ನನ್ನ ವಿರುದ್ಧ ಕೊಹ್ಲಿ ಯಾವಾಗ್ಲೂ ಸೋಲ್ತಾರೆಂದ ಗಿಲ್!

Date:

ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಪ್ರತಿಭಾವಂತ ಯುವ ಬ್ಯಾಟ್ಸ್‌ಮನ್‌ಗಳಲ್ಲಿ ಶುಭಮನ್‌ ಗಿಲ್‌ ಕೂಡ ಒಬ್ಬರು. ಅದ್ಭುತ ಬ್ಯಾಟಿಂಗ್‌ ತಂತ್ರವನ್ನು ಹೊಂದಿರುವ ಗಿಲ್‌, ಆಕ್ರಮಣಕಾರಿ ಹೊಡೆತಗಳ ಮೂಲಕ ಬೌಲರ್‌ಗಳ ಒತ್ತಡ ಹೇರುವ ಸಾಮರ್ಥ್ಯವನ್ನು ಹೊಂದಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಶುಭಮನ್‌ ಗಿಲ್‌, ಆಡಿದ್ದ ಮೂರು ಪಂದ್ಯಗಳಲ್ಲಿ 51.80 ಸರಾಸರಿಯಲ್ಲಿ 259 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಭಾರತ 2-1 ಅಂತರದಲ್ಲಿ ಟೆಸ್ಟ್‌ ಸರಣಿ ಗೆಲುವಿಗೆ ನೆರವಾಗಿದ್ದರು. ಆದರೆ, ಇಂಗ್ಲೆಂಡ್‌ ವಿರುದ್ಧ ತವರು ಟೆಸ್ಟ್ ಸರಣಿಯಲ್ಲಿ ಅದೇ ಲಯ ಮುಂದುವರಿಸುವಲ್ಲಿ ಗಿಲ್‌ ವಿಫಲರಾಗಿದ್ದರು. ಆಡಿದ್ದ ನಾಲ್ಕು ಪಂದ್ಯಗಳಿಂದ ಗಳಿಸಿದ್ದು ಕೇವಲ 119 ರನ್‌ ಮಾತ್ರ.

ಅಲ್ಲದೆ, 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮೊದಲ ಅವಧಿಯಲ್ಲಿಯೂ ಶುಭಮನ್‌ ಗಿಲ್‌ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದರು. ಆಡಿದ್ದ ಏಳು ಪಂದ್ಯಗಳಿಂದ 133 ರನ್‌ಗಳಿಗೆ ಸೀಮಿತರಾಗಿದ್ದರು.

ಶುಭಮನ್‌ ಗಿಲ್‌ ಅವರ ಕೆಲವೊಂದು ಶಾಟ್‌ಗಳು ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಯ ಹೊಡೆತಗಳಿಗೆ ಹೊಂದಾಣಿಕೆಯಾಗುತ್ತವೆ. ಆದರೆ, ನಾಯಕ ವಿರಾಟ್‌ ಕೊಹ್ಲಿಯಿಂದ 21ರ ಪ್ರಾಯದ ಬ್ಯಾಟ್ಸ್‌ಮನ್‌ ಕಲಿಯುವುದು ತುಂಬಾ ಇದೆ. ಅದರಂತೆ ತಮ್ಮ ನಾಯಕನಿಂದ ಬ್ಯಾಟಿಂಗ್ ಕೌಶಲ ಕಲಿಯಲು ಗಿಲ್‌ಗೆ ಅತ್ಯುತ್ತಮ ಅವಕಾಶವಿದೆ ಎಂದೇ ಹೇಳಬಹುದು.

ಕೋಲ್ಕತಾ ನೈಟ್‌ ರೈಡರ್ಸ್ ಆರಂಭಿಕ ಬ್ಯಾಟ್ಸ್‌ಮನ್‌, ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿಗೆ ಒಂದು ಕೌಶಲವನ್ನು ಕಲಿಸಬೇಕೆಂಬ ಬಗ್ಗೆ ಇತ್ತೀಚೆಗೆ ಹೇಳಿಕೊಂಡಿದ್ದಾರೆ. ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ಜೊತೆ ಸಂಭಾಷಣೆ ನಡೆಸಿರುವ ಗಿಲ್‌, ವಿರಾಟ್‌ ಕೊಹ್ಲಿಗೆ ಒಂದೇ ಒಂದು ಕೌಶಲವನ್ನು ಕಲಿಸಿಕೊಡಲು ಇಷ್ಟಪಡುತ್ತೇನೆ ಎಂಬ ಅಂಶವನ್ನು ಬಹಿರಂಗಪಡಿಸಿದ್ದಾರೆ.

“ಒಂದೇ ಒಂದು ಅಂಶವೇನೆಂದರೆ…ಫಿಫಾ (ವಿಡಿಯೋ ಗೇಮ್‌). ಫಿಫಾ ವಿಡಿಯೋ ಗೇಮ್‌ನಲ್ಲಿ ಅವರು ಯಾವಾಗಲೂ ಹೆಣಗಾಡುತ್ತಾರೆ ಮತ್ತು ನನ್ನ ವಿರುದ್ಧ ಅವರು ಯಾವಾಗಲೂ ಸೋಲುತ್ತಾರೆ,” ಎಂದು ಹೇಳಿದರು. ವಿಡಿಯೋ ಗೇಮ್‌ ಆಡುವುದರಲ್ಲಿ ಕೊಹ್ಲಿಗೆ ಆಸಕ್ತಿ ಜಾಸ್ತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ, ಹಾಗಾಗಿ ಗಿಲ್‌ ಮಾತಿಗೆ ಅವರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆಂಬುದು ಆಸಕ್ತಿ ಕೆರಳಿಸಲಿದೆ.

ವಿರಾಟ್‌ ಕೊಹ್ಲಿ ಹಾಗೂ ಶುಭಮನ್‌ ಗಿಲ್ ಇಬ್ಬರೂ 2021ರ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಆಡಿದ್ದರು. ಆದರೆ. ಬಯೋ ಬಬಲ್‌ನಲ್ಲಿ ಆಟಗಾರರಿಗೆ ಕೋವಿಡ್‌-19 ಪಾಸಿಟಿವ್‌ ಬಂದಿದ್ದರಿಂದ ಐಪಿಎಲ್‌ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ವಿರಾಟ್‌ ಕೊಹ್ಲಿ 7 ಪಂದ್ಯಗಳಿಂದ 198 ರನ್‌ ಗಳಿಸಿದ್ದರೆ, ಗಿಲ್‌ 133 ರನ್‌ಗಳನ್ನು ಗಳಿಸಿದ್ದರು.

ಇದೀಗ ಟೀಮ್‌ ಇಂಡಿಯಾ ಗಮನ ಉದ್ಘಾಟನಾ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಮೇಲೆ ಇದೆ. ಜೂನ್‌ 18 ರಿಂದ 22ರವರೆಗೆ ಇಂಗ್ಲೆಂಡ್‌ನ ಸೌತಾಮ್ಟನ್‌ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮುಖಾಮುಖಿಯಾಗಲಿವೆ.

 

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...