ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ಎರಡು ವಿಶ್ವಕಪ್ ತಂದುಕೊಟ್ಟ ನಾಯಕ. ಇಡೀ ವಿಶ್ವವೇ ಕೊಂಡಾಡುವ ಕೂಲ್ ಕ್ಯಾಪ್ಟನ್. ಎಂಥಾ ಕಠಿಣ ಸ್ಥಿತಿಯಲ್ಲೂ ತಾಳ್ಮೆ ಕಳೆದುಕೊಳ್ಳದ ಆಟಗಾರ. ಭಾರತಕ್ಕೆ ಎರಡು ವಿಶ್ವಕಪ್ ಮಾತ್ರವಲ್ಲದೆ, ಎರಡು ಬಾರಿ ಏಷ್ಯಾಕಪ್, ಚಾಂಪಿಯನ್ ಟ್ರೋಪಿ ತಂದು ಕೊಟ್ಟ ಕ್ಯಾಪ್ಟನ್.
ಇಂದು ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾದಲ್ಲೂ ಧೋನಿ ಪಾತ್ರ ಬಹು ಮುಖ್ಯವಾಗಿದೆ. ಕೊಹ್ಲಿ ನಾಯಕತ್ವದ ಹಿಂದಿನ ಶಕ್ತಿಯೂ ಇದೇ ಧೋನಿ. ವಿಶ್ವಕಪ್ ಬಳಿಕ ಎಲ್ಲರ ಪ್ರೀತಿಯ ಮಾಹಿ.. ಇಂಟರ್ನ್ಯಾಷನಲ್ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಧೋನಿ ಯಾವುದೇ ಸಂದರ್ಭದಲ್ಲೂ ನಿವೃತ್ತಿ ಘೋಷಿಸಿದರೂ ಅಚ್ಚರಿಯಿಲ್ಲ ಎಂಬ ಮಾತಿಗಳು ಈಗಲೂ ಕೇಳಿ ಬರುತ್ತಿದೆ.
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಕೂಡ ಧೋನಿ ನಿವೃತ್ತಿ ಬಗ್ಗೆ ಪ್ರತಿಕ್ರಿಯೆ ನೀಡಿ, ಯಾರೂ ಕೂಡ ಧೋನಿಗೆ ಒತ್ತಡ ಹೇರಬಾರದು ಎಂದು ಹೇಳಿದ್ದರು ಈಗ ಗಾನ ಕೋಗಿಲೆ ಲಂತಾ ಮಂಗೇಶ್ಕರ್ ಕೂಡ ಟ್ವೀಟ್ ಮಾಡುವ ಮೂಲಕ ಧೋನಿ ನಿವೃತ್ತಿ ಕುರಿತು ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ.
ನಮಸ್ಕಾರ ಧೋನಿ, ನೀವು ನಿವೃತ್ತಿ ಆಗಬೇಕೆಂದು ಯೋಚನೆ ಮಾಡಿದ್ದೀರಿ ಎಂಬ ಮಾತುಗಳು ಕೇಳಿಬಂದಿವೆ. ಆ ರೀತಿ ನೀವು ಯೋಚಿಸಬೇಡಿ. ದೇಶಕ್ಕೆ ನಿಮ್ಮ ಆಟದ ಅವಶ್ಯಕತೆ ಇನ್ನೂ ಇದೆ. ನೀವು ಮನಸ್ಸಿನಲ್ಲಿ ಯಾವುದೇ ಕಾರಣಕ್ಕೂ ನಿವೃತ್ತಿ ವಿಚಾರವನ್ನು ಇಟ್ಟುಕೊಳ್ಳಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದು ಲತಾ ಮಂಗೇಶ್ಕರ್ ಟ್ವೀಟ್ ಮಾಡಿದ್ದಾರೆ.
ಇನ್ನು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ನಿವೃತ್ತರಾದಗಲೂ ಗಾನ ಕೋಗಿಲೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ರು. ಚಿನ್ ಇನ್ನೂ ಹಲವು ದಶಕಗಳವರೆಗೆ ಕ್ರಿಕೆಟ್ ಆಡಬೇಕೆಂಬುದು ನನ್ನ ಆಸೆ ಎಂದಿದ್ದರು.