ನನ್ನ ಗಂಡ ರೇವಣ್ಣ ಹೇಳಿದ್ದೇ ಸತ್ಯ..! ಡಿ ಸಿ ಮೇಡಂ ಏನೂ ಮಾಡಿಲ್ಲ ಅಂದ್ರು ಭವಾನಿ..!?

Date:

ಹಾಸನ ಮೊದಲ ಸ್ಥಾನ ಬರಲು ನಾನೇ ಕಾರಣ ಎಂದು ಸ್ವತಃ ಭವಾನಿ ರೇವಣ್ಣ ಅವರೇ ಹೇಳಿಕೊಂಡಿದ್ದಾರೆ, ಈ ಮೂಲಕ ಮೊನ್ನೆ ಮೊನ್ನೆಯಷ್ಟೆ ಪತಿ ರೇವಣ್ಣ ನೀಡಿದ್ದ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಮೊನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರೆವಣ್ಣ ನನ್ನ ಪತ್ನಿ ಜಿಲ್ಲಾ ಪಂಚಾಯಿತಿ ಶಿಕ್ಷಣಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಪ್ರಯತ್ನ ಕೂಡ ಸಫಲವಾಗಿದೆ, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಅವರು ಎರಡು ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದರು.

ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ನೀಡಿ ಎಂದು ಬಿಇಓಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು ಇದರಿಂದಾಗಿ ಹಾಸನ ಜಿಲ್ಲೆ ಮಿದಲ ಸ್ಥಾನವನ್ನು ಅಲಂಕರಿಸಿದೆ ಎಂದು ಹೇಳಿಕೆ ನೀಡಿದ್ದರು.

ಇದೀಗ ಭವಾನಿ ರೇವಣ್ಣ ಅವರು ಕೂಡಾ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ನನ್ನ ಈ ಸಾಧನೆಗೆ ನನ್ನ ಪತಿ ರೇವಣ್ಣ ಅವರೇ ಸ್ಫೂರ್ತಿ ಇದರಲ್ಲಿ ರೋಹಿಣಿ ಸಿಂಧೂರಿ ಸಾಧನೆ ಏನೂ ಇಲ್ಲ ನಾನು ಜಿಲ್ಲಾ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಆಗಿದ್ದಾಗ ಹಾಸನ 31ನೇ ಸ್ಥಾನದಲ್ಲಿತ್ತು ಪ್ರತಿ ತಿಂಗಳು ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ನಾನು ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೆನು,

ಕಳೆದ ಒಂದೂವರೆ ವರ್ಷದಲ್ಲಿ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರ ಸಾಧನೆ ಇದರಲ್ಲಿ ಏನೂ ಇಲ್ಲ, ಡಿಸಿ ಮೇಡಂ ಯಾವುದೇ ಮೀಟಿಂಗ್ ಮಾಡಿಲ್ಲ, ಸುಮ್ಮನೆ ಮಾಧ್ಯಮಗಳಿಗೆ ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಹೇಳುವ ಮೂಲಕ ಪತಿ ರೇವಣ್ಣ ಬೆನ್ನಿಗೆ ಭವಾನಿ ನಿಂತಿದ್ದಾರೆ.

 

Share post:

Subscribe

spot_imgspot_img

Popular

More like this
Related

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ ಗಂಭೀರ

ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು: ಪತಿ ಸೂರಜ್ ಆತ್ಮಹತ್ಯೆ, ತಾಯಿ...

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ: ಸಿಎಂ ಸಿದ್ದರಾಮಯ್ಯ

ರೈಲು ಪ್ರಯಾಣ ದರ ಏರಿಕೆ ಕುರಿತು ಬಿಜೆಪಿ ನಾಯಕರು ಮೌನ ವಹಿಸಿದ್ದಾರೆ:...

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ

ಬೆಂಗಳೂರಿನಲ್ಲಿ ಚಳಿ ಜೊತೆಗೆ ಮಂಜು ಕವಿದ ವಾತಾವರಣ: ರಾಜ್ಯದೆಲ್ಲೆಡೆ ಒಣಹವೆ ಬೆಂಗಳೂರು: ರಾಜ್ಯದ...

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ

ಖಾಸಗಿ ಆಸ್ಪತ್ರೆಯಲ್ಲಿ ನರ್ಸ್‌ಗಳ ಖಾಸಗಿ ವೀಡಿಯೋ ಚಿತ್ರಿಕರಣ: ಸೈಕೋ ಸಿಬ್ಬಂದಿ ಬಂಧನ ಬೆಂಗಳೂರು:...