ಜಸ್ಟ್ ಆಸ್ಕಿಂಗ್ ಅಭಿಯಾನದ ಅಡಿಯಲ್ಲಿ ನರೆಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಮಾಡುವ ಕೆಲಸಗಳು ಮತ್ತು ಮಾಡಿದ ಕೆಲಸಗಳ ಬಗ್ಗೆ ಟೀಕೆ ಮಾಡುತ್ತಿದ್ದ ಪ್ರಕಾಶ್ ರಾಜ್ ಅವರು ಇದೀಗ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಹೌದು ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ಅಪಾರ ಪ್ರಮಾಣದ ಪ್ರವಾಹ ಉಂಟಾಗಿ ಅಪಾರ ಜನರು ತಮ್ಮ ಆಸ್ತಿ ಪಾಸ್ತಿ ಮನೆ ಮಠಗಳನ್ನು ಕಳೆದುಕೊಂಡಿದ್ದಾರೆ. ಈ ನೆರೆ ಸಂತ್ರಸ್ತರಿಗೆ ಮೋದಿ ಸರ್ಕಾರದ ವತಿಯಿಂದ ಯಾವುದೇ ರೀತಿಯ ನೆರೆ ಪರಿಹಾರ ಇನ್ನೂ ಸಹ ಘೋಷಣೆಯಾಗಿಲ್ಲ.
ಇದೀಗ ಮೋದಿ ಸರ್ಕಾರದ ಈ ನಡೆಯಿಂದ ಕರ್ನಾಟಕದ ಜನರು ರೊಚ್ಚಿಗೆದ್ದಿದ್ದು ಕೇಂದ್ರ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಜನರು ಕೇಂದ್ರ ಸರ್ಕಾರದ ವಿರುದ್ಧ ಸಿಡಿದೆದ್ದಿರುವುದನ್ನು ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿರುವ ಪ್ರಕಾಶ್ ರಾಜ್ ಅವರು ನಾನು ಉಗಿದಾಗ ಒರೆಸಿಕೊಂಡ್ರಿ ಈಗ ಜನ ಕ್ಯಾಕರಿಸಿ ಉಗೀತಾ ಇದ್ದಾರೆ ಎಷ್ಟು ಅಂತ ಒರೆಸಿಕೊಳ್ತೀರಪ್ಪಾ? ಎಂದು ಮೋದಿ ಸರಕಾರಕ್ಕೆ ಟಾಂಗ್ ನೀಡಿದ್ದಾರೆ.