ಹೊಸವರ್ಷದಂದು ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಅಭಿಮಾನಿಗಳಿಗೆ ಶುಭಾಶಯವನ್ನು ಕೋರಿದ್ದಾರೆ. ಇನ್ನು ನಟಿ ಹರಿಪ್ರಿಯಾ ಸಹ ಒಂದೆರಡು ದಿನ ತಡವಾಗಿ ಅಭಿಮಾನಿಗಳಿಗೆ ಹೊಸವರ್ಷದ ಶುಭಾಶಯವನ್ನು ತಿಳಿಸಿದ್ದಾರೆ.
ಇನ್ನು ಹೊಸ ವರ್ಷದ ಸಂಭ್ರಮದ ಗಳಿಗೆಯನ್ನ ಇನ್ಸ್ಟಾಗ್ರಾಂ ನಲ್ಲಿ ಫೋಟೋ ಅಪ್ಲೋಡ್ ಮಾಡುವ ಮುಖಾಂತರ ಹಂಚಿಕೊಂಡಿದ್ದಾರೆ ನಟಿ ಹರಿಪ್ರಿಯಾ.. ಇನ್ನು ಹರಿಪ್ರಿಯ ಹಂಚಿಕೊಂಡಿರುವ ಈ ಫೋಟೋಗಳಲ್ಲಿ ಅತಿಯಾಗಿ ಗಮನಸೆಳೆದಿದ್ದು ಕಿರುತೆರೆ ನಟ ಅಭಿನವ್ ವಿಶ್ವನಾಥನ್.. ನನ್ನ ಅರಸಿ ರಾಧೆ ಧಾರಾವಾಹಿಯಲ್ಲಿ ಅಗಸ್ತ್ಯ ರಾಥೋಡ್ ಪಾತ್ರವನ್ನು ನಿರ್ವಹಿಸುತ್ತಿರುವ ಅಭಿನವ್ ಕೂಡ ಹರಿಪ್ರಿಯಾ ಅವರ ಜೊತೆ ಹೊಸ ವರ್ಷ ಆಚರಣೆ ಮಾಡಿದ್ದಾರೆ.
ಇನ್ನು ಇವರಿಬ್ಬರ ಫೋಟೋಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು ಅಗಸ್ತ್ಯ ರಾಥೋಡ್ ಗೂ ನಿಮಗೂ ಏನು ಸಂಬಂಧ ಎಂದು ಹರಿಪ್ರಿಯ ಅವರಲ್ಲಿ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಇವರಿಬ್ಬರೂ ಲವ್ವಲ್ಲಿ ಇದ್ದಾರಾ ಎಂದು ಕೂಡ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನು ಈ ಗೊಂದಲಕ್ಕೆ ತೆರೆಬೀಳಬೇಕಾದರೆ ಹರಿಪ್ರಿಯಾ ಅವರೇ ಈ ಪ್ರಶ್ನೆಗಳಿಗೆ ಉತ್ತರ ನೀಡಬೇಕು..