No menu items!
12.1 C
Munich
Saturday, May 2, 2026

ಕರ್ನಾಟಕದ ಕ್ರಶ್​ಗೆ ಐಟಿ ಶಾಕ್ – ಇಲ್ಲಿದೆ ದಾಳಿ ಹಿಂದಿನ ಸತ್ಯ!

Must read

ರಶ್ಮಿಕಾ ಮಂದಣ್ಣ.. ಕರ್ನಾಟಕದ ಕ್ರಶ್. ಚಂದದ ನಗುವಿನ ಮೂಲಕ ಮನಸೂರೆಗೊಳ್ಳುವ ಬೆಡಗಿ. ಚಂದನವನದ ಚೆಂದುಳ್ಳಿಗೆ ಇಂದು ತೆಲುಗಿನ ಟಾಪ್ ಹೀರೋಯಿನ್ ಕೂಡ! ಬೇರೆ ಬೇರೆ ಭಾಷೆಗಳಿಂದ ಆಫರ್​ಗಳ ಸುರಿಮಳೆ ಸುರಿಯತ್ತಿವೆ, ಇದೀಗ ಈ ಕೊಡಗಿನ ಬೆಡಗಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಗುರುವಾರ ಬೆಳ್ಳಂಬೆಳಗ್ಗೆ 3 ವಾಹನಗಳಲ್ಲಿ ಆಗಮಿಸಿದ 10 ಅಧಿಕಾರಿಗಳು ಕೊಡಗಿನ ಬೆಡಗಿಯ ವಿರಾಜಪೇಟೆ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ಹೈದರಾಬಾದ್​ನಲ್ಲಿ ರಶ್ಮಿಕಾ ಇದ್ದು, ಕೂಡಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಿರಿಕ್ ಪಾರ್ಟಿ ಸಿನಿಮಾ ಮೂಲಕ 2016ರಲ್ಲಿ ಸಿನಿ ಜರ್ನಿ ಆರಂಭಿಸಿದ ರಶ್ಮಿಕಾ ಟಾಲಿವುಡ್​ನಲ್ಲೂ ಮಿಂಚುತ್ತಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article