ನವರಸನಾಯಕ ಜಗ್ಗೇಶ್ ಅವರು ದರ್ಶನ್ ಅಭಿಮಾನಿಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ ಎನ್ನುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಖಂಡಿಸಿ ದರ್ಶನ್ ಅವರ ಅಭಿಮಾನಿಗಳು ಜಗ್ಗೇಶ್ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಹೋಗಿ ಮುತ್ತಿಗೆ ಹಾಕಿ ಏಕವಚನದಲ್ಲಿ ಮಾತನಾಡಿದ್ದರು.
ಹಿರಿಯ ನಟ ಎಂಬುದನ್ನೂ ನೋಡದೇ ಜಗ್ಗೇಶ್ ಅವರಿಗೆ ದರ್ಶನ್ ಅಭಿಮಾನಿಗಳು ಮನಬಂದಂತೆ ಮಾತನಾಡಿ ವಿವಾದ ಸೃಷ್ಟಿಸಿಬಿಟ್ಟರು. ಇನ್ನು ಇಷ್ಟೆಲ್ಲಾ ಆಗುತ್ತಿದ್ದರೂ ಸಹ ದರ್ಶನ್ ಅವರು ಮಾತ್ರ ಈ ಕುರಿತು ಮಾತನಾಡಿರಲಿಲ್ಲ.
ಆದರೆ ಇದೀಗ ಈ ಕುರಿತು ಟಿವಿ 9 ವಾಹಿನಿಯ ಸಂದರ್ಶನದಲ್ಲಿ ಮಾತನಾಡಿರುವ ದರ್ಶನ್ ಇದರ ಬಗ್ಗೆ ನನಗೇನೂ ಗೊತ್ತಿಲ್ಲ , ಇಷ್ಟು ದೊಡ್ಡ ವಿವಾದ ಆಗಿರೋದು ನನ್ನ ಗಮನಕ್ಕೆ ಬಂದಿರಲಿಲ್ಲ , ಹೀಗಾಗಿ ನಾನೇನೂ ಮಾತನಾಡುವುದಕ್ಕೆ ಹೋಗಿರಲಿಲ್ಲ. ಈಗ ಮಾತನಾಡುವ ಸಮಯ ಬಂದಿದೆ ಮಾತನಾಡ್ತಾ ಇದ್ದೇನೆ , ನನ್ನ ಅಭಿಮಾನಿಗಳಿಂದ ತೊಂದರೆಯಾಗಿದ್ದರೆ , ಬೇಜಾರಾಗಿದ್ದರೆ ದಯವಿಟ್ಟು ಕ್ಷಮಿಸಿ ಜಗ್ಗೇಶ್ ಸರ್ ಎಂದು ದರ್ಶನ್ ಅವರು ವಿವಾದಕ್ಕೆ ತೆರೆ ಎಳೆದರು.