No menu items!
2.7 C
Munich
Friday, May 1, 2026

ಹೀಗೆ ಆಡಿದ್ರೆ ಖಂಡಿತಾ ಕಪ್ ಯಾರದ್ದೋ..!

Must read

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಷ್ಟೇ ಕಳಪೆ ಪ್ರದರ್ಶನ ನೀಡಿದ್ರೂ ಅಭಿಮಾನಿಗಳು ಪ್ರೋತ್ಸಾಹಿಸುವುದನ್ನು ನಿಲ್ಲಿಸಲ್ಲ. ಸೋಲಲಿ, ಗೆಲ್ಲಲಿ ನಮ್ಮ ಟೀಮ್ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಎದುರಾಳಿ ಎಷ್ಟೇ ಪ್ರಬಲವಾಗಿದ್ದರೂ ಆರ್​ಸಿಬಿ ಗೆಲ್ಲುತ್ತೆ ಎನ್ನುವುದು ಎಲ್ಲಾ ಅಭಿಮಾನಿಗಳ ನಿರೀಕ್ಷೆ.
ಒಂದು ಪಂದ್ಯ ಸೋತಾಗ ಬೇಸರದಿಂದ ನಾಲ್ಕು ಮಾತು ಬೈಯುವ ಅಭಿಮಾನಿಗಳು. ಮುಂದಿನ ಪಂದ್ಯದಲ್ಲಿ ಮತ್ತಷ್ಟೇ ಅದಕ್ಕಿಂತ ಹೆಚ್ಚಾಗಿ ಬೆಂಬಲ ನೀಡುತ್ತಾರೆ. ಕಳೆದ ಬಾರಿ ಈ ಸಲ ಕಪ್ ನಮ್ದೇ ಎನ್ನುವ ದೊಡ್ಡ ಅಭಿಯಾನವನ್ನು ಆರ್​ಸಿಬಿ ಫ್ಯಾನ್ಸ್ ನಡೆಸಿದ್ದರು. ಆದರೆ, ಆರ್​​ಸಿಬಿ ಕಳೆದ ವರ್ಷ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ನಿರಾಸೆಯುಂಟು ಮಾಡಿತ್ತು. ಈ ಬಾರಿ ಮತ್ತೆ ತನ್ನ ಕಳಪೆ ಪ್ರದರ್ಶನವನ್ನೇ ಮುಂದುವರೆಸಿದೆ.
ಇಂದು ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 4 ವಿಕೆಟ್​ ಗಳ ಸೋಲನುಭವಿಸಿತು. ಟಾಸ್​ ಗೆದ್ದ ಡೆಲ್ಲಿ ಕ್ಯಾಪ್ಟನ್ ಶ್ರೇಯಸ್ ಅಯ್ಯರ್, ವಿರಾಟ್​ ಕೊಹ್ಲಿ ನೇತೃತ್ವದ ಆರ್​ಸಿಬಿಗೆ ಮೊದಲು ಬ್ಯಾಟಿಂಗ್ ಮಾಡಲು ಬಿಟ್ಟು ಕೊಟ್ಟರು. ಮೊದಲು ಬ್ಯಾಟಿಂಗ್ ಮಾಡಿದ ಆರ್​ಸಿಬಿ 149ರನ್ ಮಾಡಿತು. ಬಳಿಕ ಬ್ಯಾಟಿಂಗ್ ಮಾಡಿದ ಡೆಲ್ಲಿ ನಿರಾಯಾಸವಾಗಿ ಗೆದ್ದು ಬೀಗಿತು. ಇದರಿಂದ ಆರ್​ಸಿಬಿ ಫ್ಯಾನ್ಸ್​ಗೆ ಬೇಸರವಾಗಿದೆ. ಆರ್​ಸಿಬಿ ಇನ್ನುಳಿದ ಎಲ್ಲಾ 8 ಪಂದ್ಯಗಳನ್ನೂ ಸಹ ಗೆಲ್ಲಲ್ಲೇ ಬೇಕಿದೆ. ಇಲ್ಲದಿದ್ದರೆ ಈ ಬಾರಿಯ ಕಪ್​ ಕನಸು ಕೂಡ ಭಗ್ನ..! ಹಿಂಗೇ ಆಡ್ತಾ ಇದ್ರೆ ಈ ಸಲ ಕಪ್ ಯಾರದ್ದೋ ಎಂದು ಬೇಜಾರಿಂದ ಮಾತಾಡಿಕೊಳ್ಳುತ್ತಿದ್ದಾರೆ ಅಭಿಮಾನಿಗಳು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article