ನಮ್ಮ ಬೆಂಗಳೂರು ಅದ್ಭುತ ಅನ್ನೋಕೆ 9 ಕಾರಣಗಳು

Date:

ನಮ್ಮ ಬೆಂಗಳೂರು ಅದ್ಭುತ ಅನ್ನೋಕೆ 9 ಕಾರಣಗಳು

ಅದು ಇದು ಅಂಥಲ್ಲ! ಯಾವ್ದೇ ನಗರವನ್ನ ತಗೋ ಗುರು, ಒಂದಲ್ಲ ಒಂದು ರೀತಿಯಲ್ಲಿ ಜನರನ್ನ ಆಕರ್ಷಿಸುತ್ತದೆ! ಇವತ್ತಿನ ಟ್ರೆಂಡೇ ಹಂಗಿದೆ! ಯಾರನ್ನೇ ಕೇಳಿದ್ರೂ ಸಿಟಿ, ಸಿಟಿ, ಸಿಟಿ…! ನಮ್ಮ ಅಗತ್ಯಕ್ಕೆ ತಕ್ಕಂತೆ, ನಮ್ ಲೈಫ್ ಸ್ಟೈಲ್ ಗೆ ಬೇಕಾದಂಗೆ ನಗರಗಳೂ ಮಾರ್ಪಡ್ತಾ ಇವೆ! ಇಂಡಿಯಾದ ನಗರಗಳಂತೂ ಒಂದಕ್ಕಿಂತ ಒಂದು ಚೆಂದ! ಅದ್ಭುತ! ಅತ್ಯಾದ್ಭುತ! ಈ ನಮ್ ಇಂಡಿಯಾದ ಸಿಟಿಗಳಲ್ಲಿ ನಮ್ ಬೆಂಗಳೂರು ಇದೆಯಲ್ಲಾ ಇದೇ ಒಂದು ಅದ್ಭುತ ಗುರೂ..,!
ಏನ್ ಸಾರ್, ಇಂಡಿಯಾದಲ್ಲಿ ಬೆಂಗಳೂರೇ ಅದ್ಭುತ ಸಿಟಿನಾ? ಮುಂಬೈ, ಡೆಲ್ಲಿ ಎಲ್ಲ ಬೆಂಗಳೂರು ಮುಂದೆ ಡುಮ್ಕಿನಾ? ಹೌದು, ಬಾಸ್ ಇಡೀ ಇಂಡಿಯಾದ ಬೇರೆ ಬೇರೆ ನಗರಗಳಿಗಿಂತ ಬೆಂಗಳೂರೇ ಅದ್ಭುತ! ಆಸಮ್! ಅಮೇಜಿಂಗ್! ಇದಕ್ಕೆ 9 ಮುಖ್ಯವಾದ ಕಾರಣಗಳನ್ನೂ ಕೊಡ್ತೀವಿ! ನೋಡಿ.

1. ಹವಾಮಾನ ಅಂದ್ರೆ ಹವಮಾನ: ನಿಮಗಿದು ಗೊತ್ತಾ? ಡೆಹ್ರಾಡೂನ್ ಗಿರಿಧಾಮಕ್ಕಿಂತಲೂ ಎತ್ತರದ ಪ್ರದೇಶದಲ್ಲಿ ಬೆಂಗಳೂರಿದೆ! ವರ್ಷವೀಡೀ ಇಲ್ಲಿ ಒಳ್ಳೆ ಹವಮಾನ ಇರುತ್ತೆ! ಯಾವತ್ತೂ ಕೂಡ , ಸಾಕಪ್ಪ, ಸಾಕು ಅಂತ ಅನಿಸುವುದೇ ಇಲ್ಲ! ಹವಾಮಾನ ಅಂದ್ರೆ ಹವಾಮಾನ, ಅದು ನಮ್ಮ ಬೆಂಗಳೂರಿಂದು ಸಾರ್! ಇಂಥ ಒಳ್ಳೆಯ ಹವಮಾನ ಯಾವ ಮೆಟ್ರೋಪಾಲಿಟನ್ ನಗರಗಳಲ್ಲಿ ಇಲ್ಲವೇ ಇಲ್ಲ!

2. ಅತಿ ಹೆಚ್ಚಿನ ಮಹಿಳಾ ಉದ್ಯೋಗಿಗಳ ನಗರ : ಭಾರತದ ಬೇರೆಲ್ಲಾ ನಗರಗಳಿಗಿಂತ ನಮ್ಮ ಬೆಂಗಳೂರಿನಲ್ಲೆ ಮಹಿಳೆಯರು ಸಬಲಳಾಗಿರುವುದು! ಹ್ಞೂಂ, ಸಾರ್ ದಿನ ಇಪ್ಪತ್ನಾಲ್ಕು ಗಂಟೆಗಳಲ್ಲಿಯೂ ಸುರಕ್ಷತೆ ಇಲ್ಲದ ಉದ್ಯೋಗಗಳಲ್ಲಿಯೂ ಮಹಿಳೆಯರಿದ್ದಾರೆ! ದೊಡ್ಡ ದೊಡ್ಡ ಕಂಪನಿ ಕೆಲಸ ಬಿಟ್ಟಾಕಿ ಬಾಸ್, ಬಸ್ ಕಂಡಕ್ಟರ್ ಆಗಿ ದುಡಿತಾ ಇದ್ದಾರೆ! ಕ್ಯಾಬ್ ಡ್ರೈವರ್ ಸಹ ಆಗಿದ್ದಾರೆ! ಇಂಡಿಯಾದ ಬೇರೆ ಸಿಟಿಗಳಲ್ಲಿ ಈ ರೀತಿ ಇಲ್ಲ ಅಂತೇನೂ ಇಲ್ಲ! ಅಲ್ಲೂ ಇಂತಹ ಕೆಲಸಮಾಡ್ತಾರೆ! ಆದ್ರೆ ನಮ್ ಬೆಂಗಳೂರಲ್ಲಿ ಮಾತ್ರ ಇನ್ನೂ ಒಂದ ಕೈ ಮೇಲೆ! ಮತ್ತೊಂದು ಹೆಮ್ಮೆ ವಿಷಯ ಅಂದ್ರೆ ಬೇರೆ ಸಿಟಿಗಳಿಗೆ ಕಂಪೈರ್ ಮಾಡಿದ್ರೆ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್ಟಿ!

3.ಇನ್ಕ್ರೆಡಿಬಲ್ ಬಸ್ ಸೇವೆ : ಬಸ್ ಸೇವೆಯಲ್ಲೂ ನಮ್ ಬೆಮಗಳೂರು ಟಾಪ್! ಬಿಎಂಟಿಸಿ ದಿನಕ್ಕೆ ಏನೂ ಇಲ್ಲ ಅಂದ್ರು, ಸರಿಸುಮಾರು 43 ಲಕ್ಷ ಪ್ರಯಾಣಿಕರನ್ನು ಕರೆದೊಯ್ಯುತ್ತದೆ! ಬಿಎಂಟಿಸಿ ಸರ್ವೀಸ್ ಇಲ್ದೇ ಇದ್ದಿದ್ರೆ…? ಬೇಡ್ವೇ ಬೇಡಪ್ಪ ಕಲ್ಪನೆ ಮಾಡಿಕೊಳ್ಳಲಿಕ್ಕೂ ಆಗಲ್ಲ!

4. ರುಚಿ ರುಚಿ ದೋಸೆ : ಎಂಟಿಆರ್, ಸಿಟಿಆರ್, ವಿದ್ಯಾರ್ಥಿ ಭವನ್ ದೋಸೆ ಅಂಥೂ ಸೂಪರೋ ಸೂಪರ್! ಈ ದೋಸೆ ಮಾತ್ರ ಅಲ್ಲ ದೊನ್ನೆ ಬಿರಿಯಾನಿ, ಹಳ್ಳಿ ಊಟ, ಮುದ್ದೆ ಸಾಂಬರ್ಗೂ ಬೆಂಗಳೂರು ಫೇಮಸ್!

5 : ಕಲೆಗೆ ಪ್ರೋತ್ಸಾಹ ನೀಡುವ ಕೆಲವೇ ಸಿಟಿಗಳಲ್ಲೊಂದು : ಒಂದೊಂದು ಊರು, ದೇಶ,ಭಾಗದಲ್ಲಿ ಒಂದೊಂದು ಬಗೆಯ ಕಲೆ ಕಲಾವಿದರು ಹೆಸರುವಾಸಿ ಆಗಿರ್ತಾರೆ! ಆದರೆ ನಮ್ ಬೆಂಗಳೂರಿನಲ್ಲಿ ವಿವಿಧ ಕಲೆಗಳಿಗೆ ಪ್ರೋತ್ಸಾಹ ಸಿಗುತ್ತೆ! ನಾನ ಬಗೆಯ ಜಾನಪದ ಕಲೆಗಳಲ್ಲಿ ಬೆಂಗಳೂರು ಶ್ರೀಮಂತವಾಗಿದೆ! ಹೀಗೆ ಕಲೆಗೆ ಉತ್ತೇಜನ ನೀಡುವ ಕೆಲವೇ ಕೆಲವು ನಗರಗಳಲ್ಲಿ ಬೆಂಗಳೂರೂ ಸಹ ಒಂದಾಗಿದೆ! ಒಮ್ಮೆ ನೃತ್ಯಗ್ರಾಮ ಡ್ಯಾನ್ಸ್ ವಿಲೇಜ್ ಗೆ ಭೇಟಿ ನೀಡಿ! ನಿಮಗೆ ಅಂಥಾ ಅದ್ಭುತ ಕಲಾ ಅನುಭವ ಲೈಫ್ ನಲ್ಲಿ ಆಗಿರಲು ಸಾಧ್ಯವೇ ಇಲ್ಲ!

6. ಶ್ರೀಮಂತ ಸ್ಟ್ರೀಟ್ ಪೇಯಿಂಟಿಂಗ್ : ಹಾಗೇ ಸುಮ್ನೆ ಬೆಂಗಳೂರಿನ ಸ್ಟ್ರೀಟ್ ವಾಲ್ (ಬೀದಿಗೋಡೆ) ಗಳತ್ತ ಹಾಗೇ ಕಣ್ಣಾಡಿಸಿ! ವ್ಹಾವ್ ಎಂಥಾ ಅದ್ಭುತ ವಾಲ್ ಪೇಯಿಂಟಿಂಗ್ ಗಳು! ಎಂಥಾ ಸ್ಟ್ರೀಟ್ ಪೇಯಿಂಟಿಂಗ್ ಗಳು! ಚಿತ್ರಕಲಾವಿದರು ತಮ್ಮ ಕಲೆಯನ್ನು ಪ್ರೀತಿಸುತ್ತಾ, ನಗರದ ಬೀದಿಬೀದಿಗಳಲ್ಲಿ ತಮ್ಮ ಅದ್ಭುತ ಚಿತ್ರಗಳನ್ನು ಗೀಚಿದ್ದಾರೆ!

7. ತಂತ್ರಜ್ಞಾನ ಮತ್ತು ಬಂಡವಾಳ ಹೂಡಿಕೆ : ಬೆಂಗಳೂರು “ಭಾರತದ ಸಿಲಿಕಾನ್ ಸಿಟಿ”. ಇದು ಐಟಿ ಉದ್ಯಮಗಳ ಕೇಂದ್ರ! ಹೆಚ್ಚು ಹೆಚ್ಚು ಬಂಡವಾಳ ಹೂಡಿಕೆಗೆ ಹೇಳುಮಾಡಿಸಿದ ನಗರವಾಗಿದೆ!

8. ಶ್ರೀಮಂತ ಪರಂಪರೆ : ಬೆಂಗಳೂರು ಕೇವಲ ಐಟಿ ಕೇಂದ್ರವಾಗಿಲ್ಲ! ಬೆಂಗಳೂರು ಭವ್ಯಪರಂಪರೆಯನ್ನೂ ಹೊಂದಿದೆ. ಈ ನಮ್ಮ ಸುಂದರ ಪರಂಪರೆಯನ್ನು ಬೇರೆ ಬೇರೆ ಕಡೆಗೂ ಹೆಮ್ಮೆಯಿಂದ ಹಬ್ಬಿಸ ಬಹುದು! ಅಷ್ಟೊಂದು ಭವ್ಯ, ಸುಂದರ ಪರಂಪರೆ ಬೆಂಗಳೂರಲ್ಲಿದೆ.

9. ಹೆಚ್ಚು ಪಬ್ ಗಳಿವೆ : ಇಡೀ ಏಷ್ಯಾದಲ್ಲಿಯೇ ಹೆಚ್ಚಿನ ಸಂಖ್ಯೆಯ ಪಬ್ ಗಳಿರುವುದು ಬೆಂಗಳೂರಿನಲ್ಲಿ! ಇದನ್ನು ನೀವು ನಂಬಲು ಕಷ್ಟವಾದರೂ ಇದು ಸತ್ಯ!

ಹ್ಞೂಂ, ನೋಡಿದ್ರಲ್ಲ, ಈ ಒಂಬತ್ತು ಪ್ರಮುಖ ಕಾರಣಗಳಿಂದಾಗಿ ಇಂಡಿಯಾದಲ್ಲಿ ಬೆಂಗಳೂರೇ ಅದ್ಭುತ ಎಂದಿದ್ದು! ಸುಂದರ ಉದ್ಯಾನವನಗಳು, ಬೆಂಗಳೂರಿನಲ್ಲಿ ಇನ್ನೂ ಏನೇನೋ ಇದೆ! ನಮ್ ಲೈಫ್ ಗೆ ಏನ್ ಬೇಕೋ ಅದೆಲ್ಲಾ ಇದೆ! ಬೆಂಗಳೂರಿನಲ್ಲಿ ಏನ್ ಇಲ್ಲ ಕೇಳಿ? ಎಲ್ಲವೂ ಇದೆ! ಬೇರೆ ನಗರಗಳಲ್ಲಿ ಇಲ್ದೇ ಇರೋ ಇನ್ನೂ ಒಂದು ಅದ್ಭುತ ನಮ್ ಬೆಂಗಳೂರಿನಲ್ಲಿ ಇದೆ! ಅದೇನು ಗೊತ್ತಾ? “ನೆಮ್ಮದಿ”! ಕೋಟಿಕೋಟಿ ಸಂಬಳ ಸಿಕ್ಕಿದ್ರೂ ಬೇರೆ ನಗರಗಳಲ್ಲಿ ಬೆಂಗಳೂರಿನಲ್ಲಿ ಸಿಗುವ ನೆಮ್ಮದಿ ಸಿಗಲಿಕ್ಕೆ ಚಾನ್ಸೇ ಇಲ್ಲ! ನಮ್ ಬೆಂಗಳೂರು ಸೂಪರ್ ಗುರೂ..! ಇಂಡಿಯಾನೇ ಒಂದು ಅದ್ಭುತ! ಇಂಡಿಯಾದಲ್ಲಿ ನಮ್ ಬೆಂಗಳೂರೇ ಅದ್ಭುತ!

Share post:

Subscribe

spot_imgspot_img

Popular

More like this
Related

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ!

ನಾಡಿನ ಹಿರಿಯ ಸಾಹಿತಿ ಎಸ್ ಎಲ್ ಭೈರಪ್ಪ ನಿಧನ! ಬೆಂಗಳೂರು: ಪ್ರಸಿದ್ಧ ಕನ್ನಡ...

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ!

ಬೆಂಗಳೂರಿಗರಿಗಾಗಿ ನಿರ್ಮಿಸಿದ ಜಿಬಿಎ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ವಿಳಂಬ! ಬೆಂಗಳೂರು:- ಬೆಂಗಳೂರಿಗರಿಗಾಗಿ ನಿರ್ಮಿಸಿದ...

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ

ಕರ್ನಾಟಕದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಬೆಂಗಳೂರು:...

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

ನಿಮ್ಮ ದಿನಚರಿಯಲ್ಲಿ ಸಾಸಿವೆಯನ್ನು ಬಳಸುವುದರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ? ಸಾಸಿವೆ ಎಂದಾಕ್ಷಣ ಮನಸ್ಸಿನಲ್ಲಿ...