ಧ್ಯಾನ ಮಾಡುವುದು ಹೇಗೆ?

Date:

“ತತ್ರ ಪ್ರತ್ಯಯ ಏಕತಾನತ ಇತಿ ಧ್ಯಾನಮ್ ” ಅರ್ಥಾತ್ ಯಾವುದೇ ಒಂದು ವಿಷಯದ ಬಗ್ಗೆ ಯಾವುದೇ ಅಡೆತಡೆ ಇಲ್ಲದೆ ನಿರಂತರವಾಗಿ ಮನಸ್ಸನ್ನು ಪ್ರವಹಿಸುವುದೇ ಧ್ಯಾನ. ಮನಸ್ಸು ಎಂಬುದು ಲಗಾಮು ಇಲ್ಲದ ಹುಚ್ಚು ಕುದುರೆಯ ತರಹ ಎಲ್ಲೆಂದರಲ್ಲಿ ಯಾವಾಗೆಂದರೆ ಆವಾಗ ಓಡುತ್ತಾ ಇರುವುದೇ ಮನಸ್ಸಿನ ಬುದ್ಧಿ ಈ ಲಗಾಮು ಇಲ್ಲದ ಕುದುರೆ ಹೇಗೆ ಅನಾಹುತವನ್ನು ಸೃಷ್ಟಿಸುತ್ತದೆಯೋ, ನಿಯಂತ್ರಣ ಇಲ್ಲದ ಮನಸ್ಸು ನಮ್ಮ ದೇಹಕ್ಕೆ ಅನೇಕ ತರಹದ ಅಪಾಯ ಉಂಟುಮಾಡುತ್ತದೆ. ನಮ್ಮ ದೇಹದಲ್ಲಾಗುವ 80% ಕಾಯಿಲೆ ಗಳಿಗೆ ಮನಸ್ಸೇ ಮೂಲ ಕಾರಣವಾಗಿದೆ . ಸಮಸ್ಯೆಯಿದ್ದಲ್ಲಿ ಅದಕ್ಕೊಂದು ಪರಿಹಾರವೂ ಇದೆ ಎಂಬಂತೆ ನಮ್ಮ ಪತಂಜಲಿ ಮುನಿಗಳು ಈ ನಮ್ಮ ಹುಚ್ಚು ಮನಸ್ಸಿಗೆ ಕಡಿವಾಣ ಹಾಕುವುದು ಧಾರಣ ಧ್ಯಾನಗಳಿಂದ ಹೇಗೆ ಸಾಧ್ಯ ಎಂಬುದಾಗಿ ಅಷ್ಟಾಂಗ ಯೋಗದಲ್ಲಿ ವಿವರಿಸಿದ್ದಾರೆ. ಮೊದಲಿಗೆ ಧಾರಣ ಆಮೇಲೆ ಧ್ಯಾನ. ಮನಸ್ಸನ್ನು ಒಂದು ವಿಷಯದತ್ತ ಕೇಂದ್ರೀಕರಿಸು ವಂತೆ ಮಾಡುವುದು ಧಾರಣ ವಾದರೆ , ನಿರಂತರವಾಗಿ ಯಾವುದೇ ಅಡೆತಡೆಗಳಿಲ್ಲದೆ ಮನಸ್ಸನ್ನು ಒಂದೇ ವಿಷಯದ ಬಗ್ಗೆ ಕೇಂದ್ರೀಕರಿಸುವುದೇ ಧ್ಯಾನ . ಮಕ್ಕಳಿಂದ ಆರಂಭಿಸಿ ವಯಸ್ಕರವರೆಗೂ ಯಾರೂ ಧ್ಯಾನವನ್ನು ಮಾಡಬಹುದು. ವಿಶೇಷವಾಗಿ ಮಕ್ಕಳಲ್ಲಿ ಏಕಾಗ್ರಚಿತ್ತತೆಗೆ ನೆನಪುಶಕ್ತಿಗೆ ಧ್ಯಾನ ತುಂಬಾ ಸಹಾಯಕಾರಿ.. ಬನ್ನಿ ಆರಂಭಿಕ ಹಂತದಲ್ಲಿ ಧ್ಯಾನವನ್ನು ಹೇಗೆ ಮಾಡಬಹುದೆಂದು ಈ ಪುಟ್ಟ ವಿಡಿಯೋವನ್ನು ನೋಡಿ ತಿಳಿಯೋಣ..

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...