ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆ: ಹೀಗಿರಲಿ ಪೂಜೆ-ಪುನಸ್ಕಾರ!

Date:

ನವರಾತ್ರಿಯ ಮೂರನೇ ದಿನ ಚಂದ್ರಘಂಟೆಯ ಆರಾಧನೆ: ಹೀಗಿರಲಿ ಪೂಜೆ-ಪುನಸ್ಕಾರ!

ದುರ್ಗಾಮಾತೆಯ ವೈವಾಹಿಕ ಅವತಾರವಾಗಿರುವ ಚಂದ್ರಘಂಟೆಯನ್ನು ನವರಾತ್ರಿಯ ಮೂರನೇ ದಿನ ಆರಾಧಿಸಲಾಗುತ್ತದೆ, ದುರ್ಗಾ ಮಾತೆಯ ರೌದ್ರಸ್ವರೂಪವಾಗಿಯೂ ಚಂದ್ರಘಂಟೆ ಕಂಡುಬರುತ್ತಾಳೆ. ದುಷ್ಟಶಕ್ತಿಗಳಿಗೆ ಸಿಂಹಸ್ವಪ್ನವಾಗಿಯೂ, ತನ್ನ ಭಕ್ತರನ್ನು ಪ್ರೀತಿಯಿಂದ ಸಲಹುವ ತಾಯಿ ಈಕೆ.

ಈ ದೇವಿಯ ಸ್ವರೂಪವು ಶಾಂತ ರೀತಿಯಲ್ಲಿ ಇರುತ್ತದೆ, ಮತ್ತು ಶ್ರೇಯಸ್ಸನ್ನು ನೀಡುತ್ತದೆ. ತಾಯಿಯ ತಲೆ ಮೇಲೆ ಗಂಟೆಯ ಆಕಾರದಲ್ಲಿ ಅರ್ಧ ಚಂದ್ರ ಇರುವುದರಿಂದ ಚಂದ್ರಘಂಟಾ ದೇವಿ ಎಂಬ ಹೆಸರಿನಿಂದ ಕರೆಯಲಾಗುತ್ತದೆ.

ಆಕೆಯ ಶರೀರದ ಬಣ್ಣ ಚಿನ್ನದಂತೆ ಫಳಫಳಿಸುತ್ತದೆ. ಹತ್ತು ಕೈಗಳಿದ್ದು, ಎಲ್ಲದರಲ್ಲೂ ಖಡ್ಗ ಮೊದಲಾದ ಶಸ್ತ್ರ, ಬಾಣಗಳಿವೆ. ಆಕೆಯ ವಾಹನ ಸಿಂಹವಾಗಿದ್ದು, ಯುದ್ಧಕ್ಕೆ ಹೊರಟಂತಹ ಮುದ್ರೆ ಇದೆ. ಆಕೆಯ ಘಂಟೆಯಾಕಾರದ ಚಂದ್ರನ ಶಬ್ದವನ್ನು ಕೇಳಿ ದುಷ್ಟರು ತಮ್ಮ ಶಕ್ತಿಯನ್ನು ಕಳೆದುಕೊಂಡಂತೆ ನಿಶ್ಶಕ್ತರಾಗುತ್ತಾರೆ

ಯಾರು ಆ ದೇವಿಯನ್ನು ಶ್ರದ್ಧಾ- ಭಕ್ತಿಯಿಂದ ಆರಾಧನೆ ಮಾಡುತ್ತಾರೋ ಅಂಥವರಿಗೆ ಅಲೌಕಿಕವಾದ ಅನುಭವ ಆಗುತ್ತದೆ. ದಿವ್ಯವಾದ ಸುಗಂಧಗಳ ಸುತ್ತ ಇರುವಂತೆ ಭಾಸವಾಗುತ್ತದೆ. ಹಿಂದೆಂದೂ ಕಂಡರಿಯದಂಥ ವಿಶಿಷ್ಟ ಧ್ವನಿಗಳು ಕೇಳಿಬರುತ್ತವೆ. ಅಂಥವರ ಸಕಲ ಪಾಪಗಳು ನಶಿಸಿ ಹೋಗುತ್ತವೆ. ಆರಾಧಕನಾದವನಿಗೆ ಪರಾಕ್ರಮ ಬರುತ್ತದೆ. ಚಂದ್ರಘಂಟಾ ದೇವಿಯ ಆ ಧ್ವನಿಯ ಮಾತ್ರದಿಂದಲೇ ಪ್ರೇತಬಾಧೆ ಮೊದಲಾದವುಗಳಿಂದ ರಕ್ಷಣೆ ದೊರೆಯುತ್ತದೆ. ಹಲವು ಕಷ್ಟಗಳು ನಿವಾರಣೆ ಆಗುತ್ತವೆ

ಚಂದ್ರಘಂಟಾ ದೇವಿಯ ಪೂಜಾ ವಿಧಿ:
ಚಂದ್ರಘಂಟಾ ದೇವಿಗೆ ಮಲ್ಲಿಗೆ ಹೂವು ಅರ್ಪಿಸಿ, ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನ ಮಾಡಬೇಕು. ಇದರ ಜತೆಗೆ 16 ಬಗೆಯ ಅರ್ಪಣೆ ನೀಡಿ, ಆರತಿ ಮಾಡಬೇಕು. ಕೆಂಪು ಬಣ್ಣದ ಬಟ್ಟೆಯ ಅಲಂಕಾರ ಮಾಡಿದಲ್ಲಿ ಆ ತಾಯಿಯು ಆರಾಧಕರ ಕುಟುಂಬಕ್ಕೆ ಶ್ರೇಯಸ್ಸನ್ನು ನೀಡುತ್ತಾಳೆ.

ಚಂದ್ರಘಂಟಾ ದೇವಿಯ ಕಥೆ:
ಆ ಜಗಜ್ಜನನಿಯು ಶಿವನನ್ನು ವಿವಾಹ ಆಗಬೇಕಾದ ಸಂದರ್ಭದಲ್ಲಿ ಆ ಮಹಾದೇವ ತನ್ನ ಸಕಲ ಗಣಗಳ ಜತೆಗೆ ಮದುವೆ ನಡೆಯುವ ಸ್ಥಳವನ್ನು ಪ್ರವೇಶಿಸುತ್ತಾನೆ. ಆ ಭಯಂಕರವಾದ ರೂಪವನ್ನು ಕಂಡು ಮಾತೆ ಮೂರ್ಛೆ ಹೋಗುತ್ತಾಳೆ. ಆ ಚಂದ್ರಘಂಟಾ ರೂಪದಲ್ಲಿ ಕಾಣಿಸಿಕೊಂಡ ದೇವಿಯು, ಶಿವನು ರಾಜಕುಮಾರನಂತೆ ಕಾಣಿಸಿಕೊಳ್ಳಬೇಕು ಎಂದು ಪ್ರಾರ್ಥಿಸಿದಾಗ ಅದರಂತೆಯೇ ಶಿವನು ರೂಪ ತಾಳುತ್ತಾನೆ. ಆಗ ಶಿವ- ಪಾರ್ವತಿಯ ವಿವಾಹ ನೆರವೇರುತ್ತದೆ.

ಕೆಂಪು ಬಣ್ಣಕ್ಕೆ ಆದ್ಯತೆ:
ನವರಾತ್ರಿಯ ಮೂರನೇ ದಿನ ಕೆಂಪು ಬಣ್ಣಕ್ಕೆ ಆದ್ಯತೆ ನೀಡಲಾಗುತ್ತದೆ. ಚಂದ್ರಘಂಟಾ ದೇವಿಯು ಧೈರ್ಯ, ಪರಾಕ್ರಮ ಹಾಗೂ ಸೌಂದರ್ಯದ ಪ್ರತೀಕವಾಗಿದ್ದು, ಕೆಂಪು ಬಣ್ಣದ ವಸ್ತ್ರಗಳಿಂದ ತಾಯಿಗೆ ಅಲಂಕಾರ, ಕೆಂಪು ಬಣ್ಣದ ಹೂವುಗಳಿಂದ ಪೂಜೆ ಮಾಡಲಾಗುತ್ತದೆ.

ಚಂದ್ರಘಂಟೆಯ ಮಂತ್ರ
ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ

ಚಂದ್ರಘಂಟೆಯ ಧ್ಯಾನ
ವಂದೇ ವಂಚಿತಾಲಭಯ ಚಂದ್ರಧಾಕೃತ್ರಶೇಖರಂ
ಸಿಂಹರೂಢ ಚಂದ್ರಘಂಟ ಯಶಸ್ವಿನೀಂ
ಮಣಿಪುರಾ ಸ್ಥಿತಂ ತೃತಿಯಾ ದುರ್ಗಾ ತ್ರಿನೇತ್ರಂ
ಶಂಖ, ಗಧಾ, ತ್ರಿಶೂಲ, ಚಪಶರ, ಪದ್ಮಕಮಂಡಲು ಮಾಲಾ ವರಭಿತಕರಂ
ಪತಂಬರಾ ಪರಿಧಿಂ ಮೃದುಹಾಸ ನಾನಾಲಂಕಾರ ಭೂಷಿತಂ
ಮಂಜೀರಾ, ಹರಾ, ಕೆಯುರಾ, ಕಿಕಿಂಣಿ, ರತ್ನಾಕುಂಡಲ ಮಂಡಿಯಂ
ಪ್ರಫುಲ್ಲ ವಂದನಾ ಬಿಬಾಧಾರ ಕಾಂತಾ ಕಪೋಲಂ ತುಗಂ ಕುಚಂ
ಕಾಮನಿಯಂ ಲಾವಣ್ಯಂ ಕ್ಷಿನಾಕತಿ ನಿತಂಬನಿಂ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...