ನನ್ನ ಕೊನೆಯ ಉಸಿರಿರುವವರೆಗೂ ರೈತರಿಗಾಗಿ, ಕಾರ್ಯಕರ್ತರ ರಕ್ಷಣೆಗಾಗಿ ಸಮಯವನ್ನು ಮೀಸಲಿಡುತ್ತೇನೆ ಹಾಗಾಗಿ ಸರಳ ಮೃದು ಸ್ವಭಾವದ ಪರಿಶುದ್ದ ರಾಜಕಾರಣಿ ಬಿ.ಎಲ್.ದೇವರಾಜು ಅವರನ್ನು ಈ ಉಪಚುನಾವಣೆಯಲ್ಲಿ ಗೆಲ್ಲಿಸಿ ನನಗೆ ಶಕ್ತಿ ತುಂಬಿ ಎಂದು ಮತದಾರರಲ್ಲಿ ದೇವೇಗೌಡ ಅವರು ಮನವಿ ಮಾಡಿದರು.
ಕೆ.ಆರ್.ಪೇಟೆ ತಾಲೂಕು ಜೆಡಿಎಸ್ ಪಕ್ಷದ ಭದ್ರಕೋಟೆ ಎಂದರೆ ಅದನ್ನು ನಾನು ಕಟ್ಟಿದ್ದಲ್ಲ, ನೀವು ಜಾತ್ಯಾತೀತವಾಗಿ ಕಟ್ಟಿ ಬೆಳೆಸಿದ್ದೀರಿ. ಕಳೆದ 30-40 ವರ್ಷಗಳಿಂದಲೂ ನಾನು ಎಲ್ಲ ಕಾರ್ಯಕರ್ತರು ಯಾರೆಂದು ನನಗೆ ಚನ್ನಗಿ ಗೊತ್ತಿದೆ. ಇಷ್ಟು ವಯಸ್ಸಾದರು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಅದಕ್ಕೆಲ್ಲ ಕಾರಣ ನೀವೆ . ದಯವಿಟ್ಟು ದೇವರಾಜು ಹಾಗೂ ಈ ನಿಮ್ಮ ದೇವೇಗೌಡನನ್ನು ಕೈ ಬಿಡಬೇಡಿ ಎಂದು ದೇವೇಗೌಡರು ಕೋರಿದರು.