ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್..!

Date:

ವಿಶ್ವಕ್ರಿಕೆಟ್ನಲ್ಲಿ ತನ್ನದೇಯಾದ ಛಾಪು ಮೂಡಿಸಿದ ಕ್ರಿಕೆಟ್ ಸಾಮ್ರಾಟ್ ಮಹೇಂದ್ರ ಸಿಂಗ್ ಧೋನಿ. ಕನ್ನಡಿಗ ರಾಹುಲ್ ದ್ರಾವಿಡ್ ಬಳಿಕ ಪೂರ್ಣಾವಧಿ ನಾಯಕನಾಗಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಚಾಣಾಕ್ಷ ನಾಯಕ. ಭಾರತಕ್ಕೆ 2007 ರ ಟಿ20 ಮತ್ತು 2011 ರ ಏಕದಿನ ವಿಶ್ವಕಪ್ ತಂದು ಕೊಟ್ಟ ಸಾರಥಿ. ವಿಶೇಷ ಅಂದ್ರೆ ಈ ಎರಡೂ ವಿಶ್ವಕಪ್ ಧೋನಿ ನಾಯಕತ್ವದ ಮೊದಲ ವಿಶ್ವಕಪ್ ಆಗಿತ್ತು. ವರ್ಲ್ಡ್ ಕಪ್ ಅಲ್ಲದೆ ಎಲ್ಲಾ ಐಸಿಸಿ ಟೂರ್ನಿಗಳನ್ನು ಗೆದ್ದ ನಾಯಕ ಎಂಬ ಹೆಗ್ಗಳಿಕೆ ಕೂಡ ಧೋನಿಗಿದೆ. ಆದರೆ, ಬದಲಾದ ಕಾಲಘಟ್ಟದಲ್ಲಿ ಧೋನಿ ನಾಯಕತ್ವ ತ್ಯಜಿಸಿದ್ದು, ರನ್ ಮಷಿನ್ ವಿರಾಟ್ ಕೊಹ್ಲಿ ತಂಡದ ನಾಯಕರಾಗಿದ್ದು ಇತಿಹಾಸ.


ವಿರಾಟ್ ತಂಡದ‌ ನಾಯಕರಾದ ಮೇಲೂ ತಂಡ ಹಾಗೂ ನಾಯಕನಾಗಿ ಕೊಹ್ಲಿ ಯಶಸ್ಸಿನ ಹಿಂದಿನ ಶಕ್ತಿಯಾಗಿದ್ದವರು ಇದೇ ಮಹೇಂದ್ರ ಸಿಂಗ್ ಧೋನಿ ಎಂಬ ವಿಶ್ವ ಶ್ರೇಷ್ಠ ಕ್ರಿಕೆಟಿಗ..! ಆದರೆ ಇಂಗ್ಲೆಂಡ್ ನಲ್ಲಿ 2019 ರಲ್ಲಿ ನಡೆದ ವಿಶ್ವಕಪ್ ಬಳಿಕ ಧೋನಿ ತಂಡದಲ್ಲಿಲ್ಲ. ಯಾವುದೇ ಟೂರ್ನಿಯಲ್ಲೂ ಧೋನಿ ಕಾಣಿಸಿಕೊಂಡಿಲ್ಲ. ಹೀಗಾಗಿ ಈ ಬಾರಿಯ ಐಪಿಎಲ್ ಅವರ ಪಾಲಿಗೆ ಅತ್ಯಂತ ಮಹತ್ವದ್ದಾಗಿತ್ತು. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್ ಭವಿಷ್ಯ 13 ನೇ ಆವೃತ್ತಿ ಐಪಿಎಲ್ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯ ಕೋಚ್ ರವಿಶಾಸ್ತ್ರಿ ಕೂಡ ಹೇಳಿದ್ದರು‌.


ಮಾರ್ಚ್ 29 ರಿಂದ ಆರಂಭವಾಗಬೇಕಿದ್ದ ಐಪಿಎಲ್ ಕೊರೋನಾ ಅಟ್ಟಹಾಸದಿಂದ ಸದ್ಯಕ್ಕೆ ಮುಂದೂಡಲ್ಪಟ್ಟಿದೆ‌. ಕೊರೋನಾ ಹಾವಳಿ ಹೆಚ್ಚಾದಲ್ಲಿ ಟೂರ್ನಿ ನಡೆಯುವುದೇ ಅನುಮಾನ. ಹೀಗಾಗಿ ಮತ್ತೆ ಧೋನಿ ನಿವೃತ್ತಿ ವಿಚಾರ ಮುನ್ನೆಲೆಗೆ ಬಂದಿದೆ.‌
ಆದರೆ ಧೋನಿ ಮಾತ್ರ ಮತ್ತೆ ಕಮ್ ಬ್ಯಾಕ್ ಮಾಡುವ ಹಠ ಮತ್ತು ಛಲದಲ್ಲಿದ್ದಾರೆ‌.
ಹೌದು ಇದು ಧೋನಿ ಕಮ್ ಬ್ಯಾಕ್ ಗೆ ಎದುರು ನೋಡುತ್ತಿರುವ ಅಭಿಮಾನಿಗಳಿಗೆ ಗುಡ್ ನ್ಯೂಸ್ ‌. ಧೋನಿ ನಿವೃತ್ತಿ ವಿಚಾರದಲ್ಲಿ ಸ್ನೇಹಿತರೊಬ್ಬರು ಮಾತನಾಡಿದ್ದಾರೆ.


“ಎಂ.ಎಸ್‌ ಧೋನಿ ಭಾರತ ತಂಡಕ್ಕೆ ಮರಳಲು ಇನ್ನೂ ಹಾತೊರೆಯುತ್ತಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ಅವರಿನ್ನೂ ತಯಾರಿಲ್ಲ. ಒಂದು ವೇಳೆ ನಿವೃತ್ತಿ ಬಗ್ಗೆ ಮಾತನಾಡಿದರೆ ಸಿಟ್ಟಾಗುತ್ತಾರೆ” ಎಂದು ಸ್ನೇಹಿತರೊಬ್ಬರು ಇತ್ತೀಚಿಗೆ ಸಂದರ್ಶನದಲ್ಲಿ ಹೇಳಿದ್ದಾರೆ.


ಕಳೆದ ಹಲವು ತಿಂಗಳುಗಳಿಂದ ಎಂ.ಎಸ್‌ ಧೋನಿ ಅಂಗಳದಲ್ಲಿ ಸಾಕಷ್ಟು ಕಷ್ಟ ಬೀಳುತ್ತಿದ್ದಾರೆ. ಆದರೆ, ಕೊರೊನಾ ವೈರಸ್‌ ಬರುತ್ತಿದ್ದಂತೆ ಎಲ್ಲವೂ ನಿಂತು ಹೋಗಿದೆ. ಅವರು ಎಲ್ಲರಂತೆ ಯುವ ಆಟಗಾರನಲ್ಲ. ಹಾಗಾಗಿ ತನ್ನ ತರಬೇತಿಯನ್ನು ಸಾಕಷ್ಟು ಕಠಿಣವಾಗಿಸಿ ಸಂಪೂರ್ಣ ಫಿಟ್‌ ಆಗುವ ಕಡೆ ಗಮನಹರಿಸುತ್ತಿದ್ದಾರೆ. ಯಾರೂ ಅವರನ್ನು ಬೆಂಬಲಿಸದಿದ್ದಾಗ ಅವರು ಎಲ್ಲವನ್ನೂ ತಪ್ಪು ಎಂದು ಸಾಬೀತುಪಡಿಸಿದ್ದಾರೆ. ಈಗ ಅವರನ್ನು ಬೆಂಬಲಿಸಲು ಲಕ್ಷಾಂತರ ಅಭಿಮಾನಿಗಳಿದ್ದಾರೆ. ಆದ್ದರಿಂದ ಅವರು ತನ್ನ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಕಾಯುತ್ತಿದ್ದಾರೆ. ನಿವೃತ್ತಿಯ ಬಗ್ಗೆ ನಾವು ಕೇಳಿದಾಗ ಮಾಹಿಗೆ ಸುಲಭವಾಗಿ ಕೋಪ ಬರುತ್ತದೆ,” ಎಂದು ಎಂದು ಎಬಿಪಿ ನ್ಯೂಸ್‌ಗೆ ತಿಳಿಸಿದ್ದಾರೆ.
ಈ ಮೂಲಕ ಧೋನಿ ಇನ್ನೂ‌ ನಿವೃತ್ತಿ ಬಗ್ಗೆ ಯೋಚನೆ ಮಾಡಿಲ್ಲ. ತಂಡಕ್ಕೆ ವಾಪಸ್ಸಾಗುವ ನಿಟ್ಟಿನಲ್ಲಿ ಅಭ್ಯಾಸ ನಿರತರಾಗಿದ್ದಾರೆ ಎಂಬುದು ಸ್ಪಷ್ಟ. ಅಭಿಮಾನಿಗಳು ಕೂಡ ಅದನ್ನು ಎದುರು ನೋಡ್ತಾ ಇದ್ದಾರೆ.

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...