ನನ್ನ ಕ್ಷೇತ್ರವೂ ಸೇರಿ ಯಾವುದೂ ಯಾರಿಗೂ ಭದ್ರಕೋಟೆ ಅಲ್ಲ: ಸಚಿವ ಮಹದೇವಪ್ಪ
ಬೆಂಗಳೂರು: ನನ್ನ ಕ್ಷೇತ್ರವೂ ಸೇರಿ ಯಾವುದೂ ಯಾರಿಗೂ ಭದ್ರಕೋಟೆ ಅಲ್ಲ ಎಂದು ಸಚಿವ ಮಹದೇವಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಯಾವ ಕ್ಷೇತ್ರವೂ ಯಾರ ಭದ್ರಕೋಟೆಯಲ್ಲ. ನನ್ನ ಕ್ಷೇತ್ರವೂ ಸೇರಿ ಯಾವುದೂ ಯಾರಿಗೂ ಭದ್ರಕೋಟೆ ಅಲ್ಲ. ಜನ ಆಯಾ ಸಂದರ್ಭದಲ್ಲಿ ಆಯಾ ಸಮಯದಲ್ಲಿ ಆಯಾ ವಿಷಯದ ಮೇಲೆ ತೀರ್ಮಾನ ಮಾಡುತ್ತಾರೆ. ಅದು ಜನರ ಭದ್ರಕೋಟೆ ಎಂದು ತಿರುಗೇಟು ಕೊಟ್ಟರು. ಮೊಮ್ಮಗ ಪರ ದೇವೇಗೌಡ ಪ್ರಚಾರದ ಬಗ್ಗೆ ಮಾತನಾಡಿ, ನಾನು ಅದರ ಬಗ್ಗೆ ಪ್ರತಿಕ್ರಿಯೆ ನೀಡಲ್ಲ. ನನಗೆ ದೇವೇಗೌಡರ ಆರೋಗ್ಯ ಮುಖ್ಯ. ಅವರ ಆರೋಗ್ಯ ಚೆನ್ನಾಗಿ ಇರಲಿ. ಅವರು ಪ್ರಚಾರ ಮಾಡೋ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.