ಅಮಿರ್ ಖಾನ್ ಮೊದಲ ಪತ್ನಿ ಮಗಳು ಇರಾ ಖಾನ್ ಕಾಡಿನ ಮಧ್ಯೆದಲ್ಲಿ ಅರೆಬೆತ್ತಲಾಗಿದ್ದಾರೆ! 21 ವರ್ಷದ ಸುರಸುಂದರಾಂಗಿ ಸಿನಿಮಾ ಕಡೆಗಿಂತ ಹೆಚ್ಚು ನಾಟಕದ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ. ಒಂದು ನಾಟಕವನ್ನು ಡೈರೆಕ್ಟ್ ಕೂಡ ಮಾಡಿದ್ದಾರೆ. ಇತ್ತೀಚೆಗೆ ಇವರ ನಿರ್ದೇಶನದ ನಾಟಕ ಬೆಂಗಳೂರಿಗೂ ಬಂದಿತ್ತು. ಈಗ ಸಿನಿಮಾ, ನಾಟಕಕ್ಕಿಂತ ಮತ್ತೊಂದು ವಿಚಾರದಲ್ಲಿ ಸುದ್ದಿಯಾಗಿದ್ದಾರೆ. ಆಕೆ, ನಡು ಕಾಡಿನಲ್ಲಿ ಅರೆಬೆತ್ತಲಾಗಿದ್ದಾರೆ! ಆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯಾಕೆ ಇರಾ ಖಾನ್ ಅರೆಬೆತ್ತಲೆ ಆದರು.. ಅದೂ ಕಾಡಿನ ಮಧ್ಯೆದಲ್ಲಿ ಎಂಬ ಕುತೂಹಲ ನಿಮಗಿದೆಯಾ? ಸ್ವತಃ ಇರಾ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿ, ”ನಂಗೆ ಮರದ ಮನೆಯಲ್ಲಿರಲು ಇಷ್ಟ” ಎಂದು ಬರೆದುಕೊಂಡಿದ್ದಾರೆ. ಹೌದು ಇರಾಗೆ ಫೋಟೋ ಶೂಟ್ ಕ್ರೇಜ್ ಇದ್ದು, ಕಾಡಿನಲ್ಲಿ ಅರೆಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಕಡುಗೆಂಪು ಬಣ್ಣದ ಗೌನ್ ಹಾಕಿಕೊಂಡು ಕ್ಲಿಕ್ಕಿಸಿಕೊಂಡ ಫೋಟೋಕ್ಕೆ ಅಭಿಮಾನಿಗಳು ಫಿದಾ ಆಗಿದ್ದು, ಕಾಮೆಂಟ್ಗಳ ಸುರಿಮಳೆ ಸುರಿಸುತ್ತಿದ್ದಾರೆ.