ನವರಾತ್ರಿ 7ನೇ ದಿನ: ಕಾಳರಾತ್ರಿ ಪೂಜೆ ಮಹತ್ವ, ಮುಹೂರ್ತ, ಮಂತ್ರದ ಬಗ್ಗೆ ತಿಳಿಯಿರಿ!
9 ದಿನಗಳ ನವರಾತ್ರಿ ಹಬ್ಬದಲ್ಲಿ ಸರಸ್ವತಿ ಪೂಜೆಯು ಮಹತ್ವದ ದಿನವಾಗಿದೆ ಮತ್ತು ಈ ದಿನ ಜ್ಞಾನ, ಬುದ್ಧಿವಂತಿಕೆ, ಸಂಗೀತ ಮತ್ತು ಕಲೆಯ ರೂಪವಾದ ಸರಸ್ವತಿ ಮಾತೆಯನ್ನು ಪೂಜಿಸಲಾಗುತ್ತದೆ. ಶಾರದೀಯ ನವರಾತ್ರಿಯ 7ನೇ ದಿನದಿಂದು ಸರಸ್ವತಿ ದೇವಿಯ ಆವಾಹನೆಯೊಂದಿಗೆ ನವರಾತ್ರಿ ಹಬ್ಬದ ಸರಸ್ವತಿ ಪೂಜೆಯು ನಡೆಯುತ್ತದೆ. ಸರಸ್ವತಿ ಪೂಜೆಯ ಮೂಲಕ ಭಕ್ತರು ಬೌದ್ಧಿಕ ಶಕ್ತಿಯನ್ನು, ಸೃಜನಶೀಲ ಪ್ರಯತ್ನಗಳನ್ನು ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಆಶೀರ್ವಾದವನ್ನು ಪಡೆಯುತ್ತಾರೆ. ಸರಸ್ವತಿ ದೇವಿಯನ್ನು ಪೂಜಿಸುವ ಮೂಲಕ, ವ್ಯಕ್ತಿಗಳು ತಮ್ಮ ಆಂತರಿಕ ಸಾಮರ್ಥ್ಯವನ್ನು ಬೆಳೆಸಿಕೊಳ್ಳುತ್ತಾರೆ. ಬುದ್ಧಿಶಕ್ತಿ ಮತ್ತು ಸೃಜನಶೀಲತೆಯ ನಡುವೆ ಸಾಮರಸ್ಯದ ಸಮತೋಲನವನ್ನು ಹೊಂದುತ್ತಾರೆ.
ಕಾಳರಾತ್ರಿ ದೇವಿಯ ವಾಹನ ಕತ್ತೆಯಾಗಿದ್ದು, ಈ ದಿನ ಕಾಳರಾತ್ರಿಯನ್ನು ವಿಧಿವತ್ತಾಗಿ ಶ್ರದ್ಧಾ ಭಕ್ತಿಯಿಂದ ಪೂಜಿಸಿದರೆ ಜೀವನದಲ್ಲಿ ಸಮಸ್ಯೆಗಳೆಲ್ಲವೂ ದೂರವಾಗುತ್ತವೆ ಎಂಬ ನಂಬಿಕೆ ಇದೆ. ಹಾಗಾದರೆ ಅಕ್ಟೋಬರ್ 9ರಂದು ಕಾಳರಾತ್ರಿ ಪೂಜಾ ಸಮಯ, ಪೂಜಾ ವಿಧಾನ, ಪರಿಹಾರ, ಕಥೆ ಎಲ್ಲವನ್ನೂ ತಿಳಿಯೋಣ.
ಕಾಳಿ ದೇವಿಯನ್ನು ಪೂಜಿಸುವ ಭಕ್ತರು ತುಂಬಾ ಜಾಗರೂಕರಾಗಿ ಪೂಜಾ ನಿಯಮಗಳನ್ನು ಪಾಲಿಸಬೇಕು. ಕೆಂಪು ಹೂವು ಅಂದರೆ ಕಾಳರಾತ್ರಿ ದೇವಿಗೆ ತುಂಬಾ ಇಷ್ಟ. ಹೀಗಾಗಿ ಕೆಂಪು ಹೂವನ್ನು ಪೂಜೆಗೆ ಬಳಸುವುದು ಉತ್ತಮ ಫಲವನ್ನು ನೀಡುತ್ತದೆ.
*ನವರಾತ್ರಿ ವ್ರತ ಮಾಡುವ ಭಕ್ತರು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಎದ್ದು ಸ್ನಾನ ಮಾಡಿ ಪೂಜಾ ಸ್ಥಳವನ್ನು ಸ್ವಚ್ಚಗೊಳಿಸಿ.
* ನಂತರ ಕಾಳರಾತ್ರಿ ದೇವಿಯನ್ನು ಪ್ರತಿಷ್ಠಾಪಿಸಿ, ಹೂವು, ಹಣ್ಣು, ಕರ್ಪೂರ, ಧೂಪ, ಅಲಂಕಾರಿಕ ವಸ್ತುಗಳು, ತೆಂಗಿನಕಾಯಿ, ಎಲೆ, ಅಡಿಕೆ, ಸಿಹಿ ನೈವೇದ್ಯ ಇತ್ಯಾದಿಗಳನ್ನು ಇಟ್ಟು ಪೂಜೆ ಮಾಡಬೇಕು.
* ಕಾಳಿಗೆ ದೀಪವನ್ನು ಹಚ್ಚಿ ಮಂತ್ರಗಳನ್ನು ಪಠಿಸುತ್ತಾ ಆರಾಧಿಸಬೇಕು.
* ದಿನವಿಡೀ ಉಪವಾಸ ಮಾಡುವವರು ಮಂತ್ರಗಳನ್ನು ಪಠಿಸುತ್ತಾ ಕಾಳಿಯನ್ನು ನೆನೆದು ಪೂಜಿಸುವುದರಿಂದ ದುಷ್ಟಶಕ್ತಿಗಳು ದೂರವಾಗಿ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ.
ಅಂದಹಾಗೆ ಈ ಕಾಳರಾತ್ರಿ ದೇವಿಯನ್ನು ಶನಿ ಹಾಗೂ ರಾತ್ರಿಯನ್ನು ನಿಯಂತ್ರಿಸುವ ದೇವತೆ ಎಂದು ಕರೆಯಲಾಗುತ್ತದೆ. ತಾಯಿ ಪೂಜೆಯಿಂದ ದುಷ್ಟ ಶಕ್ತಿ ನಿವಾರಣೆಯಾಗಿ ಮನೆಯಲ್ಲಿ ಅಭಯ ನೆಲೆಸಲಿದೆ.
ಕಾಳರಾತ್ರಿ ಯಾರು?
ಶುಂಭ-ನಿಶುಂಭ ಹಾಗೂ ರಕ್ತಬೀಜಾಸುರ ಎಂಬ ರಾಕ್ಷಸರು ಮೂರು ಲೋಕದಲ್ಲಿ ತಮ್ಮ ಭಯವನ್ನು ಹುಟ್ಟಿಸಲು ಆರಂಭಿಸಿದರು. ಆಗ ಜನ ಶಿವನ ಬಳಿ ಬಂದು ರಾಕ್ಷಸರನ್ನು ಸಂಹಾರ ಮಾಡಲು ಬೇಡಿಕೊಂಡರು. ಆಗ ಶಿವ ಈ ರಾಕ್ಷಸರನ್ನು ಸಂಹರಿಸಲು ಪಾರ್ವತಿಗೆ ಹೇಳಿದನು. ಆಗ ಪಾರ್ವತಿ ಶುಂಭ-ನಿಶುಂಭ ಎಂಬ ರಾಕ್ಷಸರನ್ನು ಕೊಂದಳು. ಆದರೆ ರಕ್ತಬೀಜಾಸುರನನ್ನು ದುರ್ಗಾಮಾತೆ ಕೊಂದ ಬಳಿಕ ಆತನ ದೇಹದಿಂದ ಹೊರ ಚಿಮ್ಮಿದ ರಕ್ತದಿಂದ ಲಕ್ಷಾಂತರ ರಕ್ತಬೀಜಾಸುರರು ಹುಟ್ಟಿಕೊಂಡರು.
ಇದನ್ನು ನೋಡಿದ ದುರ್ಗಾ ಮಾತೆಯು ತನ್ನ ತೇಜಸ್ಸಿನಿಂದ ಕಾಳರಾತ್ರಿ ರಚಿಸಿದಳು. ಆಗ ಕಾಳರಾತ್ರಿ ರಕ್ತಬೀಜಾಸುರನನ್ನು ಕೊಂದಳು. ಆತನ ದೇಹದಿಂದ ಹೊರಬಂದ ರಕ್ತವನ್ನು ತನ್ನ ಬಾಯಲ್ಲಿ ಇಟ್ಟುಕೊಂಡಳು.
ಕಾಳರಾತ್ರಿ ಸ್ವರೂಪ..
ಕಾಳರಾತ್ರಿ ನೋಡಲು ಭಯಾನಕವಾಗಿರುತ್ತಾಳೆ. ಕಾಳರಾತ್ರಿಯ ದೇಹ ಸಂಪೂರ್ಣವಾಗಿ ಕಪ್ಪಾಗಿರುತ್ತದೆ. ಈಕೆಯ ಕೂದಲು ಸಂಪೂರ್ಣವಾಗಿ ಹರಡಿಕೊಂಡು ಮೂರು ಕಣ್ಣುಗಳು ಇರುತ್ತವೆ. ಕರಳಿನಲ್ಲಿ ಮುಂಡಗಳ ಜಪಮಾಲೆಯನ್ನು ಕಾಳರಾತ್ರಿ ದೇವಿ ಧರಿಸಿರುತ್ತಾಳೆ. ಆಕೆಯ ಉಸಿರಿನಿಂದ ಬೆಂಕಿಯ ಜ್ವಾಲೆ ಹೊರಬರುತ್ತಿರುತ್ತದೆ.
ಬಲಗೈಯನ್ನು ಎತ್ತಿ ವರ ನೀಡುವ ಈಕೆಯ ಮತ್ತೊಂದು ಕೈ ಅಭಯ ಮುದ್ರೆಯಲ್ಲಿದೆ. ಇನ್ನೊಂದು ಕೈಯಲ್ಲಿ ಕಬ್ಬಿಣದ ಕತ್ತಿ, ಇನ್ನೊಂದರಲ್ಲಿ ಕಬ್ಬಿಣದ ಕಠಾರಿ ಹಿಡಿದಿದ್ದಾಳೆ. ಕಾಳರಾತ್ರಿಯನ್ನು ಪೂಜಿಸುವುದರಿಂದ ಜೀವನದ ಕಷ್ಟಗಳು ದೂರವಾಗುತ್ತವೆ. ಕಾಳರಾತ್ರಿ ದೇಔಇಯ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಸಂತೋಷ ನೆಲೆಸಲಿದೆ.
ಶುಭಂಕರಿ, ಕಾಳಿ, ಚಂಡಿ, ಧೂಮ್ರವರ್ಣ, ಚಾಮುಂಡಾ ಎಂದು ಕರೆಯಲಾಗುತ್ತದೆ. ಕಾಳಿ ಮಾತೆ ದೆವ್ವ, ಪ್ರೇತ ಮತ್ತು ನಕಾರಾತ್ಮಕ ಶಕ್ತಿಗಳನ್ನು ನಾಶಪಡಿಸುತ್ತಾಳೆಂದು ಪುರಾಣಗಳು ಹೇಳುತ್ತವೆ
1. ಸರಸ್ವತಿ ಆವಾಹನೆ ಪೂಜೆ ವಿಧಾನ:
– ಈ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ.
– ವೇದ ಮಂತ್ರಗಳನ್ನು ಪಠಿಸುವ ಮೂಲಕ ವಿಗ್ರಹವನ್ನು ಪ್ರತಿಷ್ಠಾಪಿಸಿ.
– ನಂತರ ಸರಸ್ವತಿ ದೇವಿಯ ಪಾದಗಳನ್ನು ತೊಳೆದು ವಿಗ್ರಹವನ್ನು ಚಂದನದ ಪೇಸ್ಟ್, ಕುಂಕುಮದಿಂದ ಅಲಂಕರಿಸಿ.
– ಸರಸ್ವತಿ ದೇವಿಯ ವಿಗ್ರಹಕ್ಕೆ ಹೂವುಗಳನ್ನು ಅರ್ಪಿಸಿ ಮತ್ತು ವಿಗ್ರಹದ ಮುಂದೆ ದೇಸಿ ತುಪ್ಪದಿಂದ ದೀಪವನ್ನು ಬೆಳಗಿಸಿ.
– ಸರಸ್ವತಿ ದೇವಿಗೆ ನೈವೇದ್ಯವನ್ನು ಅರ್ಪಿಸಿ.
– ಬಿಳಿ ಬಣ್ಣದ ವಿವಿಧ ರೀತಿಯ ಸಿಹಿತಿಂಡಿಗಳು ಮತ್ತು ಖಾರದ ಪದಾರ್ಥಗಳನ್ನು ದೇವಿಗೆ ಅರ್ಪಿಸಲಾಗುತ್ತದೆ.
– ಈ ದಿನ ಸರಸ್ವತಿ ಆವಾಹನೆಯ ಸಮಯದಲ್ಲಿ ಆಕೆಗೆ ಸಮರ್ಪಿತವಾದ ಮಂತ್ರವನ್ನು ಪಠಿಸಿ.,
2. ಸರಸ್ವತಿ ಆವಾಹನೆ 2024 ರ ದಿನಾಂಕ ಮತ್ತು ಸಮಯ:
– ಈ ವರ್ಷ, ಸರಸ್ವತಿ ಪೂಜೆಯು ಅಕ್ಟೋಬರ್ 9 ರಂದು ಪ್ರಾರಂಭವಾಗುತ್ತದೆ ಮತ್ತು ಅಕ್ಟೋಬರ್ 13 ರಂದು ಕೊನೆಗೊಳ್ಳುತ್ತದೆ.
– ಮೂಲಾ ನಕ್ಷತ್ರ ಆರಂಭ: 2024 ರ ಅಕ್ಟೋಬರ್ 09 ರಂದು ಮುಂಜಾನೆ 04:08 ರಿಂದ
– ಮೂಲಾ ನಕ್ಷತ್ರ ಮುಕ್ತಾಯ: 2024 ರ ಅಕ್ಟೋಬರ್ 10 ರಂದು ಮುಂಜಾನೆ 05:15 ರವರೆಗೆ
– ಮೂಲಾ ನಕ್ಷತ್ರ ಆವಾಹನ ಮುಹೂರ್ತ: 2024 ರ ಅಕ್ಟೋಬರ್ 09 ರಂದು ಬೆಳಗ್ಗೆ 10:25 ರಿಂದ ಸಂಜೆ 04:42ರವರೆಗೆ.