ನಡೆದಾಡುವ ದೇವರ ಆರೋಗ್ಯ ನೋಡಿಕೊಳ್ಳಲು ಅಮೇರಿಕಾದಿಂದ ಬಂದ ಶ್ರೀಗಳ ನೆಚ್ಚಿನ ಶಿಷ್ಯ..
ನಡೆದಾಡುವ ದೇವರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮಿಗಳ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಸಿಕೊಳ್ಳುತ್ತಿದೆ.. ಶ್ರೀಗಳ ಇಚ್ಛೆಯಂತೆ ಅವರನ್ನ ತುಮಕೂರಿನ ಬಿಜಿಎಸ್ ಆಸ್ಪತ್ರೆಯಿಂದ ಮತ್ತೆ ಮಠಕ್ಕೆ ಕರೆತರಲಾಗಿದ್ದು, ಇಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ.. ಇನ್ನು ವೈದ್ಯರಾದ ಡಾ.ಪರಮೇಶ್ ಹಾಗೂ ಡಾ.ರವೀಂದ್ರ ಶ್ರೀ ಅವರ ಆರೋಗ್ಯದ ಬಗ್ಗೆ ನಿಗ ವಹಿಸಿದ್ದಾರೆ..
ಇತ್ತಕಡೆ ಶ್ರೀಗಳ ಅನಾರೋಗ್ಯದ ಬಗ್ಗೆ ವಿಚಾರ ತಿಳಿಯುತ್ತಿದ್ದ ಹಾಗೆ ಅಮೇರಿಕಾದಿಂದ ವೈದ್ಯರೊಬ್ಬರು ರಜೆ ತೆಗೆದುಕೊಂಡು ಶ್ರೀಗಳ ಚಿಕಿತ್ಸೆ ಓಡೋಡಿ ಬಂದಿದ್ದಾರೆ.. ಹೌದು, ಇದು ಬೇರೆ ಯಾರು ಅಲ್ಲ ಶ್ರೀಗಳ ನೆಚ್ಚಿನ ಶಿಷ್ಯ ಡಾ.ನಾಗಣ್ಣ.. ಅಮೇರಿಕಾದಲ್ಲಿ ಖ್ಯಾತ ವೈದ್ಯರಾಗಿರುವ ಡಾ.ನಾಗಣ್ಣ ಶ್ರೀಗಳ ಚಿಕಿತ್ಸೆಗೆ ಇಲ್ಲಿರುವ ವೈದ್ಯರೊಂದಿಗೆ ಸಹಕರಿಸುತ್ತ ಶ್ರೀಗಳ ಹಾರೈಕೆಯಲ್ಲಿ ತೊಡಗಿಕೊಂಡಿದ್ದಾರೆ…
ಸದ್ಯ ವೈದ್ಯರೇ ಶ್ರೀಗಳ ಆರೋಗ್ಯದಲ್ಲಿ ಕಂಡು ಬರುತ್ತಿರುವ ಚೇತರಿಕೆಯ ಬಗ್ಗೆ ಆಶ್ಚರ್ಯವನ್ನ ವ್ಯಕ್ತ ಪಡೆಸಿದ್ದಾರೆ.. ಇನ್ನು ಕರುನಾಡಿನಲ್ಲಿ ಶಿವಕುಮಾರ ಸ್ವಾಮಿಗಳ ಅರೋಗ್ಯ ಚೇತರಿಕೆ ಕಾಣಲಿ ಅಂತ ದೇವರ ಮೊರೆ ಹೋಗಿದ್ದು, ಹೋಮ-ಹವನ ಮಾಡಿಸುತ್ತಿದ್ದಾರೆ..