ನಡೆದಾಡುವ ದೇವರ ಹುಟ್ಟೂರನ್ನ ದತ್ತು ಪಡೆಯಲ್ಲಿದ್ದಾರೆ ಸಚಿವ ಡಿ.ಕೆ.ಶಿವಕುಮಾರ್..

Date:

ನಡೆದಾಡುವ ದೇವರ ಹುಟ್ಟೂರನ್ನ ದತ್ತು ಪಡೆಯಲ್ಲಿದ್ದಾರೆ ಸಚಿವ ಡಿ.ಕೆ.ಶಿವಕುಮಾರ್..

ಶಿವೈಕ್ಯರಾದ ಶ್ರೀಗಳ ಅಂತ್ಯ ಸಂಸ್ಕಾರ ಇಂದು ಸಂಜೆ 5 ಗಂಟೆ ಸುಮಾರಿಗೆ ಮಠದಲ್ಲಿ ನಡೆಯಲಿದೆ.. ನಿನ್ನೆಯಿಂದಲು ಭಕ್ತಸಾಗರ ತುಮಕೂರು ಶ್ರೀ ಸಿದ್ದಗಂಗಾ ಮಠದ ಕಡೆ ಆಗಮಿಸುತ್ತಿದ್ದು, ಅಗಲಿದ ನಡೆದಾಡುವ ದೇವರ ಅಂತಿಮ ದರ್ಶನ ಪಡೆಯುತ್ತಿದ್ದಾರೆ.. ಇತ್ತಕಡೆ ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ನೀರವ ಮೌನ ಆವರಿಸಿದೆ.. ಶ್ರೀಗಳಲ್ಲಿದ್ದ ಇಡೀ ಗ್ರಾಮಕ್ಕೆ ಅನಾಥ ಭಾವ ಕಾಡುತ್ತಿದೆ…

ಸದ್ಯ ಶ್ರೀಗಳ‌ ಜನ್ಮಸ್ಥಳವಾದ ಈ ಹಳ್ಳಿಯಲ್ಲಿ ಸುಮಾರು 50 ಮನೆಗಳಿವೆ ಎಂದು ಹೇಳಲಾಗುತ್ತಿದೆ.. ಮೂಲಸೌಕರ್ಯ ಕೊರತೆ ಇರುವ ಈ ಹಳ್ಳಿ ಅಭಿವೃದ್ಧಿಯಾಗಬೇಕಿದೆ..‌ ಶುದ್ದ ಕುಡಿಯುವ ನೀರು, ರಸ್ತೆ, ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳನ್ನ ಮಾಡಬೇಕಿದೆ.. ಹೀಗಾಗೆ ಸಚಿವರಾದ ಡಿ.ಕೆ.ಶಿವಕುಮಾರ್ ಈ ಹಳ್ಳಿಯನ್ನ ದತ್ತು ಪಡೆಯುವುದಾಗಿ ತಿಳಿಸಿದ್ದಾರೆ…

ತಾವೇ ದತ್ತು ಪಡೆದು ಇಡೀ ಗ್ರಾಮದ ಅಭಿವೃದ್ಧಿ ಮಾಡುವುದಾಗಿ ಹೇಳಿದ್ದಾರೆ.. ಡಿ.ಕೆ.ಶಿವಕುಮಾರ್ ಅವರು ಶ್ರೀಗಳ ಭಕ್ತರಾಗಿದ್ದು, ಹಲವು ಬಾರಿ ಅವರನ್ನ ಭೇಟಿ ಮಾಡಿದ್ದಾರೆ.. ರಾಮನಗರ ವ್ಯಾಪ್ತಿಗೆ ಒಳ ಪಡುವ ಈ ಗ್ರಾಮವನ್ನ ಅವರ ನೆನಪಿಗಾಗಿ ಅಭಿವೃದ್ಧಿ ಪಡಿಸಿ ಮಾದರಿ ಗ್ರಾಮವನ್ನಾಗಿಸುವ ಆಸೆಯನ್ನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ..

Share post:

Subscribe

spot_imgspot_img

Popular

More like this
Related

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...