ಧೋನಿಯ ಇನ್ನೊಂದು ಮುಖ ಬಿಚ್ಚಿಟ್ಟ ಪ್ರಗ್ಯಾನ್ ಓಝಾ!

Date:

ಎಂಎಸ್ ಧೋನಿ, ವಿಶ್ವ ಕ್ರಿಕೆಟ್ ಕಂಡ ಲೆಜೆಂಡರಿ ಕ್ರಿಕೆಟಿಗರಲ್ಲೊಬ್ಬರು. ಮಹೇಂದ್ರ ಸಿಂಗ್ ಧೋನಿ ತಮ್ಮ ಕ್ರಿಕೆಟ್ ವೃತ್ತಿ ಜೀವನದಿಂದ ಹಲವಾರು ಯುವ ಕ್ರಿಕೆಟಿಗರಿಗೆ ಸ್ಫೂರ್ತಿಯಾಗಿದ್ದಾರೆ. ಟೀಮ್ ಇಂಡಿಯಾಗೆ ಹಲವಾರು ಕನಸಿನ ಟ್ರೋಫಿಗಳನ್ನು ಗೆಲ್ಲಿಸಿಕೊಟ್ಟಂತಹ ನಾಯಕತ್ವವನ್ನು ಧೋನಿ ನಿರ್ವಹಿಸಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾ ಪರ 2 ವಿಶ್ವಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಹಲವಾರು ಐಸಿಸಿ ಟ್ರೋಫಿಗಳನ್ನು ನಾಯಕನಾಗಿ ಗೆಲ್ಲಿಸಿಕೊಟ್ಟ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಒಬ್ಬ ಯಶಸ್ವಿ ನಾಯಕ.

 

ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕನಾಗಿ ಒಟ್ಟು 3 ಐಪಿಎಲ್ ಟ್ರೋಫಿಗಳನ್ನು ಎಂಎಸ್ ಧೋನಿ ಗೆಲ್ಲಿಸಿದ್ದಾರೆ. ಇಷ್ಟು ಯಶಸ್ವಿಯುತ ನಾಯಕನಾಗಿರುವ ಕಾರಣಕ್ಕೆ ಎಂಎಸ್ ಧೋನಿ ಅವರನ್ನು ಯುವ ಕ್ರಿಕೆಟಿಗರು ರೋಲ್ ಮಾಡೆಲ್ ಆಗಿ ನೋಡುತ್ತಾರೆ ಹಾಗೂ ಧೋನಿ ಅವರನ್ನು ಫಾಲೋ ಮಾಡುತ್ತಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ಕೊಟ್ಟು, ಬೆನ್ನು ತಟ್ಟಿ ಉತ್ತಮ ಆಟವನ್ನಾಡಿಸುವಂತಹ ಗುಣವನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಅವರ ಮತ್ತೊಂದು ಮುಖವನ್ನು ಮಾಜಿ ಕ್ರಿಕೆಟಿಗರೊಬ್ಬರು ಬಿಚ್ಚಿಟ್ಟಿದ್ದಾರೆ.

ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಎಂಎಸ್ ಧೋನಿ ಅವರ ವಿಶಿಷ್ಟವಾದ ಗುಣವೊಂದನ್ನು ಬಿಚ್ಚಿಟ್ಟಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸಹ ಆಟಗಾರರಿಗೆ ಯಾವುದೇ ಕಾರಣಕ್ಕೂ ಪಂದ್ಯಕ್ಕೂ ಮುನ್ನ ಶುಭ ಕೋರುವುದಿಲ್ಲ ಎಂಬ ಸಂಗತಿಯನ್ನು ಪ್ರಗ್ಯಾನ್ ಓಝಾ ತಿಳಿಸಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಹೀಗೆ ನಡೆದುಕೊಳ್ಳುವುದಕ್ಕೆ ಕಾರಣವೂ ಇದೆ. ಧೋನಿ ಈ ಹಿಂದೆ ಕೆಲವೊಂದು ಬಾರಿ ಸಹ ಆಟಗಾರರಿಗೆ ಶುಭವನ್ನು ಕೋರಿದಾಗ ಆ ಆಟಗಾರರ ಆಟದಲ್ಲಿ ಉಂಟಾದ ವ್ಯತ್ಯಾಸಗಳುಂಟಾಗಿತ್ತು, ಹೀಗಾಗಿಯೇ ಎಂಎಸ್ ಧೋನಿ ಯಾವ ಆಟಗಾರರಿಗೂ ಸಹ ಶುಭ ಕೋರಲು ಇಷ್ಟಪಡುವುದಿಲ್ಲ ಎಂಬ ಸಂಗತಿಯನ್ನು ಪ್ರಗ್ಯಾನ್ ಓಝಾ ಬಹಿರಂಗಪಡಿಸಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...