ಧೋನಿ ರೆಕಾರ್ಡ್ ಬ್ರೇಕ್ ಮಾಡಲು ಕೊಹ್ಲಿ ರೆಡಿ!

Date:

ಭಾರತ ಟೆಸ್ಟ್‌ ತಂಡದ ಅತ್ಯಂತ ಯಶಸ್ವಿ ನಾಯಕರು ಯಾರೆಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಅಂದ ಹಾಗೆ, ಭಾರತೀಯ ಕ್ರಿಕೆಟ್‌ ಇತಿಹಾಸದಲ್ಲಿಯೇ ಎಂಎಸ್ ಧೋನಿ‌ ನಾಯಕತ್ವದಲ್ಲಿ ಟೀಮ್‌ ಇಂಡಿಯಾ ಮೊಟ್ಟ ಮೊದಲ ಬಾರಿ ಐಸಿಸಿ ಟೆಸ್ಟ್‌ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಿತ್ತು. ಆ ಮೂಲಕ ಭಾರತೀಯ ಟೆಸ್ಟ್ ಕ್ರಿಕೆಟ್‌ಗೆ ಜಾಗತಿಕ ಮಟ್ಟದಲ್ಲಿ ಧೋನಿ ಅತ್ಯುತ್ತಮ ಸ್ಥಾನಮಾನ ತಂದುಕೊಟ್ಟಿದ್ದರು.

21ನೇ ಪಂದ್ಯದ ಗೆಲುವಿನೊಂದಿಗೆ ಕೊಹ್ಲಿ, ತವರು ನೆಲದಲ್ಲಿ ಭಾರತ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕರ ಪಟ್ಟಿಯಲ್ಲಿ ಮಹೇಂದ್ರ ಸಿಂಗ್‌ ಧೋನಿಯೊಂದಿಗೆ ಜಂಟಿ ದಾಖಲೆ ಮಾಡಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ 21 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದು, ಮೂರು ಹಣಾಹಣಿಗಳಲ್ಲಿ ಸೋತಿದೆ ಹಾಗೂ ಇನ್ನುಳಿದ ಆರು ಪಂದ್ಯಗಳಲ್ಲಿ ಡ್ರಾ ಮಾಡಿಕೊಂಡಿದೆ. ಆ ಮೂಲಕ ತವರು ನೆಲದಲ್ಲಿನ ಧೋನಿ ಸಕ್ಸಸ್‌ ರೇಟ್‌ ಶೇ. 70 ರಷ್ಟಿದೆ.

ಇನ್ನು, ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ, ತವರು ನೆಲದಲ್ಲಿ ಆಡಿದ ಒಟ್ಟು 28 ಪಂದ್ಯಗಳಲ್ಲಿ ಕೇವಲ ಎರಡರಲ್ಲಿ ಸೋಲು ಕಂಡಿದ್ದು, ಐದು ಡ್ರಾನಲ್ಲಿ ಅಂತ್ಯ ಕಂಡಿವೆ. ಕಿಂಗ್‌ ಕೊಹ್ಲಿ ಟೆಸ್ಟ್‌ ನಾಯಕತ್ವದ ಸಕ್ಸಸ್‌ ರೇಟ್‌ ಶೇ. 77.8 ರಷ್ಟಿದೆ.

ಫೆಬ್ರುವರಿ 24 ರಿಂದ ಆರಂಭವಾಗುವ ಇಂಗ್ಲೆಂಡ್‌ ವಿರುದ್ಧದ ಮೂರನೇ ಹಾಗೂ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯದಲ್ಲಿ ಭಾರತ ಗೆದ್ದರೆ, ವಿರಾಟ್‌ ಕೊಹ್ಲಿ ತವರು ನೆಲದಲ್ಲಿ ರಾಷ್ಟ್ರೀಯ ಟೆಸ್ಟ್ ತಂಡದ ಅತ್ಯಂತ ಯಶಸ್ವಿ ನಾಯಕರಾಗುವ ಮೂಲಕ ಧೋನಿಯನ್ನು ಹಿಂದಿಕ್ಕಲ್ಲಿದ್ದಾರೆ.

ಇನ್ನುಳಿದಂತೆ ಭಾರತ ಟೆಸ್ಟ್ ತಂಡದ ಮಾಜಿ ನಾಯಕರಾದ ಮೊಹಮ್ಮದ್‌ ಅಝರುದ್ದೀನ್‌ ಶೇ. 65, ಸೌರವ್‌ ಗಂಗೂಲಿ ಶೇ.47.65 ಹಾಗೂ ಸುನೀಲ್‌ ಗವಾಸ್ಕರ್‌ ಶೇ.24.1 ರಷ್ಟು ತವರು ನೆಲದಲ್ಲಿ ಯಶಸ್ಸು ಕಂಡಿದ್ದಾರೆ.

ಮತ್ತೊಂದೆಡೆ ತವರು ನೆಲದಲ್ಲಿ 3,703 ಟೆಸ್ಟ್ ರನ್‌ ಗಳಿಸಿರುವ ವಿರಾಟ್‌ ಕೊಹ್ಲಿ, ಮುಂದಿನ ಪಂದ್ಯದಲ್ಲಿ 23 ರನ್‌ ಗಳಿಸಿದರೆ, ಮಾಜಿ ಆಟಗಾರ ದಿಲೀಪ್ ವೆಂಗ್‌ಸಂರ್ಕಾರ್‌ ಅವರನ್ನು ಹಿಂದಿಕ್ಕಲಿದ್ದಾರೆ. ಆ ಮೂಲಕ ಭಾರತದಲ್ಲಿ ಅತಿ ಹೆಚ್ಚು ಟೆಸ್ಟ್‌ ರನ್‌ಗಳಿಸಿದ ಆರನೇ ಬ್ಯಾಟ್ಸ್‌ಮನ್‌ ಎಂಬ ದಾಖಲೆಗೆ ಟೀಮ್‌ ಇಂಡಿಯಾ ನಾಯಕ ಭಾಜನರಾಗಲಿದ್ದಾರೆ.

ತವರು ನೆಲದಲ್ಲಿ ಇಂಗ್ಲೆಂಡ್‌ ವಿರುದ್ಧ 1000 ರನ್‌ ಗಳಿಸಲು ವಿರಾಟ್‌ ಕೊಹ್ಲಿ ಹಾಗೂ ಚೇತೇಶ್ವರ್‌ ಪೂಜಾರ ಅವರಿಗೆ ಕ್ರಮವಾಗಿ 12 ಮತ್ತು 45 ರನ್ ಅಗತ್ಯವಿದೆ. ಮುಂದಿನ ಪಂದ್ಯದಲ್ಲಿಇವರಿಬ್ಬರು ಇಷ್ಟು ರನ್‌ ಕಲೆ ಹಾಕಿದರೆ, ಈ ಸಾಧನೆ ಮಾಡಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್‌ಗಳು ಎಂಬ ದಾಖಲೆಗೆ ಇವರಿಬ್ಬರೂ ಜಂಟಿಯಾಗಿ ಭಾಜನರಾಗಲಿದ್ದಾರೆ. ಸುನೀಲ್‌ ಗವಾಸ್ಕರ್‌(1331) ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೆ, ಗುಂಡಪ್ಪ ವಿಶ್ವನಾಥ್‌ (1022) ಎರಡನೇ ಸ್ಥಾನದಲ್ಲಿದ್ದಾರೆ.

 

Share post:

Subscribe

spot_imgspot_img

Popular

More like this
Related

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ ಹೆಚ್ಚಳ

LPG Price Hike: ಹೊಸ ವರ್ಷಕ್ಕೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಭಾರೀ...

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ

ಕರ್ನಾಟಕದಲ್ಲಿ ಚಳಿ ಜೋರಾಗಿದೆ: ಬೀದರ್‌ನಲ್ಲಿ 6.4 ಡಿಗ್ರಿ, ಬೆಂಗಳೂರಿನಲ್ಲಿ ಮೋಡ–ತಂಪು ವಾತಾವರಣ ಬೆಂಗಳೂರು:...

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್ ಬಡ್ತಿ, 20 ಮಂದಿಗೆ ವರ್ಗಾವಣೆ

ಪೊಲೀಸ್ ಇಲಾಖೆಗೆ ಸರ್ಕಾರದಿಂದ ಭಾರಿ ಬದಲಾವಣೆ: ಡಿಐಜಿಪಿ ಹುದ್ದೆಗೆ 23 ಐಪಿಎಸ್...

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು

ಬ್ರಹ್ಮ ಮುಹೂರ್ತದಲ್ಲಿ ಏಳುವುದರಿಂದ ಸಿಗುವ ಅದ್ಭುತ ಆರೋಗ್ಯ ಮತ್ತು ಮಾನಸಿಕ ಪ್ರಯೋಜನಗಳು ರಾತ್ರಿ...