ಬೆಂಗಳೂರು: ನಟ ದರ್ಶನ್ ಅವರು ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿದ್ದಾರೆ. ಕೇಂದ್ರ ಕಾರಾಗೃಹದಲ್ಲಿ ಅವರು ಉಳಿದುಕೊಂಡಿದ್ದಾರೆ. ನಟ ದರ್ಶನ್ ಅವರ ಖೈದಿ ನಂಬರ್ 6106 ಆಗಿದೆ. ಇದೀಗ, 6106 ಸ್ಟಿಕ್ಕರ್‌ಗೆ ಫುಲ್ ಡಿಮ್ಯಾಂಡ್ ಕ್ರಿಯೇಟ್ ಆಗಿದ್ದು, ಮೊಬೈಲ್ ಅಂಗಡಿಗಳ ಮುಂದೆ ಜನರು ಕ್ಯೂ ನಿಂತಿದ್ದಾರೆ. ತಮ್ಮ ಮೊಬೈಲ್ ಕವರ್ ಮಾಡ್ಕೊಂಡ ಫ್ಯಾನ್ಸ್, ಈ ಮೂಲಕ ತಮ್ಮ ಮೆಚ್ಚಿನ ‘ಡಿ ಬಾಸ್;ಗೆ ತಮ್ಮ ಅಭಿಮಾನವನ್ನು ತೋರಿಸುತ್ತಿದ್ದಾರೆ.
ಇದರ ಬೆನ್ನಲ್ಲೇ ನಟನಿಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಘಟನೆ ನಡೆದಿದೆ. ನಟನ ಮೇಲಿನ ಅಂಧಭಿಮಾನ ಎಫೆಕ್ಟ್ʼನಿಂದ ಮಗುವಿಗೆ ಖೈದಿ ಪೋಟೋ ಶೂಟ್ ಮಾಡಿಸಿದ್ದಾರೆ. ಒಂದು ವರ್ಷದ ಮಗುವಿಗೆ ಖೈದಿ ನಂಬರ್, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಪೋಟೋ ಶೂಟ್ ಮಾಡಿಸಿದ್ದಾರೆ. ಹಿಂದೆಲ್ಲ ಮಕ್ಕಳಿಗೆ ಕೃಷ್ಣನ ವೇಷ, ಸ್ವಾಮಿ ವಿವೇಕಾನಂದರು ವೇಷ, ಅಂಬೇಡ್ಕರ್ ರಂತಹ ಗಣ್ಯ ವ್ಯಕ್ತಿಗಳ ರೀತಿಯ ಪೋಟೋ ಶೂಟ್ ಟ್ರೆಂಡ್ ಆಗಿತ್ತು. ಆದರೆ ಈಗ ಬೆಳೆಯುವ ಮಗುವಿಗೆ ಖೈದಿ ಪೋಟೋಶೂಟ್ ಮಾಡಿಸೋದೆ ಟ್ರೆಂಡ್ ಆಗಿದಿಯಾ ಅನ್ನೋ ಅನುಮಾನ ಕಾಡತೊಡಗಿದೆ.
ನಟನ ಮೇಲಿನ ಹುಚ್ಚು ಅಭಿಮಾನಕ್ಕೆ ಅಭಿಮಾನಿಗಳಿಂದ ನಿತ್ಯ ಒಂದೊಂದು ಹೊಸ ಟ್ರೆಂಡ್ ಶುರುವಾಗಿದ್ದು, ದರ್ಶನ್ ಗೆ ನೀಡಿರುವ ಖೈದಿ ನಂಬರ್ ಹಾಕಿ ಮಗುವಿಗೆ ಅಭಿಮಾನಿ ಪೋಟೋ ಶೂಟ್ ಮಾಡಿದ್ದಾರೆ. ಮಗುವಿಗೆ ಖೈದಿ ಪೊಟೋ ಶೂಟ್ ಮಾಡಿಸಿದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ನಟನ ಮೇಲಿನ ಅಂಧಾಭಿಮಾನ: ಮಗೂಗೆ ಖೈದಿ ನಂಬರ್ ಫೋಟೋ ಶೂಟ್
Date: