2019ರ ವಿಶ್ವಕಪ್ ನ ಸೆಮಿ ಫೈನಲ್ ಪಂದ್ಯವದು. ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಮಾಡುತ್ತಿದ್ದರು. ಧೋನಿ ರನ್ ಚೇಸ್ ಮಾಡಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ಗೆಲುವನ್ನು ತಂದು ಕೊಡುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಮಹೇಂದ್ರ ಸಿಂಗ್ ಧೋನಿ ರನ್ ಔಟ್ ಆಗುವ ಮೂಲಕ ಎಲ್ಲರ ಆಸೆಗೆ ತಣ್ಣೀರೆರಚಿದರು. ಔಟಾದ ನಂತರ ಕಣ್ಣೀರು ಹಾಕುತ್ತಾ ಧೋನಿ ಪೆವಿಲಿಯನ್ ನತ್ತ ಪಯಣ ಬೆಳೆಸಿದರು.

ಧೋನಿ ರನ್ ಔಟ್ ಆಗುವ ವೇಳೆ ಡೈವ್ ಬೀಳುವ ಯಾವುದೇ ಪ್ರಯತ್ನವನ್ನು ಮಾಡಿರಲಿಲ್ಲ. ಆ ಸಮಯದಲ್ಲಿ ಧೋನಿ ವಿಕೆಟ್ ಉಳಿಸಿಕೊಳ್ಳಲು ಡೈವ್ ಮಾಡದೇ ಇರುವುದರ ಕುರಿತು ಸಾಕಷ್ಟು ಟ್ರೋಲ್ ಗಳನ್ನು ಮಾಡಲಾಗಿತ್ತು. ಸ್ವತಃ ಧೋನಿ ಅವರು ಸಹ ಸಂದರ್ಶನವೊಂದರಲ್ಲಿ ನಾನು ಯಾಕೆ ಆ ದಿನ ವಿಕೆಟ್ ಉಳಿಸಿಕೊಳ್ಳಲು ಡೈವ್ ಬೀಳಲಿಲ್ಲ ಅಂತ ಆಗಾಗ ಮನಸ್ಸಿಗೆ ಬೇಸರ ಉಂಟಾಗುತ್ತದೆ ಎಂದು ನೋವನ್ನು ವ್ಯಕ್ತಪಡಿಸಿದ್ದರು.

ಆದರೆ ಇದೀಗ ರಾಜಸ್ಥಾನ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಧೋನಿ ವಿಕೆಟ್ ಉಳಿಸಿಕೊಳ್ಳಲು ಡೈವ್ ಮಾಡಿದ್ದಾರೆ. ಇಷ್ಟು ಸಾಕಿತ್ತು ನೋಡಿ ಸಾಮಾಜಿಕ ಜಾಲತಾಣದಲ್ಲಿ ಧೋನಿ ಅವರ ವಿರುದ್ಧ ಸಾಲು ಸಾಲು ಟ್ರೋಲ್ ಗಳು ಹರಿದಾಡಲು.. ಧೋನಿ ದೇಶಕ್ಕೆ ಆಡುವಾಗ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನ ಮಾಡದೆ , ಡೈವ್ ಮಾಡದೆ ಔಟ್ ಆದರು. ಆದರೆ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೋಸ್ಕರ ಇಷ್ಟು ಕಷ್ಟಪಟ್ಟು ಡೈವ್ ಮಾಡಿದ್ದಾರೆ. ದೇಶಕ್ಕೆ ಒಂದು ನ್ಯಾಯ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಒಂದು ನ್ಯಾಯ, ಎಲ್ಲಾ ದುಡ್ಡಿನ ಆಟ ಎಂದು ಧೋನಿ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

ಆದರೆ ಇದೇ ಧೋನಿ ಭಾರತಕ್ಕೆ 2 ವಿಶ್ವಕಪ್ ಗಳನ್ನು ತಂದು ಕೊಟ್ಟಿದ್ದಾರೆ ಎಂಬುದನ್ನು ಇಲ್ಲಿ ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಧೋನಿ ದೇಶಕ್ಕೋಸ್ಕರ ಆಡುವುದಿಲ್ಲ ಎಂದಾದರೆ ವಿಶ್ವಕಪ್ ಗಳು ಮತ್ತು ಹಲವಾರು ಐಸಿಸಿ ಟ್ರೋಫಿಗಳನ್ನು ಯಾಕೆ ಗೆಲ್ಲಿಸಿಕೊಟ್ಟರು? ಧೋನಿ ಟೀಮ್ ಇಂಡಿಯಾ ಗೋಸ್ಕರ ಹಲವಾರು ಇಷ್ಟದ ಪಂದ್ಯಗಳನ್ನು ಈಗಾಗಲೇ ಕಲಿಸಿಕೊಟ್ಟಿದ್ದಾರೆ. ಕೇವಲ ಒಂದು ರನ್ ಔಟ್ ನಿಂದ ಟೀಮ್ ಇಂಡಿಯಾಗೆ ಹಲವಾರು ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟ ಧೋನಿ ಅವರನ್ನು ಟ್ರೋಲ್ ಮಾಡುವುದು ಸಮಂಜಸವಲ್ಲ.






