ನಾಯಿ ವಿಚಾರಕ್ಕೆ ಖ್ಯಾತ ನಟಿ ಜೊತೆ ಕೆಲವರಿಂದ ಕಿರಿಕ್..!

Date:

ಬೆಂಗಳೂರು: ನಾಯಿ ವಿಚಾರಕ್ಕೆ ಖ್ಯಾತ ನಟಿ ಜೊತೆ ಕೆಲವರು ಕಿರಿಕ್ ತೆಗೆದ ಘಟನೆ ಸಂಪಿಗೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋ ಘಟನೆ ಜರುಗಿದೆ. ನಾಯಿ ಬೊಗಳಿದ್ದಕ್ಕೆ ಸಿಟ್ಟಾದ ನಾಲ್ವರ ಗುಂಪು ನಟಿ ಅನಿತಾ ಭಟ್ ಜೊತೆ ಕಿರಿಕ್ ತೆಗೆದು ಜಗಳಕ್ಕೆ ನಿಂತಿದ್ದಾರೆ. ಕ್ಷಮೆಯಾಚಿಸಿ ಸಮಸ್ಯೆ ಬಗೆಹರಿಸೋಣ ಅಂತಾ ಮುಂದಾಗಿದ್ದ ನಟಿ ಮತ್ತು ಸ್ನೇಹಿತೆಗೆ ಹಿಗ್ಗಾಮುಗ್ಗಾ ಬೈದಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ನಾಯಿ ವಿಚಾರಕ್ಕೆ ಜಗಳ ಜೋರಾಗಿ ಕಿಡಿಗೇಡಿಗಳು ಅನಿತಾ ಭಟ್ ಮತ್ತು ಅವರ ಸ್ನೇಹಿತೆಯನ್ನು ನಿಂದಿಸಿದ್ದಾರೆ. ಕಾರಿನಲ್ಲಿ ಕೂತಿದ್ದ ವೇಳೆ ನಟಿಯ ಕಾರಿನ ಗ್ಲಾಸ್ ಹೊಡೆಯಲು ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ ಎಂದು ಅನಿತಾ ಭಟ್ ಆರೋಪಿಸಿದ್ದಾರೆ.
ನಟಿ ಕೂಡ ಪ್ರಕರಣ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಾಲ್ಕೈದು ಮಂದಿಯ ವಿರುದ್ಧ ದೂರು ನೀಡಿದ ನಟಿ ಅನಿತಾ ಭಟ್ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ
ಕನ್ನಡದಲ್ಲಿ ಸೈಕೋ, ತಿಪ್ಪಜ್ಜಿ ಸರ್ಕಲ್, ಡೇಸ್ ಆಫ್‌ ಬೋರಾಪುರ, ಬೆಂಗಳೂರು 69 ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್ ತನ್ನದೇ ಅಭಿಮಾನಿ ಬಳಗ ಹೊಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ!

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ! ಭಾರತೀಯರ ಜೀವನದಲ್ಲಿ...

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ!

ಯೆಲ್ಲೋ ಮೆಟ್ರೋಗೆ ಹೊಸ ರೈಲು ಸೇರ್ಪಡೆ: ನಾಳೆಯಿಂದ 15 ನಿಮಿಷಕ್ಕೊಮ್ಮೆ ಸಂಚಾರ! ಬೆಂಗಳೂರು:...

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ ನ.3 ರಂದು ದೋಷಾರೋಪ

ರೇಣುಕಾಸ್ವಾಮಿ ಕೊಲೆ ಕೇಸ್ : ನಟ ದರ್ಶನ್ & ಗ್ಯಾಂಗ್ ವಿರುದ್ಧ...