ನವೀನ್ ನಂತರ ಫಿನಾಲೆಗೆ ಎಂಟ್ರಿ ಪಡೆದ ಮತ್ತೊರ್ವ ಸ್ಪರ್ಧಿ ಇವರೇ ನೋಡಿ..
ಫಿನಾಲೆಗೆ ಕೇವಲ ಎರಡು ವಾರಗಳು ಉಳಿದಿದೆ. ಮನೆಯಲ್ಲಿ ಉಳಿಕೊಂಡಿರುವುದು 7 ಸ್ಪರ್ಧಿಗಳು ಮಾತ್ರ. ಇವರಲ್ಲಿ ಟಿಕೆಟ್ ಪಡೆದುಕೊಂಡ ಮೊದಲ ಅದೃಷ್ಟ ಸ್ಪರ್ಧಿ ನವೀನ್ ಸಜ್ಜು. ಮೊದಲ ದಿನದಿಂದಲೂ ಯಾವುದೇ ವಿವಾದಗಳಿಲ್ಲದೆ, ಗಾಯನ ಮೂಲಕ ಎಲ್ಲರನ್ನು ಮನರಂಜಿಸಿದ ನವೀನ್, ಫಿನಾಲೆಗೆ ಎಂಟ್ರಿ ಟಿಕೆಟ್ ಪಡೆದುಕೊಂಡರು.ಈಗ ನವೀನ್ ನಂತರ ಮತ್ತೋರ್ವ ಸ್ಪರ್ಧಿಗೆ ಟಿಕೆಟ್ ಸಿಕ್ಕಿದೆ. ಬೇರೆ ಯಾರು ಅಲ್ಲ ಧನರಾಜ್, ಇಲ್ಲಿಯವರೆಗೆ ಯಾವುದೇ ವಿವಾದಗಳಿಲ್ಲದೆ ಮನರಂಜನೆ ನೀಡಿದ ಧನರಾಜ್ ಅವರು ಫಿನಾಲೆಗೆ ಎಂಟ್ರಿ ಆಗಿದ್ದಾರೆ. ಮನೆಗೆ ಬಂದ ಹಳೇ ಸ್ಪರ್ಧಿಗಳು ಫಿನಾಲೆಗೆ ಹೋಗಲು ಅರ್ಹ ಸ್ಪರ್ಧಿಯನ್ನು ಅವರೇ ಆಯ್ಕೆ ಮಾಡಲು ಬಿಗ್ ಬಾಸ್ ಅವಕಾಶ ನೀಡಿದರು. ಎಲ್ಲರು ಒಮ್ಮತದಿಂದ ಧನರಾಜ್ ಅವರನ್ನು ಆಯ್ಕೆ ಮಾಡಿದರು, ಈ ಮೂಲಕ ಧನರಾಜ್ ಫಿನಾಲೆ ಪ್ರವೇಶಿಸುವ ಅವಕಾಶ ಸಿಕ್ಕಿದೆ.