ನಾನು ಮೋದಿಗಿಂತ 4 ವರ್ಷ ದೊಡ್ಡವನು ನಾನು ಮೋದಿಯಿಂದ ದೇಶಭಕ್ತಿ ನಾ ಕಲಿಯುವ ಅವಶ್ಯಕತೆ ನನಗಿಲ್ಲ ಎನ್ನುವ ಮಾತುಗಳನ್ನು ಮಾಜಿ ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಲ್ಲಿ ಮಾಡಿದ್ದಾರೆ.
ನಾನು ಸಿಎಂ ಆಗಿದ್ದಾಗ ಏನೇನು ಮಾಡಿದ್ದೇನೆ ಅಂತ ಹೇಳುವ ತಾಕತ್ತು ನನಗಿದೆ ಆದರೆ ಮೋದಿಗೆ ದಮ್ ಇದ್ದರೆ ಅವರು ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ ಏನೇನು ಮಾಡಿದ್ದಾರೆ ಅಂತ ಹೇಳಲಿ ನೋಡೋಣ, ಗುಜರಾತ್ ಸಿಎಂ ಆಗಿದ್ದಾಗಲೂ ಏನು ಮಾಡಿಲ್ಲ ಕಳೆದ ಐದು ವರ್ಷ ಪ್ರಧಾನಿ ಆಗಿದ್ದಾಗಲು ಏನು ಮಾಡಿಲ್ಲ ಎಂಬರ್ಥದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಮೋದಿ ಅವರ ವಿರುದ್ಧ ಟೀಕಾ ಪ್ರಹಾರವನ್ನು ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಹನಗುಂದ ದಲ್ಲಿ ನಡೆದ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ ದೇಶಕ್ಕೋಸ್ಕರ ಬಿಜೆಪಿಯವರು ಯಾರಾದರೂ ಸತ್ತಿದ್ದಾರ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಬಾಳಕೋಟ್ ಏರ್ ಸ್ಟ್ರೈಕ್ ಮಾಡಿದ್ದು ನಮ್ಮ ಯೋಧರು ಅಂತಹ ಯೋಧರಿಗೆ ಒಂದು ಸೆಲ್ಯೂಟ್ ಮಾಡೋಣ ಆದರೆ ಈ ಗಿರಾಕಿ ಸ್ಟ್ರೈಕ್ ಮಾಡಿದ್ದು ನಾನೇ ಅಂತಾನೆ, ಇವನೇನು ಗನ್ ಹಿಡ್ಕೊಂಡು ಯುದ್ಧ ಮಾಡಿದ್ನಾ?
ಇತಿಹಾಸ ತೆಗೆದು ನೋಡಿದರೆ ಪಾಕಿಸ್ತಾನದ ಮೇಲೆ 4 ಯುದ್ಧ ಮಾಡಿದ್ದು ಕಾಂಗ್ರೆಸ್ ಮೊದಲ ಎರಡು ಯುದ್ಧ ಆದಾಗ ಈ ಗಿರಾಕಿ ಹುಟ್ಟೇ ಇರಲಿಲ್ಲ, 1971 ಇಂದಿರಾ ಗಾಂಧಿ ಪ್ರಧಾನಿಯಾಗಿದ್ದಾಗ ಪಾಕಿಸ್ತಾನದ ಮೇಲೆ ಯುದ್ಧ ಆಯ್ತು ಆಗ ಪಾಕಿಸ್ತಾನವನ್ನು ಸೋಲಿಸಿ ಬಾಂಗ್ಲಾದೇಶ ಉದಯ ಆಯ್ತು ಆಗ ನರೇಂದ್ರ ಮೋದಿ ಇದ್ನಾ? ಇದೇ ವಾಜಪೇಯಿ ಅವರು ಇಂದಿರಾಗಾಂಧಿಯನ್ನು ಹೊಗಳಿದ್ರು ಬೇಕಿದ್ರೆ ಸ್ವಲ್ಪ ಇತಿಹಾಸವನ್ನು ತೆಗೆದು ನೋಡು ಮಾರಾಯ ಎಂದು ಏಕವಚನದಲ್ಲೇ ಪ್ರಧಾನಿ ನರೇಂದ್ರ ಮೋದಿಯನ್ನ ಲೇವಡಿ ಮಾಡಿದ್ದಾರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಅವನ್ಯಾವನೋ ಬಿಜೆಪಿಯ ಅನಂತ್ ಕುಮಾರ್ ಅಂತೆ ಸಂವಿಧಾನವನ್ನು ಬದಲು ಮಾಡಲು ನಾನು ಬಂದಿದ್ದೇನೆ ಅಂತಾನೆ ಅವರನ್ನು ಗೆಲ್ಲಿಸಬೇಕು, ಮತ್ತೊಬ್ಬ ಯಾವನೋ ತೇಜಸ್ವಿ ಸೂರ್ಯ ಅಂತೆ ಸಂವಿಧಾನವನ್ನು ಸುಟ್ಟು ಹಾಕಿ ಅಂತಾನೆ, ಈ ಅನಂತ್ ಕುಮಾರ್ ಗ್ರಾಮ ಪಂಚಾಯಿತಿ ಸದಸ್ಯ ಆಗೋದಕ್ಕೆ ನಾಲಾಯಕ್ ಒಂದು ವೇಳೆ ಇವರನ್ನು ಗೆಲ್ಲಿಸಿ ಮೋದಿ ಪ್ರಧಾನಿಯಾದರೆ ಹಿಟ್ಲರ್ ಆಗ್ತಾನೆ ಇನ್ನು ಮುಂದೆ ದೇಶದಲ್ಲಿ ಚುನಾವಣೆಯ ನಡೆಯಲ್ಲ ನೆನಪಿರಲಿ ಬಿ ಕೇರ್ಫುಲ್ ಎಂದು ಹೇಳುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರವನ್ನು ಮತ್ತು ಸಂಸದರನ್ನು ಮಾಜಿ ಸಿಎಂ ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.