ಧೋನಿಯ ವಿಶ್ವಕಪ್ ಸಿಕ್ಸರ್ ಗೆ ಸೂಪರ್ ಗೌರವ..!
ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಸ್ವಾತಂತ್ರ್ಯ ದಿನಾಚರಣೆ ದಿನ ದಿಢೀರ್ ಅಂತ ನಿವೃತ್ತಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಸರಿಯುವ ನಿರ್ಧಾರ ಮಾಡಿದ್ದಾರೆ ನಿಜ, ಆದರೆ ಅವರು ಟೀಮ್ ಇಂಡಿಯಾ ಹಾಗೂ ವರ್ಲ್ಡ್ ಕ್ರಿಕೆಟ್ಗೆ ನೀಡಿರುವ ಕೊಡುವೆ ಅಪಾರ ಮತ್ತು ಅದ್ಭುತ!
ಧೋನಿ ಜರ್ಸಿ ನಂಬರ್ ಅನ್ನು ಇನ್ನೂ ಬೇರೆ ಯಾರಿಗೂ ನೀಡಬಾರದು. ಜರ್ಸಿ ನಂಬರ್ 7 ಅನ್ನು ಕೂಡ ನಿವೃತ್ತಿ ಎಂದು ಪರಿಗಣಿಸಿ ಆ ಮೂಲಕ ಭಾರತ ಕ್ರಿಕೆಟ್ ಕಂಡ ಶ್ರೇಷ್ಠ ನಾಯಕನಿಗೆ ಗೌರವ ಸಲ್ಲಿಸಬೇಕು ಎಂಬ ಮಾತುಗಳು ಕೇಳಿಬರುತ್ತಿವೆ. ಆ ಚರ್ಚೆಯ ನಡುವೆ ಮುಂಬೈ ಕ್ರಿಕೆಟ್ ಸಂಸ್ಥೆ ಮತ್ತೊಂದು ವಿಶಿಷ್ಟ, ಅಪರೂಪದ ಗೌರವ ಸಲ್ಲಿಸಲು ತೀರ್ಮಾನಿಸಿದೆ.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ 2011ರ ವಿಶ್ವಕಪ್ ಫೈನಲ್ನಲ್ಲಿ ಸಿಕ್ಸರ್ ಸಿಡಿಸಿ ಭಾರತ ಗೆಲುವಿನ ಕೇಕೆ ಹಾಕುವಂತೆ ಮಾಡಿದ್ದರು. ಶ್ರೀಲಂಕಾ ವಿರುದ್ಧದ ಧೋನಿಯ ಆ ಚಾಂಪಿಯನ್ ಸಿಕ್ಸ್ ಭಾರತಕ್ಕೆ ವರ್ಲ್ಡ್ಕಪ್ ತಂದುಕೊಟ್ಟಿತು. ಧೋನಿಯ ಆ ವಿನ್ನಿಂಗ್ ಸಿಕ್ಸರ್ಗೆ ಸ್ಪೆಷಲ್ ಗೌರವ ನೀಡಲು ಎಂ ಸಿ ಎ ತೀರ್ಮಾನಿಸಿದೆ.
ಅಪೆಕ್ಸ್ ಕಮಿಟಿ ಸದಸ್ಯ ಅಜಿಂಕ್ಯ ನಾಯ್ಕ್, 2011 ರ ವಿಶ್ವಕಪ್ ಫೈನಲ್ನಲ್ಲಿ ಧೋನಿ ಬಾರಿಸಿದ್ದ ವಿನ್ನಿಂಗ್ ಸಿಕ್ಸರ್ ಬೀಳುತ್ತಿದ್ದ ಆಸವನ್ನು ಗುರುತಿಸಿ, ಅದಕ್ಕೆ ಧೋನಿಯ ಹೆಸರನ್ನು ಇಡುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಎಂ ಸಿ ಎ ಅಧಿಕಾರಿಗಳು ಕೂಡ ಅದನ್ನು ಒಪ್ಪಿದ್ದಾರೆ . ಸದ್ಯದಲ್ಲೆ ಅಧಿಕೃತವಾಗಿ ಘೋಷಿಸಲಿದ್ದಾರೆ ಎಂದು ವರದಿಯಾಗಿದೆ.
2019 ರ ಏಕದಿನ ವಿಶ್ವಕಪ್ ಬಳಿಕ ಧೋನಿ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಅವರ ನಿವೃತ್ತಿ ವಿಚಾರವಾಗಿ ನಾನಾ ರೀತಿಯ ನಾನಾ ರೀತಿಯ ಚರ್ಚೆಗಳು ನಡೆಯುತ್ತಿದ್ದವು. ಆದರೆ ಯಾವುದಕ್ಕೂ ಧೋನಿ ಪ್ರತಿಕ್ರಿಯೆ ನೀಡಿರ್ಲಿಲ್ಲ. ದಿಢೀರಾಗಿ ಸ್ವಾತಂತ್ರ್ಯ ದಿನಾಚರಣೆ ದಿನ ನಿವೃತ್ತಿ ಘೋಷಿಸಿದ್ದಾರೆ.
ಧೋನಿಯ ವಿಶ್ವಕಪ್ ಸಿಕ್ಸರ್ ಗೆ ಸೂಪರ್ ಗೌರವ..!
ನಾಯಕನಾಗಿದ್ದಾಗ ಧೋನಿ ಮಾಡಿದ್ದ ರೂಲ್ಸ್ ಕೇಳಿ ಟೀಮ್ ಇಂಡಿಯಾ ಆಟಗಾರರು ಭಯ ಪಟ್ಟಿದ್ದರು..?
ಚಂದನವನಕ್ಕೆ ‘ಕಿಚ್ಚ’ನ ಕೊಟ್ಟ ‘ಹುಚ್ಚ’ಸಿನಿಮಾ ಸುದೀಪ್ ಕೈ ಸೇರಿದ್ದೇ ಇಂಟ್ರೆಸ್ಟಿಂಗ್..
ಮಕ್ಕಳ ಪೋಷಣೆಗೆ ಡ್ರೈಫ್ರೂಟ್ಸ್ ಬೆಸ್ಟ್..
ಕೆಲ ನಿಯಮಗಳೊಂದಿಗೆ ಗಣೇಶೋತ್ಸವ ಆಚರಣೆಗೆ ಅವಕಾಶ.. ಇಲ್ಲಿದೆ ಸರ್ಕಾರದ ಪರಿಷ್ಕೃತ ಮಾರ್ಗಸೂಚಿ..
ಕೊರೋನಾದಿಂದ ಚೇತರಿಸಿಕೊಂಡಿದ್ದ ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು..!
ಧೋನಿ – ರೈನಾ ಒಟ್ಟೊಟ್ಟಿಗೆ ನಿವೃತ್ತಿ ಘೋಷಿಸಿಲು ಅಸಲಿ ಕಾರಣ ಏನ್ ಗೊತ್ತಾ? 7 & 3 = 73 ..!
100 + ವಯಸ್ಸಿನ ಅಜ್ಜಿ ಯೂಟ್ಯೂಬ್ ಸ್ಟಾರ್ ಆಗಿದ್ದು ಹೇಗೆ?
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..
ಧೋನಿ ನಿಭಾಯಿಸಿದ್ದ ಜವಬ್ದಾರಿ ಕನ್ನಡಿಗ ರಾಹುಲ್ ಹೆಗಲಿಗೆ..!
ಮಳೆಗಾಲದಲ್ಲಿ ತ್ವಚೆಯ ರಕ್ಷಣೆಗೆ ಮನೆಮದ್ದು.
ಸ್ವರ ಸಾಮ್ರಾಟನ ಆರೋಗ್ಯ ಸ್ಥಿರ.. ಬೇಗ ಚೇತರಿಸಿಕೊಳ್ಳಿ ಎಂದು ರಜನಿ ಟ್ವೀಟ್..