ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಮಾಜಿ ಪ್ರಧಾನಿ ದೇವೆಗೌಡರು ನನ್ನದು ಕೂಡ ಹಿಂದೂ ಧರ್ಮವೇ, ನಾನೂ ಕೂಡಾ ಎಲ್ಲಾ ದೇವಸ್ಥಾನಕ್ಕೆ ಹೋಗುತ್ತೇನೆ ಎಂದು ಆನಂದ ಅಸ್ನೋಟಿಕರ್ ಪರ ಪ್ರಚಾರ ಮಾಡುವ ಸಂದರ್ಭದಲ್ಲಿ ಹೆಚ್ ಡಿ ದೇವೆಗೌಡರು ಹೇಳಿದ್ದಾರೆ.
ಅನಂತಕುಮಾರ ಹೆಗ್ಡೆ ವಿರುದ್ದ ವಾಗ್ದಾಳಿ ನಡೆಸಿದ ದೇವೇಗೌಡರು ಕಾನೂನು ಬದಲಾವಣೆ ಮಾಡುವವರನ್ನ ನಾವು ಗೆಲ್ಲಿಸಬೇಕಾ, ಕೋಮುವಾದಿಗಳನ್ನು ಗೆಲ್ಲಿಸಬೇಕಾ ಮೋದಿ ಅವರು ಇಂಥವರನ್ನ ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡಿದ್ದಾರೆ ಎಂದು ನೆರೆದಿದ್ದವರನ್ನು ಉದ್ದೇಶಿಸಿ ಮಾಜಿ ಪ್ರಧಾನಿ ದೇವೆಗೌಡರು ಮಾತನಾಡಿದ್ದಾರೆ.
ರೈತರ ಸಮಸ್ಯೆ ತೆಗೆದುಕೊಂಡು ಪ್ಗರದಾನಿ ನರೇಂದ್ರ ಮೋದಿ ಬಳಿ ಹೋದ್ರೆ ಅವರ ಬಳಿ ಅದಕ್ಕೆ ಉತ್ತರವಿಲ್ಲ, ಬಡವರ ಬಗ್ಗೆ ಕರುಣೆ ಇಲ್ಲ, ನಾನು ಕೂಡಾ ಪಾಕ್ತಿಸ್ತಾನಕ್ಕೆ ಐದು ಬಾರಿ ಹೋಗಿ ಬಂದಿದ್ದೇನೆ, ಅಲ್ಲಿ ನನಗೆ ಯಾರೂ ಹೊಡೆಯಲೇ ಇಲ್ಲ, ಎದ್ದೇಳಿ ನಮಗೂ ಕೂಡಾ ಶಕ್ತಿ ಇದೆ ಸಂವಿಧಾನ ಬದಲಾವಣೆಗೆ ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಲೇ ಬಾರದು.
ಮೋದಿ ಹೆಲಿಕಾಪ್ಟರ್ ನಲ್ಲಿ ಸಾಗಿಸಿದ ಬ್ಯಾಗ್ ತಪಾಸಣೆ ಮಾಡಿದ್ರೆ ಅಂತಹ ಅಧಿಕಾರಿ ಅಮಾನತ್ತು ಮಾಡಲಾಗತ್ತೆ, ಇದು ಮೋದಿ ಪ್ರಜಾಪ್ರಭುತ್ವಕ್ಕೆ ಕೊಡುವ ಬೆಲೆನಾ ಎಂದು ಹೇಳುವ ಮೂಲಕ ಎಂದಿನಂತೆ ಪ್ರಧಾನಿ ದೇವೆಗೌಡರು ಮೋದಿ ವಿರುದ್ಧ ಹರಿಹಾಯ್ದರು.