ಧೋನಿಗೆ ಬ್ಯಾಟಿಂಗ್ ಬರಲ್ಲ ಅಂದುಕೊಂಡಿದ್ದ ಬೌಲರ್!!

Date:

ಭಾರತ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ವಿಶ್ವ ಕ್ರಿಕೆಟ್‌ ಕಂಡ ಶ್ರೇಷ್ಠ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ಆಗಿದ್ದು, ಪ್ರಮುಖವಾಗಿ ವೈಟ್‌ ಬಾಲ್‌ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಶ್ರೇಷ್ಠ ಫಿನಿಷರ್‌ ಎಂದೇ ಹೆಗ್ಗಳಿಕೆ ಪಡೆದುಕೊಂಡಿದ್ದಾರೆ.
ಆದರೆ, ಎಂಎಸ್‌ಡಿ ಎದುರು ಮೊದಲ ಬಾರಿ ಬೌಲಿಂಗ್‌ ಮಾಡಿದಾಗ ಈತನಿಗೆ ಬ್ಯಾಟಿಂಗ್ ಮಾಡಲು ಬರುವುದೇ ಇಲ್ಲ ಎಂಬ ಅನುಭವವಾಗಿದ್ದ ಬಗ್ಗೆ ದಕ್ಷಿಣ ಆಫ್ರಿಕಾ ತಂಡದ ವೇಗದ ಬೌಲರ್‌ ಎನ್ರಿಕ್‌ ನೊರ್ಕಿಯಾ ಇದೀಗ ಹೇಳಿಕೊಂಡಿದ್ದಾರೆ.
2010ರಲ್ಲಿ ದಕ್ಷಿಣ ಆಫ್ರಿಕಾದ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಲೀಗ್‌ ಟಿ20 ಕ್ರಿಕೆಟ್‌ ಟೂರ್ನಿ ವೇಳೆ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕ ಎಂಎಸ್‌ ಧೋನಿ ಎದುರು ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುವ ಅವಕಾಶ ಸಿಕ್ಕಿದ್ದ ಘಟನೆಯನ್ನು ನೊರ್ಕಿಯಾ ಇದೀಗ ಸ್ಮರಿಸಿದ್ದಾರೆ.
ಅಂದು ಹದಿ ಹರೆಯದ ಯುವ ವೇಗದ ಬೌಲರ್‌ ಆಗಿದ್ದ ನೊರ್ಕಿಯಾಗೆ ಸಿಎಸ್‌ಕೆ ತಂಡದ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುವ ಸುವರ್ಣಾವಕಾಶ ಲಭ್ಯವಾಗಿತ್ತು. ಆಗ ತಾವು ಬೌಲಿಂಗ್‌ ಮಾಡುತ್ತಿರುವುದು ಎಂಎಸ್‌ ಧೋನಿ ಅವರಿಗೆ ಎಂಬುದು ಕೂಡ ಗೊತ್ತಿರಲಿಲ್ಲ ಎಂದು ಬಲಗೈ ವೇಗಿ ಇದೀಗ ಹೇಳಿಕೊಂಡಿದ್ದಾರೆ. ಅಂದು ಧೋನಿಯ ಬ್ಯಾಟಿಂಗ್ ತಂತ್ರಗಾರಿಕೆ ಕಂಡು ಈತನಿಗೆ ಬ್ಯಾಟಿಂಗ್‌ ಬರೋದೇ ಇಲ್ಲ ಎಂದು ಅಂದುಕೊಂಡಿದ್ದರಂತೆ.


ನೆಟ್ಸ್‌ ಅಭ್ಯಾಸದಲ್ಲಿ ಈ ಬ್ಯಾಟ್ಸ್‌ಮನ್‌ಗೆ ಇಷ್ಟವೇ ಇಲ್ಲ ಎಂಬ ಅನುಭವವಾಗಿತ್ತು. ಬ್ಯಾಟ್ಸ್‌ಮನ್‌ ತಮ್ಮ ಕಾಲುಗಳನ್ನು ಬಳಸದೇ ನಿಂತಲ್ಲೇ ನಿಂತು ಚೆಂಡನ್ನು ಹೊಡೆಯುವ ಪ್ರಯತ್ನ ಮಾಡುತ್ತಿದುದ್ದನ್ನು ಕಂಡು ಬೆರಗಾಗಿದ್ದ ಬಗ್ಗೆ ನೋರ್ಕಿಯಾ ಹೇಳಿಕೊಂಡಿದ್ದಾರೆ. “ನನಗೆ ಎಂಎಸ್‌ ಧೋನಿ ಎದುರು ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡಿದ್ದು ಈಗಲೂ ನೆನಪಿದೆ. ಅವರಿಗೆ ಅಲ್ಲಿ ಬ್ಯಾಟಿಂಗ್‌ ಮಾಡುವ ಆಸಕ್ತಿಯೇ ಇಲ್ಲದಂತೆ ಕಾಣಿಸುತ್ತಿತ್ತು. ನಿಜ ಹೇಳುವುದಾದರೆ ಅವರಿಗೆ ಬ್ಯಾಟಿಂಗ್‌ ಬರುತ್ತದೆ ಎಂದೇ ಅನ್ನಿಸುತ್ತಿರಲಿಲ್ಲ,” ಎಂದಿದ್ದಾರೆ.
“ಅದು ಎಂಎಸ್‌ ಧೋನಿ ಎಂಬುದು ಕೂಡ ಆಗ ನನಗೆ ಗೊತ್ತಿರಲಿಲ್ಲ. ಕಾಲನ್ನು ಅಲ್ಲಾಡಿಸದೇ ನಿಂತಲ್ಲೇ ನಿಂತು ಒಂದೆರಡು ಎಸೆತಗಳನ್ನು ಬಡಿದಟ್ಟಿ ನಗುತ್ತಿದ್ದರು. ಉಳಿದೆಲ್ಲಾ ಬ್ಯಾಟ್ಸ್‌ಮನ್‌ಗಳು ನೆಟ್ಸ್‌ನಲ್ಲಿ ರಕ್ಷಣಾತ್ಮಕ ಆಟವಾಡಿ ಚೆಂಡನ್ನು ಚೆನ್ನಾಗಿ ಕಣ್ತುಂಬಿಒಳ್ಳುವ ಕಡೆಗೆ ಮೊದಲ ಆದ್ಯತೆ ನೀಡಿದ್ದರು. ಆದರೆ ಧೋನಿ ನಿಂತಲ್ಲೇ ನಿಂತು ದೊಡ್ಡ ಹೊಡೆತಗಳನ್ನು ಆಡುವ ಪ್ರಯತ್ನ ಮಾಡುತ್ತಿದ್ದರು,” ಎಂದು ಗ್ರೇಡ್‌ ಕ್ರಿಕೆಟರ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ನೊರ್ಕಿಯಾ ಮಾತನಾಡಿದ್ದಾರೆ.


ತಮ್ಮ ಮಾತು ಮುಂದುವರಿಸಿದ ಹರಿಣ ಪಡೆಯ ಸ್ಟಾರ್‌ ವೇಗದ ಬೌಲರ್‌, ಇದೇ ವರ್ಷ ಪಾಕಿಸ್ತಾನ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ನೀಡಿದ ಭರ್ಜರಿ ಬೌಲಿಂಗ್ ಪ್ರದರ್ಶನದ ಬಗ್ಗೆಯೂ ಮಾತನಾಡಿದ್ದಾರೆ. ರಾವಲಪಿಂಡಿಯಲ್ಲಿ ನಡೆದ ಟೆಸ್ಟ್‌ನಲ್ಲಿ ನೊರ್ಕಿಯಾ 56 ರನ್‌ ನೀಡಿ 5 ವಿಕೆಟ್‌ ಪಡೆದ ಸಾಧನೆ ಮಾಡಿದ್ದರು. ಆದರೂ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 95 ರನ್‌ಗಳಿಂದ ಸೋತಿತ್ತು.
“ಹೌದು ಆ ಪ್ರದರ್ಶನ ನನಗೆ ಬಹಳಾ ಸಂತಸ ನೀಡಿತ್ತು. ಆದರೆ, ಪಂದ್ಯ ಗೆಲ್ಲಲು ಸಾಧ್ಯವಾಗದೇ ಹೋದದ್ದು ಬಹಳಾ ಬೇಸರ ತಂದೊಡ್ಡಿತ್ತು. ವಿಕೆಟ್‌ ಪಡೆದ ಸಂಭ್ರಮ ಎಷ್ಟೇ ಇದ್ದರೂ ಕೂಡ, ಪಂದ್ಯ ಗೆಲ್ಲಬೇಕು ಎಂಬುದು ಮೊದಲ ಆದ್ಯತೆ ಆಗಿರುತ್ತದೆ,” ಎಂದಿದ್ದಾರೆ.


“ನನಗೆ ಒಂದು ವಿಕೆಟ್‌ ಸಿಕ್ಕಿ ತಂಡ ಪಂದ್ಯ ಗೆದ್ದರೆ ಅದರಿಂದ ಸಿಗುವ ಸಂತಸವೇ ಬೇರೆ. ಐದು ವಿಕೆಟ್‌ ಬದಲಿಗೆ ನಾನು ಈ ಫಲಿತಾಂಶವನ್ನೇ ಬಯಸುತ್ತೇನೆ. ಈ ಬಾರಿ ಕೆಲ ಅದ್ಭುತ ಪ್ರದರ್ಶನಗಳನ್ನು ನೀಡಿದ್ದೇನೆ. ಅದರಲ್ಲಿ ಪಾಕಿಸ್ತಾನ ವಿರುದ್ಧ 5 ವಿಕೆಟ್‌ ಪಡೆದದ್ದು ಕೂಡ ಒಂದಾಗಿದೆ,” ಎಂದು ನೊರ್ಕಿಯಾ ಹೇಳಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...