ವಿಶ್ವ ಕ್ರಿಕೆಟ್ ನ ಯಶಸ್ವಿ ನಾಯಕರಲ್ಲಿ ಒಬ್ಬರು ಮಹೇಂದ್ರ ಸಿಂಗ್ ಧೋನಿ. ಭಾರತಕ್ಕೆ 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವರ್ಲ್ಡ್ಕಪ್ ತಂದುಕೊಟ್ಟ ನಾಯಕ. ಕ್ಯಾಪ್ಟನ್ ಆಗಿ ಮಾತ್ರವಲ್ಲ ಒಬ್ಬ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿಯೂ ಧೋನಿ ಯಶಸ್ಸು ಕಂಡಿದ್ದಾರೆ. ಅವರೊಬ್ಬ ವಿಶ್ವ ಶ್ರೇಷ್ಠ ಕ್ರಿಕೆಟಿಗ ಅನ್ನೋದರಲ್ಲಿ ಡೌಟಿಲ್ಲ. ಆದರೆ ಇಂಥಾ ಧೋನಿಯ ಕ್ರಿಕೆಟ್ ಯುಗ ಅಂತ್ಯಗೊಳ್ಳುವ ಕಾಲ ಸನ್ನಿಹಿತವಾಗಿದೆ. ಸ್ವತಃ ಬಿಸಿಸಿಐನೇ ಅಂತಹದ್ದೊಂದು ಸೂಚನೆಯನ್ನು ನೀಡಿದೆ.
2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ವಿಶ್ವಕಪ್ ಬಳಿಕ ಧೋನಿ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಈ ನಡುವೆ ಬಿಸಿಸಿಐ ಆಟಗಾರರ ವಾರ್ಷಿಕ ಒಪ್ಪಂದದ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಎ+, ಎ, ಬಿ ಮತ್ತು ಸಿ ಯಾವ ಪಟ್ಟಿಯಲ್ಲೂ ಧೋನಿ ಹೆಸ್ರನ್ನು ಬಿಸಿಸಿಐ ಸೇರಿಸಿಲ್ಲ. ಇದು ಧೋನಿ ವಿದಾಯದ ಮುನ್ಸೂಚನೆ ಎಂದು ಹೇಳಲಾಗಿದೆ.
ಎ+ ಗ್ರೇಡ್ ಒಪ್ಪಂದದ ಲಿಸ್ಟ್ನಲ್ಲಿ
ವಿರಾಟ್ ಕೊಹ್ಲಿ
ರೋಹಿತ್ ಶರ್ಮಾ
ಜಸ್ಪ್ರೀತ್ ಬುಮ್ರಾ
ಎ ಗ್ರೇಡ್ ಒಪ್ಪಂದದ ಲಿಸ್ಟ್ನಲ್ಲಿ
ರವಿಚಂದ್ರನ್ ಅಶ್ವಿನ್,
ರವೀಂದ್ರ ಜಡೇಜಾ ,
ಭುವನೇಶ್ವರ್ ಕುಮಾರ್ ,
ಚೇತೇಶ್ವರ ಪೂಜಾರ,
ಅಜಿಂಕ್ಯ ರಹಾನೆ
ಕೆಎಲ್ ರಾಹುಲ್,
ಶಿಖರ್ ಧವನ್,
ಮೊಹಮ್ಮದ್ ಶಮಿ,
ಇಶಾಂತ್ ಶರ್ಮಾ,
ಕುಲದೀಪ್ ಯಾದವ್ ,
ರಿಷಭ್ ಪಂತ್,
ಬಿ ಗ್ರೇಡ್ ಒಪ್ಪಂದದ ಲಿಸ್ಟ್ನಲ್ಲಿ
ವೃದ್ದಿಮಾನ್ ಸಾಹ
ಉಮೇಶ್ ಯಾದವ್
ಯಜುವೇಂದ್ರ ಚಹಲ್
ಹಾರ್ದಿಕ್ ಪಾಂಡ್ಯ
ಮಾಯಾಂಕ್ ಅಗರ್ವಾಲ್
ಸಿ ಗ್ರೇಡ್ ಒಪ್ಪಂದದ ಲಿಸ್ಟ್ನಲ್ಲಿ
ಕೇದಾರ್ ಜಾಧವ್
ನವದೀಪ್ ಸೈನಿ
ದೀಪಕ್ ಚಹರ್
ಮನೀಶ್ ಪಾಂಡೆ
ಹನುಮ ವಿಹಾರಿ
ಶಾರ್ದುಲ್ ಠಾಕೂರ
ಶ್ರೇಯಸ್ ಐಯರ್
ವಾಷಿಂಗ್ಟನ್ ಸುಂದರ್