ನನ್ನನ್ನು ಮುಗಿಸಲು ಪ್ರಯತ್ನ ನಡೆದಿದೆ ಎಂದು ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಸಿಎಂ,ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ನನ್ನನ್ನು ಮುಗಿಸಲು ಪ್ರಯತ್ನ ನಡೆಯುತ್ತಿದೆ ಎಂದರು!
ಮಂಡ್ಯ ಕ್ಕೆ ನಾನು ಹೋಗಿ 6 ದಿನ ಆಯಿತಷ್ಟೇ. ಅಲ್ಲಿ ಜೆಡಿಎಸ್ ಕುತಂತ್ರ ಮಾಡುತ್ತಿಲ್ಲ. ಕುತಂತ್ರ ಮಾಡುತ್ತಿರುವವರು ನಮ್ಮ ವಿರೋಧಿಗಳು ಎಂದರು.
ಜೆಡಿಎಸ್ ಕಾರ್ಯಕರ್ತರನ್ನು ನಂಬಿದ್ದೇನೆ. ಅವರು ಏನ್ ಮಾಡುತ್ತಿದ್ದಾ ಎಂಬುದು ಚೆನ್ನಾಗಿ ಗೊತ್ತಿದೆ. ಮಂಡ್ಯ ನನ್ನ ಹೃದಯ ಇದ್ದಂತೆ. ಅಲ್ಲಿ ಯಾವ ತಂತ್ರವೂ ಮಾಡುವ ಅಗತ್ಯ ನಂಗಿಲ್ಲ.
ಮಂಡ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡಲು ಹೊರಟಿದ್ದಾರೆ ಅದು ಆಗಲ್ಲ ಎಂದರು.
ಕುಮಾರಸ್ವಾಮಿ ಅವರಯ ಅದೇಕೋ ಪದೇ ಪದೇ ಆತಂಕದಿಂದ ಮಾತನಾಡುತ್ತಿದ್ದಾರೆ.ಇಂದು ಮಾಧ್ಯಮಗಳು ಕಾಟ ಕೊಡುತ್ತಿವೆ ಎಂದು ಮಾಧ್ಯಮಗಳ ಮೇಲೆ ಕೂಡ ಹರಿ ಹಾಯ್ದಿದ್ದಾರೆ.
ನನ್ನನ್ನು ಮುಗಿಸಲು ಪ್ರಯತ್ನ ನಡೆದಿದೆ ಎಂದು ಸಿಎಂ ಹೇಳಲು ಅಸಲಿ ಕಾರಣ ಇದು…!
Date: