಡಿದ ಧೃವ ಸರ್ಜಾ & ಪೊಗರು ಚಿತ್ರತಂಡದ ಮೇಲೆ ಡಿಬಾಸ್ ಸಿಟ್ಟಾಗಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ.

 

 

ಕೇವಲ ದರ್ಶನ್ ಮಾತ್ರವಲ್ಲದೇ ಸಾಮಾನ್ಯ ಜನರೂ ಸಹ ಪೊಗರು ತಂಡದ ಈ ಆಡಂಬರದ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದು ಸೈನಿಕರು ಬಲಿದಾನಗೈದ ದಿನದಂದು ಈ ರೀತಿ ಕುಣಿಯೋ ಅಗತ್ಯ ಇತ್ತಾ? ದೇಶಪ್ರೇಮ ಇಲ್ವಾ? ಎಂದು ಅಸಮಾಧಾನ ಹೊರಹಾಕಿದ್ದಾರೆ.

Share post:

Subscribe

spot_imgspot_img

Popular

More like this
Related

ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ – ಈಶ್ವರ ಖಂಡ್ರೆ

ಡಾ.ಕಸ್ತೂರಿ ರಂಗನ್ ವರದಿ: ಕೇಂದ್ರ ಸರ್ಕಾರ ಹೊರಡಿಸಿದ ಕರಡು ಅಧಿಸೂಚನೆ ತಿರಸ್ಕಾರ...

ಅವಧಿ ಮುಕ್ತಾಯವಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ ಸಚಿವ ರಹೀಂ ಖಾನ್

ಅವಧಿ ಮುಕ್ತಾಯವಾದ ನಗರ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಗೆ ಕ್ರಮ: ಪೌರಾಡಳಿತ...

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ: ಸಿದ್ದರಾಮಯ್ಯ

ರಾಜ್ಯದಲ್ಲಿ ಬಿಜೆಪಿ ಹಿಂಬಾಗಿಲಿಂದ ಅಧಿಕಾರ ಪಡೆಯಿತೇ ಹೊರತು ಜನಾರ್ಶೀವಾದದಿಂದಲ್ಲ: ಸಿದ್ದರಾಮಯ್ಯ ಬೆಳಗಾವಿ: ರಾಜ್ಯದಲ್ಲಿ...

ನ್ಯಾಷನಲ್​ ಹೆರಾಲ್ಡ್​ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼ​ಗೆ ರಿಲೀಫ್

ನ್ಯಾಷನಲ್​ ಹೆರಾಲ್ಡ್​ ಪ್ರಕರಣ: ಸೋನಿಯಾಗಾಂಧಿ, ರಾಹುಲ್ʼ​ಗೆ ರಿಲೀಫ್ ನವದೆಹಲಿ: ನ್ಯಾಷನಲ್ ಹೆರಾಲ್ಡ್ ಹಣ...