ವಿಪಕ್ಷ ನಾಯಕನಾಗಿರುವ ತಮಗೆ ಸರ್ಕಾರದ ಸವಲತ್ತು, ಸರ್ಕಾರಿ ಕಾರು ಮತ್ತು ಸಿಬ್ಬಂದಿ ಒದಗಿಸಬೇಕೆಂದು ಎರಡು ತಿಂಗಳ ಹಿಂದೆಯೇ ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಆದರೂ ಇನ್ನೂ ಸರ್ಕಾರಿ ಕಾರು, ಸವಲತ್ತು ಒದಗಿಸಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ಹೊರ ಹಾಕಿದ್ದಾರೆಂದು ಗೊತ್ತಾಗಿದೆ.
ನಾನು ವಿಪಕ್ಷ ನಾಯಕನಾಗಿ ತಿಂಗಳುಗಳೇ ಕಳೆದಿವೆ. ಇದುವರೆಗೂ ಕಾರು ನೀಡಿಲ್ಲ, ಸಿಬ್ಬಂದಿಯೂ ಇಲ್ಲ. ಪ್ರತಿಪಕ್ಷ ನಾಯಕನಿಗೆ ವೇತನ, ಭತ್ತೆಯೂ ಇಲ್ಲ ಎಂದು ಸಿದ್ದರಾಮಯ್ಯ, ಸ್ಪೀಕರ್ ವಿರುದ್ಧ ಗುಡುಗಿದ್ದಾರೆಂದು ಹೇಳಲಾಗಿದೆ.