ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸುವುದೇಕೆ..? ಇಲ್ಲಿದೆ ಮಾಹಿತಿ

Date:

ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸುವುದೇಕೆ..? ಇಲ್ಲಿದೆ ಮಾಹಿತಿ

 

ಇಂದಿನಿಂದ ಒಂಬತ್ತು ದಿನಗಳ ಕಾಲ ಎಲ್ಲೆಲ್ಲೂ ನವರಾತ್ರಿ ಸಂಭ್ರಮ ಮನೆ ಮಾಡಿದೆ. ಶಕ್ತಿದೇವತೆಯ ಆರಾಧನೆ. ದುರ್ಗಾ ಪೂಜೆ.. ಪಾರಾಯಣ.. ನಿತ್ಯ ನವದುರ್ಗೆಯರನ್ನು ಹಾಡುವ, ಕೊಂಡಾಡುವ ಈ ನವರಾತ್ರಿ, ದೇವಿ ಒಲುಮೆಗೆ ಪಾತ್ರರಾಗೋಕೆ ಸುಸಂದರ್ಭ. 9 ದಿನಗಳ ಕಾಲ ಆಚರಿಸುವ ಈ ಪರ್ವಕ್ಕೆ ದುರ್ಗೋತ್ಸವ ಎಂದು ಕರೆಯುತ್ತಾರೆ. ನವರಾತ್ರಿ ಒಂಬತ್ತು ರಾತ್ರಿಗಳ ಸಮೂಹ. ನವರಾತ್ರಿಯ ಒಂದೊಂದು ದಿನವೂ ಬಹಳ ವಿಶೇಷವಾಗಿದೆ.

9 ದಿನಗಳ ಕಾಲ ಆದಿಶಕ್ತಿಯನ್ನು ನವ ವಿಧದಲ್ಲಿ ಪೂಜಿಸಲಾಗುತ್ತೆ. ದೇವಿಯ ರೂಪವಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಹಾಗೂ ಸಿದ್ಧಿದಾತ್ರಿ ದೇವಿಯರನ್ನು ಒಂಬತ್ತು ದಿನಗಳ ಕಾಲ ಆರಾಧಿಸಲಾಗುತ್ತೆ. ದೇವಿಯ ಪರಮ ಪವಿತ್ರ 9 ಸ್ವರೂಪಗಳ ಆರಾಧನೆಯ ಪರ್ವವೇ ನವರಾತ್ರಿ.

ಮೊದಲ ದಿನ ಶೈಲಪುತ್ರಿ ಪೂಜೆ

ಶಾಸ್ತ್ರಗಳ ಪ್ರಕಾರ, ನವರಾತ್ರಿಯ ಒಂದೊಂದು ದಿನದ ಉಪಾಸನೆಗೂ ವಿಶೇಷ ಮಹತ್ವವಿದೆ. ನವರಾತ್ರಿಯ ಪ್ರಥಮ ದಿನ ದೇವಿಯ ಸ್ವರೂಪವಾದ ಶೈಲಪುತ್ರಿ ಪೂಜೆ ಮಾಡಲಾಗುತ್ತೆ. ಜಗಜ್ಜನನಿ ದುರ್ಗಾದೇವಿಯ ಮೊದಲ ಸ್ವರೂಪ ಶೈಲಪುತ್ರಿ. ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆಯನ್ನು ಶೈಲಪುತ್ರಿ ಎನ್ನಲಾಗುತ್ತೆ. ಶೈಲಪುತ್ರಿಯ ರೂಪ ಅತ್ಯಂತ ಸುಂದರ. ಪಾರ್ವತಿದೇವಿಯ ಪ್ರತಿರೂಪವಾದ ಶೈಲಪುತ್ರಿ ವೃಷಭವಾಹನೆ.

ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ಸರಳ ವ್ಯಕ್ತಿತ್ವ, ಸೌಮ್ಯ ರೂಪ ಈಕೆಯದ್ದು. ಶಿವಪುರಾಣದ ಪ್ರಕಾರ, ಸತಿದೇವಿ ದಕ್ಷಪ್ರಜಾಪತಿಯ ಯಜ್ಞಕುಂಡಕ್ಕೆ ಹಾರಿ ಭಸ್ಮವಾಗ್ತಾಳೆ. ಸತಿ ದೇವಿಯೇ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಪುತ್ರಿಯಾಗಿ ಜನಿಸಿ, ಶೈಲಪುತ್ರಿಯಾದಳು. ನಂತರ ಶೈಲಪುತ್ರಿ ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ವಿವಾಹವಾದಳು.

ಅಸುರರಿಂದ ತೊಂದರೆ ಅನುಭವಿಸುತ್ತಿದ್ದ, ದೇವಾನುದೇವತೆಗಳಿಗೆ ದುರ್ಗೆಯಾಗಿ ಅಭಯ ಹಸ್ತ ನೀಡಿದವಳೇ ಈ ಶೈಲಪುತ್ರಿ. ಶೈಲಪುತ್ರಿ ಅನಂತ ಫಲಗಳನ್ನು ಕರುಣಿಸುವ ದೇವಿ. ನವರಾತ್ರಿಯ ಮೊದಲ ದಿನ ಶ್ರದ್ಧಾ ಭಕ್ತಿಯಿಂದ ಶೈಲಪುತ್ರಿಯನ್ನು ಆರಾಧಿಸಿದ್ರೆ ದೇವಿ ಭಕ್ತರಿಗೆ ವಿಶೇಷ ಶಕ್ತಿಯನ್ನು ಕರುಣಿಸ್ತಾಳೆ ಎನ್ನಲಾಗುತ್ತೆ. ನವರಾತ್ರಿಯ ಮೊದಲ ದಿನ ಶೈಲಪುತ್ರಿಯ ಮಂತ್ರವನ್ನು ಜಪಿಸಿ, ದೇವಿಯ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ವೆ ಎಂಬ ನಂಬಿಕೆ ಇದೆ.

ಶೈಲಪುತ್ರಿ ದೇವಿ ಪೂಜೆ​

ಈ ದಿನದಂದು ಶೈಲಪುತ್ರಿ ದೇವಿಯನ್ನು ಪೂಜಿಸುವುದರಿಂದ, ಸಾಧಕರ ಮನಸ್ಸು ಆಧ್ಯಾತ್ಮಿಕತೆ ಮತ್ತು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ. ಶೈಲಪುತ್ರಿಯನ್ನು ಪೂಜಿಸುವ ವಿಧಾನವು ತುಂಬಾ ಸರಳವಾಗಿದೆ ಮತ್ತು ಅದನ್ನು ಸರಿಯಾಗಿ ಮಾಡುವುದರಿಂದ ಸಾಧಕನು ಅವಳ ಅಪಾರ ಆಶೀರ್ವಾದವನ್ನು ಪಡೆಯುತ್ತಾನೆ. ಎಲ್ಲಕ್ಕಿಂತ ಮೊದಲು ಸಾಧಕನು ಶುದ್ಧನಾಗಿರಬೇಕು ಮತ್ತು ಪೂಜೆ ಮಾಡುವ ಸ್ಥಳವನ್ನು ಶುದ್ಧಗೊಳಿಸಬೇಕು. ಶೈಲಪುತ್ರಿ ದೇವಿಯ ವಿಗ್ರಹ ಅಥವಾ ಫೋಟೋವನ್ನು ಪವಿತ್ರ ಸ್ಥಳದಲ್ಲಿ ಸ್ಥಾಪಿಸಿ ಮತ್ತು ಅದಕ್ಕೆ ಹೂವಿನ ಹಾರವನ್ನು ಅರ್ಪಿಸಿ.

ಬಿಳಿ ಬಣ್ಣದ ಬಟ್ಟೆ ಮತ್ತು ಹೂವುಗಳನ್ನು ತಾಯಿಗೆ ಅರ್ಪಿಸಿ, ಏಕೆಂದರೆ ಈ ಬಣ್ಣವು ಶಾಂತಿ ಮತ್ತು ಶುದ್ಧತೆಯ ಸಂಕೇತವಾಗಿದೆ. ಇದರ ನಂತರ, ಪೂಜೆ ಮಾಡುವ ವ್ಯಕ್ತಿಯು ತಾಯಿ ಶೈಲಪುತ್ರಿಯ ಮಂತ್ರಗಳನ್ನು ಪಠಿಸಬೇಕು. ಮಂತ್ರವನ್ನು ಪಠಿಸುವುದರಿಂದ ಮನಸ್ಸು ಶಾಂತವಾಗುತ್ತದೆ ಮತ್ತು ಆ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಶೈಲಪುತ್ರಿಯ ಮುಖ್ಯ ಮಂತ್ರವೆಂದರೆ: “ಓಂ ಶೈಲಪುತ್ರ್ಯೈ ನಮಃ” ಈ ಮಂತ್ರವನ್ನು 108 ಬಾರಿ ಪಠಿಸುವುದು ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದರೊಂದಿಗೆ ತಾಯಿಗೆ ಪ್ರಸಾದವನ್ನು ಅರ್ಪಿಸಿ ಮತ್ತು ಅಂತಿಮವಾಗಿ ತಾಯಿಗೆ ಆರತಿಯನ್ನು ಮಾಡಿ.

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...