ನವಗ್ರಹ ಸಿನಿಮಾ ಖ್ಯಾತಿಯ ನಟನಿಗೆ ಹೃದಯಾಘಾತ! ಆಗಿದ್ದೇನು ?
ಇತ್ತೀಚಿನ ವರ್ಷಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಅದೇ ಸಾಲಿಗೆ ಮತ್ತೊಬ್ಬ ನಟ ಸೇರ್ಪಡೆಯಾಗಿದ್ದಾರೆ. ನವಗ್ರಹ ಸಿನಿಮಾ ಸೇರಿ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಗಿರಿ ದಿನೇಶ್ ಹೃದಯಾಘಾತದಿಂದ ನಿಧನರಾಗಿದ್ದಾರೆ. ಗಿರಿ ದಿನೇಶ್ ಅವರಿಗೆ 45 ವರ್ಷ ವಯಸ್ಸಾಗಿತ್ತು. ಅವರು ನಿನ್ನೆ ಸಂಜೆ ಪೂಜೆ ಮಾಡುವ ವೇಳೆ ದಿಢೀರ್ ಹೃದಯಾಘಾತವಾಗಿದೆ. ಹೃದಯಾಘಾತ ಆಗುತ್ತಿದ್ದಂತೆ ಮನೆಯಲ್ಲೇ ಗಿರಿ ಅವರು ಕುಸಿದು ಬಿದ್ದಿದ್ದರು.
ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲು ಮುಂದಾಗಿದ್ದು, ಆದ್ರೆ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಗಿರಿ ದಿನೇಶ್ ನವಗ್ರಹ ಸಿನಿಮಾದಿಂದಲೇ ಭಾರೀ ಖ್ಯಾತಿಯನ್ನು ಗಳಿಸಿದ್ದರು.