ನಟ ಶಾರುಖ್ ಖಾನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಯಾವ ಸಿನಿಮಾವು ಅಷ್ಟು ಯಶಸ್ಸು ತಂದುಕೊಡಲಿಲ್ಲ. ಈ ನಡುವೆ ಅವರು ಬೇರೆ ಬೇರೆ ಕೆಲಸಗಳಲ್ಲಿ ಭಾಗಿಯಾಗುತ್ತಿದ್ದಾರೆ, ಅಭಿಮಾನಿಗಳನ್ನು ಭೇಟಿ ಮಾಡುತ್ತಿರುತ್ತಾರೆ. ಶಾರುಖ್ ಖಾನ್ ಅವರ ‘ಮೀರಾ ಫೌಂಡೇಶನ್’ ಆಸಿಡ್ ಸಂತ್ರಸ್ಥರಿಗೆ ಅವರ ಚಿಕಿತ್ಸೆಗೆ, ಸರ್ಜರಿಗೆ, ಉದ್ಯೋಗ ನೀಡಲು ಸಹಾಯ ಮಾಡುವುದು.
ಶಾರುಖ್ ಖಾನ್ ಬಿಡುವು ಮಾಡಿಕೊಂಡು ಆಸಿಡ್ ಸಂತ್ರಸ್ಥರ ಜೊತೆ ಚರ್ಚೆ ಮಾಡಿದ್ದಾರೆ. ಅವರ ಆರೋಗ್ಯ, ಕೆಲಸದ ಬಗ್ಗೆ ಶಾರುಖ್ ಪ್ರಶ್ನೆ ಮಾಡಿದ್ದಾರೆ, ಅವರಿಗಾಗಿ ಹಾಡು ಕೂಡ ಹಾಡಿದ್ದಾರೆ. ಈಗಾಗಲೇ ತಾಯಿಯಾಗಿರುವ ಓರ್ವ ಮಹಿಳೆಗೆ ಮಗಳಿಗೆ ಏನು ಹೆಸರಿಟ್ಟಿರಿ ಅಂತ ಪ್ರಶ್ನೆ ಮಾಡಿದ್ದಾರೆ. ಇನ್ನು ಶೀಘ್ರದಲ್ಲಿಯೇ ತಾಯಿಯಾಗಲಿರುವ ಇನ್ನೊಂದು ಮಹಿಳೆಗೆ ಮಗುವಿಗೆ ಹೆಸರು ಇಡಲು ಸಹಾಯ ಮಾಡೋದಾಗಿ ಶಾರುಖ್ ಹೇಳಿದ್ದಾರೆ.

ಉಳಿದ ಮಹಿಳೆಯರು ಕೂಡ ಈ ರೀತಿ ಅವಕಾಶಕ್ಕಾಗಿ ಸರದಿಯಲ್ಲಿ ಇರುತ್ತಾರೆ ಎಂದು ಹೇಳಿದಾಗ ಉತ್ತರ ನೀಡಿದ ಶಾರುಖ್ “ನನಗೆ ಈಗ ಕೆಲಸ ಇಲ್ಲ, ಇದರಿಂದ ಸ್ವಲ್ಪ ಕೆಲಸವಾದರೂ ಸಿಗ್ತು” ಎಂದು ಜೋಕ್ ಮಾಡಿದ್ದಾರೆ. ಈ ವಿಡಿಯೋ ಚಾಟ್‌ನ್ನು ಶೇರ್ ಮಾಡಿಕೊಂಡು ಶಾರುಖ್ “ಈ ಮಹಿಳೆಯನ್ನು ಭೇಟಿಯಾಗಲು ಉತ್ಸುಕನಾಗಿದ್ದೇನೆ. ಮೀರಾ ಫೌಂಡೇಶನ್ ಬಗ್ಗೆ ಖುಷಿಯಿದೆ. ಆದಷ್ಟು ಬೇಗ ಸಿಗೋಣ. ಎಲ್ಲರೂ ಸುರಕ್ಷತೆಯಿಂದಿರಿ” ಎಂದು ಟ್ವೀಟ್ ಮಾಡಿದ್ದಾರೆ.
ಆಸಿಡ್ ಸಂತ್ರಸ್ಥೆಯೊಬ್ಬರು ಆಸಿಡ್ ಅಟ್ಯಾಕ್‌ಗೆ ಒಳಗಾದಾಗ ಕಣ್ಣು ಕಳೆದುಕೊಂಡಿದ್ದರು. ಇನ್ನು ಅವರು ಸದಾ ಶಾರುಖ್ ಖಾನ್ ಹಾಡುಗಳನ್ನು ಕೇಳುತ್ತಿರುತ್ತಾರಂತೆ. ಹೀಗಾಗಿ ಶಾರುಖ್ ಅವರಿಗಾಗಿ ‘ಕಲ್ ಹೋ ನಾ ಹೋ’ ಹಾಡನ್ನು ಹಾಡಿದ್ದರು. ಇನ್ನು ದೀಪಿಕಾ ಪಡುಕೋಣೆ ಜೊತೆಗೆ ‘ಪಠಾಣ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 2018ರಲ್ಲಿ ತೆರೆಕಂಡ ‘ಜೀರೋ’ ಸಿನಿಮಾ ಅವರಿಗೆ ದೊಡ್ಡ ಯಶಸ್ಸು ನೀಡಿರಲಿಲ್ಲ. ಇದಾದ 2 ವರ್ಷಗಳ ನಂತರದಲ್ಲಿ ಅವರು ‘ಪಠಾಣ್’ ಸಿನಿಮಾ ಒಪ್ಪಿಕೊಂಡಿದ್ದಾರೆ.






