ನಟಿ ರಾಕುಲ್‌ ಪ್ರೀತ್‌ ಸಿಂಗ್‌ಗೆ ತಗುಲಿದ ಮಹಾಮಾರಿ ಕೊರೊನಾ!

Date:

ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ಇನ್ನೇನು ತಗ್ಗುತ್ತಿದೆ ಎನ್ನುವಾಗಲೇ ಮತ್ತೆ ಜೋರಾಗುವ ಆತಂಕ ಉಂಟಾಗಿದೆ. ಸದ್ಯ ಲಂಡನ್‌ನಲ್ಲಿ ಕಾಣಿಸಿಕೊಂಡಿರುವ ಕೊರೊನಾದ ಹೊಸ ರೂಪಾಂತರ ವೈರಸ್ ಮತ್ತೆ ತಲ್ಲಣ ಸೃಷ್ಟಿ ಮಾಡಿದೆ. ಇನ್ನು, ಭಾರತದ ಅನೇಕ ಸೆಲೆಬ್ರಿಟಿಗಳಿಗೆ ಕೊರೊನಾ ತಗುಲಿತ್ತು. ಅನೇಕರು ಅದರಿಂದ ಗುಣಮುಖರಾದರೆ, ಕೆಲ ಮಂದಿ ಜೀವ ಕಳೆದುಕೊಂಡರು. ಇದೀಗ ನಟಿ ರಾಕುಲ್ ಪ್ರೀತ್ ಸಿಂಗ್ ಅವರಿಗೂ ಕೂಡ ಕೊರೊನಾ ಪಾಸಿಟಿವ್ ಆಗಿದೆ! ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ರಾಕುಲ್, ‘ಎಲ್ಲರಿಗೂ ನಾನು ತಿಳಿಸುವುದು ಏನೆಂದರೆ, ಕೊರೊನಾ ಪರೀಕ್ಷೆಯಲ್ಲಿ ನನ್ನ ವರದಿ ಪಾಸಿಟಿವ್ ಬಂದಿದೆ. ನಾನು ಸ್ವತಃ ಕ್ವಾರಂಟೈನ್ ಆಗಿದ್ದೇನೆ. ಸದ್ಯ ನಾನು ಆರಾಮಾಗಿದ್ದೇನೆ. ವಿಶ್ರಾಂತಿ ಮಾಡಿ, ಆದಷ್ಟು ಬೇಗ ನಾನು ಶೂಟಿಂಗ್‌ಗೆ ಮರಳುತ್ತೇನೆ. ನನ್ನನ್ನು ಯಾರೆಲ್ಲ ಭೇಟಿಯಾಗಿದ್ದಿರೋ, ಅವರೆಲ್ಲ ದಯವಿಟ್ಟು ಟೆಸ್ಟ್ ಮಾಡಿಸಿಕೊಳ್ಳಿ. ಧನ್ಯವಾದಗಳು. ಎಲ್ಲರೂ ಸುರಕ್ಷಿತವಾಗಿರಿ..’ ಎಂದು ಬರೆದುಕೊಂಡಿದ್ದಾರೆ.
ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ರಾಕುಲ್‌ಗೆ ತಮಿಳು-ತೆಲುಗಿನಲ್ಲಿ ಉತ್ತಮ ಅವಕಾಶಗಳು ಸಿಕ್ಕವು. ಆನಂತರ ಅವರು ಭಾರಿ ಬೇಡಿಕೆಯ ನಟಿಯಾದರು. ಸದ್ಯ ಬಾಲಿವುಡ್‌ನಲ್ಲೂ ಅವರು ಮಿಂಚು ಹರಿಸುತ್ತಿದ್ದಾರೆ. ‘ಮೇ ಡೇ’ ಸಿನಿಮಾಕ್ಕೆ ರಾಕುಲ್ ಆಯ್ಕೆಯಾಗಿದ್ದರು. ಅಜಯ್‌ ದೇವ್‌ಗನ್ ನಟಿಸಿ, ನಿರ್ದೇಶನ ಮಾಡುತ್ತಿರುವ ಈ ಸಿನಿಮಾದ ಮುಹೂರ್ತ ಈಚೆಗಷ್ಟೇ ನೆರವೇರಿತ್ತು. ಅಮಿತಾಭ್‌ ಬಚ್ಚನ್, ‘ಪೈಲ್ವಾನ್‌’ ಖ್ಯಾತಿಯ ಆಕಾಂಕ್ಷಾ ಸಿಂಗ್ ಕೂಡ ಈ ಚಿತ್ರದಲ್ಲಿದ್ದಾರೆ. ಪ್ರಸ್ತುತ ರಾಕುಲ್ ಬತ್ತಳಿಕೆಯಲ್ಲಿ ಹಿಂದಿ, ತಮಿಳು, ತೆಲುಗು ಭಾಷೆಯ 6-7 ಸಿನಿಮಾಗಳಿವೆ. ನಿರ್ದೇಶಕ ಕ್ರಿಷ್ ಅವರ ಹೊಸ ಸಿನಿಮಾ, ‘ಸರ್ದಾರ್ & ಗ್ರ್ಯಾಂಡ್‌ಸನ್‌’, ‘ಇಂಡಿಯನ್ 2’, ‘ಅಯಲಾನ್‌’, ‘ಅಟ್ಯಾಕ್‌’, ‘ಚೆಕ್‌’ ಮುಂತಾದ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಮದುವೆ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು ರಾಕುಲ್. ‘ನಾನು ಮದುವೆ ಆಗುವ ಹುಡುಗನಿಗೆ ಜೀವನದಲ್ಲಿ ಉತ್ಸಾಹ ಮತ್ತು ಉದ್ದೇಶ ಇರಬೇಕು. ನಾನು ಸೈನ್ಯದ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದವಳು. ಆದ್ದರಿಂದ, ಅವನು ಖಂಡಿತವಾಗಿಯೂ ಆರೋಗ್ಯಕರ ಜೀವನಶೈಲಿಯನ್ನು ಆನಂದಿಸುವ ವ್ಯಕ್ತಿಯಾಗಿರಬೇಕು. ನನ್ನ ಮದುವೆಯಲ್ಲಿ ಆಪ್ತರು ಮತ್ತು ಕುಟುಂಬದವರು ಸೇರಿ 100ಕ್ಕಿಂತ ಹೆಚ್ಚು ಜನರು ಇರಬಾರದು. ಮದುವೆ ಎಂಬುದು ಕುಟುಂಬದೊಂದಿಗೆ ಆತ್ಮೀಯ ಸಂಬಂಧವಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮುದ್ರ ತೀರದಲ್ಲಿ ಡೆಸ್ಟಿನೇಷನ್‌ ವೆಡ್ಡಿಂಗ್ ಮಾಡಿಕೊಳ್ಳಲು ನಾನು ಇಷ್ಟಪಡುತ್ತೇನೆ’ ಎಂದು ಅವರು ಹೇಳಿಕೊಂಡಿದ್ದರು.

ಶ್ರೀನಿಧಿ ಶಾಸ್ತ್ರಿ ಸರಿಗಮಪ ಸೀಸನ್ 17ರ ಚಾಂಪಿಯನ್ !

ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ ಸರಿಗಮಪ ಚಾಂಪಿಯನ್ ಆಗಿ ಶ್ರೀನಿಧಿ ಶಾಸ್ತ್ರಿ ಹೊರಹೊಮ್ಮಿದ್ದಾರೆ.

ಸರಿಗಮಪ ಸೀಸನ್ 17ರ ಫೈನಲ್ ನಲ್ಲಿ ಎರಡು ರೌಂಡ್ ಗಳಿದ್ದು ಅದರಲ್ಲಿ ಕಿರಣ್ ಪಾಟೀಲ್ ಮತ್ತು ಶರದಿ ಪಾಟೀಲ್ ಮೊದಲ ರೌಂಡ್ ನಲ್ಲಿ ಎಲಿಮಿನೆಟ್ ಆಗಿದರು. ಇನ್ನು ಫೈನಲ್ ರೌಂಡ್ ಗೆ ಶ್ರೀನಿಧಿ ಶಾಸ್ತ್ರಿ, ಅಶ್ವಿನ್ ಶರ್ಮ ಹಾಗೂ ಕಂಬದ ರಂಗಯ್ಯ ಎಂಟ್ರಿ ಕೊಟ್ಟಿದ್ದರು.

ಫೈನಲ್ ರೌಂಡ್ ನಲ್ಲಿ ಶ್ರೀನಿಧಿ ಶಾಸ್ತ್ರಿ ಆಡಿಯೆನ್ಸ್ ಓಟಿನ ಜೊತೆಗೆ ತೀರ್ಪುಗಾರರು ನೀಡಿದ ಅಂಕಗಳು ಎರಡನ್ನು ಪರಿಗಣನೆಗೆ ತೆಗೆದುಕೊಂಡು ಶ್ರೀನಿಧಿ ಶಾಸ್ತ್ರಿಯನ್ನು ಚಾಂಪಿಯನ್ ಆಗಿ ಘೋಷಿಸಿದರು.

ಇನ್ನು ಅಶ್ವಿನ್ ಶರ್ಮ ಮೊದಲ ರನ್ನರ್ ಅಪ್ ಆಗಿದ್ದರೆ, ಕಂಬದ ರಂಗಯ್ಯ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದರು.

ಚಾಂಪಿಯನ್ ಆಗಿರುವ ಶ್ರೀನಿಧಿ ಶಾಸ್ತ್ರಿ ಅವರು 10 ಲಕ್ಷ ರೂಪಾಯಿ ಬಹುಮಾನ ಪಡೆದಿದ್ದಾರೆ. 1 ರನ್ನರ್ ಅಪ್ ಆಗಿರುವ ಅಶ್ವಿನ್ ಶರ್ಮ 5 ಲಕ್ಷ ಬಹುಮಾನ ಪಡೆದರೆ ಕಂಬದ ರಂಗಯ್ಯ 2.5 ಲಕ್ಷ ರುಪಾಯಿ ಬಹುಮಾನ ಪಡೆದಿದ್ದಾರೆ.

ರಹಾನೆಗೆ ಜಾಫರ್ ರಹಸ್ಯ ಸಂದೇಶ..!

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಸರಣಿಯಲ್ಲಿ ಭಾರತ ಸೋತ ಬಳಿಕ ಸೋಲಿನ ಬಗ್ಗೆ ಅನೇಕ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 36 ರನ್‌ಗಳಿಗೆ ಆಲ್‌ಔಟ್ ಆಗಿರುವುದು ತಂಡದ ಆತ್ಮವಿಶ್ವಾಸವನ್ನೂ ಕುಗ್ಗಿಸಿರುವುದರಲ್ಲಿ ಅನುಮಾನವಿಲ್ಲ. ಈ ಮಧ್ಯೆ ಮಾಜಿ ಆಟಗಾರರಿಂದ ಸಾಕಷ್ಟು ಸಲಹೆಗಳು ವ್ಯಕ್ತವಾಗುತ್ತಿದೆ.

ಎರಡನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ ನಡೆಯಲಿದ್ದು ವಿರಾಟ್ ಕೊಹ್ಲಿ ಅಲಭ್ಯತೆಯಲ್ಲಿ ಅಜಿಂಕ್ಯ ರಹಾನೆ ತಂಡವನ್ನು ಮುನ್ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಂದಿನ ಪಂದ್ಯಕ್ಕೂ ಮುನ್ನ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ತಂಡದ ನಾಯಕ ಅಜಿಂಕ್ಯ ರಹಾನೆಗೆ ಟ್ವಿಟ್ಟರ್‌ನಲ್ಲಿ ಗೌಪ್ಯ ಸಂದೇಶವೊಂದನ್ನು ನೀಡಿದ್ದಾರೆ. ಈ ಸಂದೇಶ ವಿಭಿನ್ನವಾಗಿದ್ದು ಸಾಕಷ್ಟು ಕುತೂಹಲಕಾರಿಯಾಗಿದೆ.
ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅಜಿಂಕ್ಯ ರಹಾನೆಗೆ ಟ್ವಿಟ್ಟರ್‌ನಲ್ಲಿ ನೀಡಿರುವ ಗೌಪ್ಯ ಸಲಹೆ ಹೀಗಿದೆ:

ಇದರ ಜೊತೆಗೆ ಈ ಗೌಪ್ಯ ಸಂದೇಶವನ್ನು ನೀವು ಕೂಡ ಬಿಡಿಸಬಹುದು ಎಂದು ಅಭಿಮಾನಗಳಿಗೆ ವಾಸಿಂ ಜಾಫರ್ ಸೂಚನೆಯನ್ನು ನೀಡಿದ್ದಾರೆ. ಹೀಗಾಗಿ ಸಾಕಷ್ಟು ಅಭಿಮಾನಿಗಳು ಈ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಿದ್ದು ಜಾಫರ್ ಯಾವ ಸಂದೇಶವನ್ನು ನೀಡಿದ್ದಾರೆ ಎಂದು ತಲೆ ಕೆಡಿಸುತ್ತಿದ್ದಾರೆ. ಈ ಸಂದೇಶದ ಜೊತೆಗೆ ಬಾಕ್ಸಿಂಗ್ ಡೇ ಟೆಸ್ಟ್‌ಗೆ ಜಾಫರ್ ಶುಭ ಹಾರೈಸಿದ್ದಾರೆ.

ಇನ್ನು ಈ ಗೌಪ್ಯ ಸಂದೇಶವನ್ನು ಅನೇಕ ಅಭಿಮಾನಿಗಳು ಬಿಡಿಸುವಲ್ಲಿ ಸಫಲರಾಗಿದ್ದಾರೆ. ಟ್ವೀಟ್‌ನಲ್ಲಿ ಒಂದೊಂದೇ ಶಬ್ಧಗಳನ್ನು ಮೇಲಿನಿಂದ ಕೆಳಕ್ಕೆ ಬರೆಯುತ್ತಾ ಕುತೂಹಲ ಮೂಡಿಸುವಂತೆ ಮಾಡಿದ್ದಾರೆ. ಸಾಮಾನ್ಯವಾಗಿ ಓದಿದರೆ ಕ್ರಿಕೆಟ್ ಬಗೆಗಿನ ಸುಂದರವಾದ ಸಂದೇಶವಾಗಿದೆ. ಆದರೆ ಅದರಲ್ಲಿ ಕರಾಮತ್ತು ತೋರಿಸಿದ್ದಾರೆ ವಾಸಿಂ ಜಾಫರ್.

ವಾಸಿಂ ಜಾಫರ್ ಬರೆದ ಈ ಸಂದೇಶದ ಮೊದಲ ಅಕ್ಷರಗಳನ್ನು ಜೋಡಿಸಿದರೆ “PICK GILL AND RAHUL” ಎಂದಾಗುತ್ತದೆ. ಅಂದರೆ ಶುಭ್ಮನ್ ಗಿಲ್ ಹಾಗೂ ರಾಹುಲ್ ಅವರನ್ನು ಆಯ್ಕೆ ಮಾಡುವಂತೆ ವಾಸಿಂ ಜಾಫರ್ ಸಲಹೆಯನ್ನು ನೀಡಿದ್ದು ಅಭಿಮಾನಿಗಳು ಈ ಸವಾಲನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

 

 

Share post:

Subscribe

spot_imgspot_img

Popular

More like this
Related

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ

ಅಗತ್ಯ ಸೌಕರ್ಯ ತಕ್ಷಣವೇ ಒದಗಿಸಿ: ರಾಜ್ಯ ಸರ್ಕಾರಕೆ ಹೆಚ್.ಡಿ. ಕುಮಾರಸ್ವಾಮಿ ಸಲಹೆ ನವದೆಹಲಿ:ಕಲ್ಯಾಣ...

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್

ಈರುಳ್ಳಿ ಕತ್ತರಿಸುವಾಗ ಕಣೀರು ಬರುತ್ತಾ? ಈ ಕಣ್ಣೀರನ್ನು ತಡೆಯಲು ಇಲ್ಲಿದೆ ಟಿಪ್ಸ್ ಅಡುಗೆ...

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ !

ನವರಾತ್ರಿ ಏಳನೇ ದಿನಈ ದಿನ ಕಾಳರಾತ್ರಿ ದೇವಿಯನ್ನು ಆರಾಧಿಸಲಾಗುತ್ತದೆ ! ದೇವಿಯ ಹಿನ್ನಲೆ ಕಾಳರಾತ್ರಿ...