ಸತತ ಹತ್ತು ವರ್ಷಗಳ ಕಾಲ ಸೌತ್ ಸಿನಿಮಾ ರಂಗದಲ್ಲಿ ತಮ್ಮನ್ನ ತೊಡಗಿಸಿಕೊಂಡು, ವಿವಿಧ ರೀತಿಯ ಪಾತ್ರಗಳಲ್ಲಿ ಮಿಂಚಿದ ಮುದ್ದು ಮೊಗದ ಚೆಲುವೆ ನಟಿ ಸಮಂತಾ ಅಕ್ಕಿನೇನಿ.
ತಮ್ಮ ಮನೋಜ್ಞ ಅಭಿನಯದಿಂದ ಅಪಾರ ಅಭಿಮಾನಿಗಳನ್ನ ಗಳಿಸಿದವರು ಸಮಂತಾ. ಅಷ್ಟೇ ಅಲ್ಲದೇ ಟಾಲಿವುಡ್ ಅಂಗಳದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಸಮಂತಾ ಕೂಡಾ ಒಬ್ಬರು. ಈ ಬ್ಯೂಟಿಫುಲ್ ಬೆಡಗಿಗೆ ಅಭಿಮಾನಿಗಳು ಹೆಚ್ಚು. ಆದರೀಗ ಸಮಂತಾ ಅಭಿಮಾನಿಗಳಿಗೆ ಶಾಕಿಂಗ್ ನ್ಯೂಸ್ ಕಾದಿದೆ. ಸಮಂತಾ ಅಭಿನಯಕ್ಕೆ ಗುಡ್ ಬೈ ಹೇಳಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.
ಸದ್ಯ ಎರಡು ಬಿಗ್ ಪ್ರಾಜೆಕ್ಟ್ ನಲ್ಲಿ ತೊಡಗಿಸಿಕೊಂಡಿದ್ದು, ಆ ಎರಡು ಪ್ರಾಜೆಕ್ಟ್ ನ ನಂತರ ಅಭಿನಯಕ್ಕೆ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿ ಹರಿದಾಡ್ತಿದೆ.
ಟಾಲಿವುಡ್ ನಲ್ಲಿ ಬಹುಬೇಡಿಕೆಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಸಮಂತ. ಇದೀಗ ನಟನೆಗೆ ಗುಡ್ ಬೈ ಹೇಳಿದ್ದಾರೆ ಅನ್ನೋ ಸುದ್ದಿ ವೈರಲ್ ಆಗಿದೆ. ಎಸ್, ಸಮಂತಾ ನಟನೆ ನಿಲ್ಲಿಸಲು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಜೋರಾಗಿಯೇ ಹರಿದಾಡ್ತಿದೆ. ಸಮಂತಾಮದುವೆಯ ಬಳಿಕವೂ ಸಾಕಷ್ಟು ಆಫರ್ ಗಳನ್ನ ತಮ್ಮದಾಗಿಸಿಕೊಂಡು, ಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇವ್ರ ಅಭಿನಯವನ್ನ ನೋಡಲು ಕಾತುರದಿಂದ ಕಾಯ್ತಿರೋ ಅಭಿಮಾನಿಗಳಿಗೆ ಅಘಾತಕಾರಿ ಸುದ್ದಿ ಹೊರಬಿದ್ದಿದೆ.
ಅಂದಹಾಗೆ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿರುವ ಸಮಂತಾ ನಟನೆ ನಿಲ್ಲಿಸುತ್ತಾರಾ ಎನ್ನುವ ಆತಂಕ ಅಭಿಮಾನಿಗಳನ್ನು ಕಾಡುತ್ತಿದೆ. ಜೊತೆಗೆ ಸಮಂತಾ ಅಭಿನಯಕ್ಕೆ ಗುಡ್ ಬೈ ಹೇಳಿ ಏನು ಮಾಡುತ್ತಾರೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಸಮಂತಾ ನಟನೆಯಿಂದ ದೂರ ಇರುತ್ತಾರೆ, ಆದರೆ ಸಿನಿಮಾರಂಗದಲ್ಲಿಯೇ ಸಕ್ರೀಯರಾಗಿರುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅಂದರೆ ಸಮಂತಾ ನಿರ್ಮಾಣದ ಕಡೆ ಹೆಚ್ಚು ಗಮನ ಹರಿಸಲು ನಿರ್ಧರಿಸಿದ್ದಾರಂತೆ.
ಈಗಾಗಲೇ ಅಕ್ಕಿನೇನಿ ಕುಂಟುಂಬ ಅನ್ನಪೂರ್ಣ ಬ್ಯಾನರ್ ಇದೆ. ಇದನ್ನೆ ಸಮಂತಾ ನೋಡಿಕೊಳ್ಳುತ್ತಾರಾ..? ಅಥವಾ ಹೊಸ ಬ್ಯಾನರ್ ಲಾಂಚ್ ಮಾಡುತ್ತಾರಾ..? ಎನ್ನುವುದು ಅಧಿಕೃತವಾಗಿಲ್ಲ. ಆದರೆ ಮೂಲಗಳ ಪ್ರಕಾರ ಸಮಂತಾ ಮತ್ತು ನಾಗಚೈತನ್ಯ ಹೊಸ ಬ್ಯಾನರ್ ಲಾಂಚ್ ಮಾಡುವ ಪ್ಲಾನ್ ಮಾಡಿದ್ದಾರಂತೆ. ಬಳಿಕ ಸಮಂತಾ ಸಂಪೂರ್ಣವಾಗಿ ನಿರ್ಮಾಣದ ಕಡೆ ಗಮನ ಹರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆಯೂ ಕೂಡಾ ಸಮಂತಾ ನಟನೆಯನ್ನ ತ್ಯಜಿಸುತ್ತಾರೆ ಅನ್ನೋ ಸುದ್ದಿಗಳು ಹರಿದಾಡಿದ್ವು. ಇದೀಗ ಈ ಸುದ್ದಿ ಹರಿದಾಡಲು ಮುಖ್ಯ ಕಾರಣ ಸಮಂತ ತಮಿಳಿನ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಈ ಸಿನಿಮಾದ ನಂತರ ಮತ್ತೆ ಯಾವ ಸಿನಿಮಾನೂ ಅನೌನ್ಸ್ ಆಗಿಲ್ಲ. ಅವೆರಡೂ ಸಿನಿಮಾ ಪೂರ್ಣಗೊಂಡ ಬಳಿಕ ಸಮಂತಾ ಬಣ್ಣ ಹಚ್ಚುವುದಿಲ್ಲ ಅಂತನ್ನೋ ಮಾತುಗಳು ಕೇಳಿ ಬರುತ್ತಿದ್ದು, ಈ ಬಗ್ಗೆ ನಟಿ ಸಮಂತಾ ಇಂದ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ.
ನಟಿ ಸಮಂತಾ ಎ ಮಾಯೆ ಚೆಸಾವೆ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ದು, ಈ ಚಿತ್ರದಲ್ಲಿ ಪತಿ ನಾಗಚೈತನ್ಯ ಜೊತೆ ತೆರೆ ಹಂಚಿಕೊಂಡಿದ್ದರು. ನಂತರ ಮಾಡಿದ ಆಲ್ ಮೋಸ್ಟ್ ಸಿನಿಮಾಗಳು ಸಕ್ಸಸ್ ಕಂಡಿವೆ. ಇನ್ನು ಸಮಂತಾ ಕೊನೆಯದಾಗಿ ಜಾನು ಸಿನಿಮಾ ಮೂಲಕ ಅಭಿಮಾನಿಗಳನ್ನ ರಂಜಿಸಿದ್ದಾರೆ. ಜಾನು ಸಿನಿಮಾ ಗಲ್ಲಾಪೆಟ್ಟಿಗೆ ಧೂಳೆಬ್ಬಿಸಿದೆ. ಸಮಂತಾ ಮುಂದೆ ಸಿನಿಮಾಗಳಲ್ಲಿ ನಟಿಸ್ತಾರಾ..? ಅಥವಾ ನಿರ್ಮಾಣದಲ್ಲಿ ಮುಂದುವರಿತಾರಾ..? ಅನ್ನೋದನ್ನ ಕಾದು ನೋಡಬೇಕು.