ಹುಬ್ಬಳ್ಳಿ: ದರ್ಶನ್ ಹಾಗೂ ಅವರ ಅವರ ಟೀಂ ಮಾಡಿದ್ದು ರಾಕ್ಷಸ ಪ್ರವೃತ್ತಿ ಆಗಿದೆ ಎಂದು ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದ ಜಗದೀಶ್ ಶೆಟ್ಟರ್ ಅಸಮಾಧಾನ ವ್ಯಕ್ತಪಡಿಸಿದರು. ನಗರದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಮೂಲಕ ತಮ್ಮ ತಮ್ಮ ಅಭಿಪ್ರಾಯ ಹಂಚಿಕೊಳ್ಳುವುದು ಸಾಮಾನ್ಯವಾಗಿ ಆಗಿದೆ.
ಅದರೆ ಅದನ್ನ ಇಷ್ಟೊಂದು ಗಂಭೀರವಾಗಿ ಪರಿಗಣಿಸುವುದು ಸರಿಯಲ್ಲ. ದರ್ಶನ್ ಹಾಗೂ ಅವರ ಅವರ ಟೀಂ ಮಾಡಿದ್ದು ರಾಕ್ಷಸ ಪ್ರವೃತ್ತಿ ಆಗಿದ್ದು ಮಾನವೀಯತೆ ಮರೆತು ಬಿಟ್ಟು ನಡೆಸಲಾಗದ ಕೃತ್ಯ ಆಗಿದೆ. ರೇಣುಕಾಸ್ವಾಮಿ ಮಾಡಿದ್ದು ತಪ್ಪು ಆಗಿದ್ದರೆ ಕಾನೂನು ಮೂಲಕ ಬಗೆಹರಿಸ ಕೊಳ್ಳಬಹುದು ಎಂದ ಆದರೆ ಈ ಮಟ್ಟಕ್ಕೆ ಹೋಗುವುದು ಸರಿಯಲ್ಲ ಎಂದರು.
ಇನ್ನು ರಾಜ್ಯದಲ್ಲಿ ಐದು ಗ್ಯಾರಂಟಿಗಳನ್ನ ಸ್ಥಗಿತಗೊಳ್ಳಿಸಲು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳುತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ಕೊಟ್ಟ ಅವರು ನಾನು ಮೊದಲೇ ಹೇಳಿದ್ದು ಐದು ಗ್ಯಾರಂಟಿಗಳಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದ್ದು ಗ್ಯಾರಂಟಿಗಳಿಂದ ಆರ್ಥಿಕ ವ್ಯವಸ್ಥೆ ಹೆದಗೆಟ್ಟಿದ್ದು ಅವರ ಪಕ್ಷದ ಶಾಸಕರೇ ಹೇಳಿದರಲ್ಲಿ ತಪ್ಪು ಇಲ್ಲ ಎಂದರು.
ನಟ ದರ್ಶನ್ ಮಾಡಿರುವುದು ಹೇಯ ಕೃತ್ಯ: ಜಗದೀಶ್ ಶೆಟ್ಟರ್
Date: