ನಮ್ಮನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ಬೇಜಾರಾಗಲ್ವಾ?: ಸಚಿವ ಪರಮೇಶ್ವರ್ ಪ್ರಶ್ನೆ
ಬೆಂಗಳೂರು: ನಮ್ಮನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ಬೇಜಾರಾಗಲ್ವಾ? ಎಂದು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಅನವಶ್ಯಕವಾಗಿ ಡಿನ್ನರ್ ಮೀಟಿಂಗ್, ರಾಜಕೀಯ ಮೀಟಿಂಗ್ಸ್ ಮಾಡಿಲ್ಲ, ಮಾಡುವುದೂ ಇಲ್ಲ. ಮುಂದೆಯೂ ಅನವಶ್ಯಕ ಭೇಟಿಗಳನ್ನು ಮಾಡಲ್ಲ. ಇದು ನನ್ನ ಸ್ಪಷ್ಟ ಹೇಳಿಕೆ.
ಏನೂ ಇಲ್ಲದೇ ನಮ್ಮನ್ನು ಆಪಾದಿತರ ಸ್ಥಾನದಲ್ಲಿ ನಿಲ್ಲಿಸಿದರೆ ಬೇಜಾರಾಗಲ್ವಾ? ನಾವೆಲ್ಲ ಜವಾಬ್ದಾರಿ ಇರೋರು, ಹುಡುಗಾಟಿಕೆ ಮಾಡೋರಲ್ಲ, ನಾವು ಪಕ್ಷದಲ್ಲಿ ಹಿರಿಯರು, ನಮಗೂ ಜವಾಬ್ದಾರಿ ಇದೆ ಎಂದು ಗರಂ ಆಗಿದ್ದಾರೆ.
ಗಂಗಾ ಕಲ್ಯಾಣ ಯೋಜನೆ ಹಣ ದುರುಪಯೋಗ ವಿಚಾರ ಕುರಿತು ಮಾತನಾಡಿದ ಸಚಿವರು, ಗಂಗಾ ಕಲ್ಯಾಣ ಅಕ್ರಮ ಆರೋಪದ ಪರಿಶೀಲನೆ ನಮ್ಮ ಸಮಿತಿ ಮಾಡ್ತಿದೆ. ಅವ್ಯವಹಾರ ಆಗಿದೆ ಅನ್ನೋದು ಪತ್ತೆ ಆಗಬೇಕು, ಅಕ್ರಮ ಆಗಿದ್ರೆ ಪತ್ತೆ ಮಾಡ್ತೇವೆ, ಈಗಲೇ ಅದರ ಬಗ್ಗೆ ಹೇಳೋಕ್ಕಾಗಲ್ಲ ಎಂದು ಹೇಳಿದರು.