ಶಿವಲಿಂಗಾ ಶಿವಾಚಾರ್ಯ ಸ್ವಾಮೀಜಿ ಅವರು ನನಗೆ ಯಾರಿಂದಲೂ ಯಾವುದೇ ರಾಜಕೀಯ ಒತ್ತಡವಿಲ್ಲ. ನಾವು ಗುರುಪರಂಪರೆಯಿಂದ ಬಂದವರು ಗುರುಗಳ ಮಾತಿನಿಂದ ಸ್ಪರ್ಧೆಯಿಂದ ಹಿಂದೆ ಸರಿದಿದ್ದೇನೆ ಎಂದು ಹಿರೇಕೆರೂರು ಜೆಡಿಎಸ್ ಅಭ್ಯರ್ಥಿ ರಟ್ಟಿಹಳ್ಳಿಯ ಕಬ್ಬಿಣಕಂತಿ ಸ್ವಾಮೀಜಿಯವರು ಹೇಳಿದ್ದಾರೆ ನಮ್ಮ ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ರಸ್ತೆ ಸರಿ ಇಲ್ಲ, ಕೆರೆಗಳು ಒಣಗುತ್ತಿವೆ. ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿದ್ದಾರೆ.
ಹಾಗಾಗಿ, ಜನರ ಸಮಸ್ಯೆಯನ್ನ ಸರಿಪಡಿಸಲು ರಾಜಕೀಯಕ್ಕೆ ಬಂದಿದ್ವಿ. ಆದ್ರೆ, ಪಂಚಪೀಠದ ಗುರುಗಳ ಮಾತಿನಿಂದ ಹಿಂದೆ ಸರಿದಿದ್ದೇನೆಯೇ ಹೊರತು ಯಾವುದೇ ರಾಜಕೀಯ ಒತ್ತಡದಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾಳೆ ನಾಮಪತ್ರ ವಾಪಸ್ ಪಡೆಯಲಿದ್ದು, ಸರ್ಕಾರದ ಪ್ರತಿನಿಧಿಯಾಗಿ ಬಂದ ಬಿ.ವೈ.ರಾಘವೇಂದ್ರ ಅವರ ಬಳಿಯೂ ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ, ಸೋಲು-ಗೆಲುವಿನ ಬಳಿಕವೂ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಮನಸ್ಸು ಮಾಡದಿದ್ರೆ ಮತ್ತೆ ರಾಜಕೀಯಕ್ಕೆ ಬರೋದಾಗಿ ಎಚ್ಚರಿಸಿದ್ದಾರೆ. ಕೋನರೆಡ್ಡಿ ಮಾಡಿರೋ ಆರೋಪಕ್ಕೆ, ಕೋನರೆಡ್ಡಿ ಆರೋಪ ಅಪ್ರಸ್ತುತ, ಅದನ್ನ ಕುಮಾರಸ್ವಾಮಿ ಹೇಳಬೇಕೇ ಹೊರತು ಕೋನರೆಡ್ಡಿಯಲ್ಲ ಎಂದು ಕೋನರೆಡ್ಡಿ ಹೇಳಿಕೆಗೆ ಟಾಂಗ್ ಕೊಟ್ಟಿದ್ದಾರೆ.