ನಟಿ ರುಕ್ಮಿಣಿ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದ ಆರೋಪಿ ಅರೆಸ್ಟ್!
ಬೆಂಗಳೂರು:- ನಟಿ ರುಕ್ಮಿಣಿ ಬ್ಯಾಗ್ ಕದ್ದು ಎಸ್ಕೇಪ್ ಆಗಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಮಹಮ್ಮದ್ ಬಸ್ತಾನ್ ಬಂಧಿತ ಆರೋಪಿ. ಮೇ.11 ರಂದು ಬೆಳಗ್ಗೆ ನಟಿ ರುಕ್ಮಿಣಿ ವಾಕಿಂಗ್ ಗೆ ಬಂದಿದ್ದರು. ಈ ವೇಳೆ ಚಿನ್ನಸ್ವಾಮಿ ಗೇಟ್ ನಂ.18 ಬಳಿ ಕಾರ್ ನಿಲ್ಲಿಸಿದ್ದಳು. ಕಾರ್ ನಲ್ಲಿ ದುಬಾರಿ ಬೆಲೆಯ ಬ್ಯಾಗ್,ಪರ್ಸ್,ಡೈಮಂಡ್ ರಿಂಗ್ ಇಟ್ಟು ಹೋಗಿದ್ಳು. ಆದರೆ ಕಾರ್ ಲಾಕ್ ಮಾಡದೆ ಹಾಗೆ ಮರೆತು ಹೋಗಿದ್ದರು. ಇದನ್ನು ಗಮನಿಸಿದ್ದ ಕ್ಯಾಬ್ ಚಾಲಕ ಮಹಮ್ಮದ್ ಮಸ್ತಾನ್ ನಿಂದ ಈ ಕೃತ್ಯ ನಡೆದಿದೆ.
ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನಟಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಂಧಿಸಿ ಕಳ್ಳತನವಾಗಿದ್ದ ವಸ್ತು ವಶಕ್ಕೆ ಪಡೆದಿದ್ದಾರೆ.
ಬಂಧಿತನಿಂದ ಒಂದೂವರೆ ಲಕ್ಷದ ಬ್ಯಾಗ್,75 ಸಾವಿರ ಮೌಲ್ಯದ ಪರ್ಸ್ ಹಾಗೂ 10 ಲಕ್ಷ ಮೌಲ್ಯದ ಡಬಲ್ ಬ್ಯಾಂಡೆಡ್ ಡೈಮಂಡ್ ರಿಂಗ್ , 9 ಲಕ್ಷ ಮೌಲ್ಯದ ರೊಲೆಕ್ಸ್ ವಾಚ್,3 ಲಕ್ಷ ಮೌಲ್ಯದ ಡೈಮಂಡ್ ರಿಂಗ್ ಸೇರಿ ಒಟ್ಟು 23 ಲಕ್ಷ ಮೌಲ್ಯದ ವಸ್ತು ಸೀಜ್ ಮಾಡಲಾಗಿದೆ.