ನಿನ್ನೆ ನಡೆದ ಚೆನ್ನೈ ಮತ್ತು ಬೆಂಗಳೂರು ಪಂದ್ಯದಲ್ಲಿ ಆರ್ಸಿಬಿ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 1 ರನ್ ನಿಂದ ಮಣಿಸಿ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು ಆದರೆ ಪಂದ್ಯದ ಕೊನೆಯ ಎಸೆತಗಳಲ್ಲಿ ಚೆನ್ನೈ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಒಂಟಿ ರನ್ ಕದಿಯಲು ನಿರಾಕರಿಸಿದ್ದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು.

ಕ್ರಿಕೆಟ್ ಪಂಡಿತರಂತೂ ಧೋನಿ ಆ 3 ಒಂಟಿ ರನ್ ಗಳನ್ನು ಗಳಿಸಿದ್ದಾರೆ ಪಂದ್ಯ ಚೆನ್ನೈ ಪಾಲಾಗುತ್ತಿತ್ತು ಎಂದು ವಿಶ್ಲೇಷಣೆಯನ್ನು ಮಾಡಿದರು ಆದರೆ ಇದಕ್ಕೆಲ್ಲ ಇದೀಗ ಧೋನಿ ಸ್ವತಹ ಉತ್ತರ ನೀಡಿದ್ದಾರೆ.

ಏಕಾಂಗಿಯಾಗಿ ಇಡೀ ಪಂದ್ಯದ ಜವಾಬ್ದಾರಿಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಧೋನಿ ಒಂದು ಕಡೆ ವಿಕೆಟ್ಗಳು ಉರುಳುತ್ತಿದ್ದರೂ ಮತ್ತೊಂದು ಕಡೆ ಗಟ್ಟಿಯಾಗಿ ಸ್ಕ್ರೀಜ್ ನಲ್ಲಿ ನಿಂತು ಹೋರಾಡುತ್ತಿದ್ದರು ಗೆಲ್ಲಲು ಸಾಧ್ಯವೇ ಇಲ್ಲ ಎನ್ನುವ ಸಂದರ್ಭದಲ್ಲಿ ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳದ ಧೋನಿ ಬ್ಯಾಟ್ ಬೀಸುತ್ತಿದ್ದರು.

ಪಂದ್ಯದ ಬಳಿಕ ಮಾತನಾಡಿದ ಧೋನಿ ಪಂದ್ಯದಲ್ಲಿ ಹೆಚ್ಚು ರನ್ ಬೇಕಾಗಿರುವುದರಿಂದ ಸ್ಟ್ರೈಕ್ ನಲ್ಲಿ ನಾನೇ ಇರಲು ನಿರ್ಧರಿಸಿದ್ದೆ ಯಾಕಂದ್ರೆ ಅಂತಹ ಸಂದರ್ಭದಲ್ಲಿ ಹೊಸ ಬ್ಯಾಟ್ಸ್ಮನ್ ಗೆ ಕ್ರಿಸ್ ಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ ಅದರಿಂದ ಕೆಲವು ಎಸೆತಗಳು ಕೂಡ ವ್ಯರ್ಥವಾಗುವ ಸಂಭವವಿರುತ್ತದೆ ಆದ್ದರಿಂದ ಆ ಜವಾಬ್ದಾರಿಯನ್ನು ನಾನೇ ತೆಗೆದುಕೊಂಡೆ, ಒಮ್ಮೆ ಬ್ಯಾಟ್ಸ್ ಮ್ಯಾನ್ ಆಡುತ್ತಿದ್ದರೆ ತಂಡದ ಗೆಲುವಿಗಾಗಿ ಮಾತ್ರ ಚಿಂತಿಸುತ್ತಾ ಬ್ಯಾಟ್ ಬೀಸುತ್ತಾನೆ ನಾನು ಕೂಡ ಅದನ್ನೇ ಮಾಡಿದೆ ಎಂದು ಧೋನಿ ಹೇಳಿದ್ದಾರೆ.

ಕೊನೆಯ ಓವರ್ ನಲ್ಲಿ ಉಮೇಶ್ ಯಾದವ್ ಎಸೆದ ಮೊದಲ ಎಸೆತವನ್ನು ಧೋನಿ ಬೌಂಡರಿಗೆ ಅಟ್ಟಿದರು ನಂತರದ ಎರಡು ಎತ್ತುಗಳನ್ನು ಸಿಕ್ಸರ್ ಗೆ ಅಟ್ಟಿದ್ದರು, ನಾಲ್ಕನೆಯ ಎಸೆತದಲ್ಲಿ 2 ರನ್ ಓದಿದ ಧೋನಿ ಐದನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿದರು, ಕೊನೆಯ ಎಸೆತದಲ್ಲಿ ಚೆನ್ನೈ ಗೆಲ್ಲಲು 2 ಬೇಕಿತ್ತು ಧೋನಿ ಸ್ಟ್ರೈಕ್ ನಲ್ಲಿ ಇದ್ದ ಕಾರಣ ಚೆನ್ನೈ ಪಂದ್ಯ ಗೆಲ್ಲುತ್ತದೆ ಎನ್ನುವ ನಿರೀಕ್ಷೆಯಿತ್ತು

ಆದರೆ ಕೊನೆಯ ಎಸೆತ ಬ್ಯಾಟ್ ಗೆ ಸಿಗದೆ ಬಾಲ್ ಕೀಪರ್ ಪಾರ್ಥಿವ್ ಪಟೇಲ್ ಕೈಗೆ ಸಿಕ್ಕಿತ್ತು ಆದರೂ ಒಂದು ರನ್ ಓಡಲು ಪ್ರಯತ್ನಿಸುತ್ತಿದ್ದಾಗ ಪಾರ್ಥಿವ್ ಪಟೇಲ್ ರನ್ ಔಟ್ ಮಾಡಿದ್ರು ಈ ಮೂಲಕ ಬೆಂಗಳೂರು ತಂಡ 1ರನ್ ನಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.






