ನಾಲಿಗೆ ಶುದ್ಧವಿಲ್ಲ ಅಂದ್ರೆ ಜೀವಕ್ಕೆ ಕುತ್ತು ತರುತ್ತೆ..!

Date:

ಬೆಳಗ್ಗೆ ಎದ್ದ ಕೂಡಲೇ ಫ್ರೆಷ್ ಅಪ್ ಆಗೋದು ಕಾಮನ್..ಬೆಳಗ್ಗೆ ಎದ್ದ ಕೂಡಲೇ ಬ್ರೆಷ್ ಮಾಡಿ ಕಾಫಿ ಕುಡಿಯೋ ಅಭ್ಯಾಸ ಕೆಲವರದ್ದು.. ಇನ್ನು ಕೆಲವರದ್ದು ಕಾಫಿ ಕುಡಿದು ಬ್ರೆಷ್ ಮಾಡ್ತಾರೆ..ಆದ್ರೆ ಬಾಯಿಯ ಆರೋಗ್ಯಕ್ಕೆ ಮಾತ್ರವಲ್ಲ, ಶರೀರದ ಆರೋಗ್ಯಕ್ಕೂ ನಾಲಿಗೆಯನ್ನು ಸ್ವಚ್ಛಗೊಳಿಸ ಬೇಕು ಗೊತ್ತಾ..? ದಿನನಿತ್ಯ ಬೆಳಗ್ಗೆ ಹಲ್ಲುಜ್ಜುವ ಅಭ್ಯಾಸವಿದ್ದರೂ, ಕೆಲವರು ನಾಲಿಗೆ ಸ್ವಚ್ಛಗೊಳಿಸುವಿಕೆಯನ್ನು ಕಡೆಗಣಿಸುತ್ತಾರೆ. ಆದ್ರೆ ನಾಲಿಗೆ ಕ್ಲೀನ್ ಮಾಡದೇ ಹೋದ್ರೆ ಮುಗಿತು ನಿಮ್ಮ ಕಥೆ..

ಏಕೆಂದರೆ ಬ್ಯಾಕ್ಟೀರಿಯಾಗಳು ಹಲ್ಲುಗಳಿಗೆ ಪಸರಿಸುವುದರಿಂದ ಹಲ್ಲುಗಳು ಕೆಡುತ್ತದೆ. ಇದುವೇ ಮುಂದೆ ಹಲ್ಲು ನೋವು ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಉಂಟು ಮಾಡುತ್ತವೆ. ಸಾಮಾನ್ಯವಾಗಿ ನಾಲಿಗೆಯನ್ನು ಕ್ಲೀನ್ ಮಾಡದಿದ್ದರೆ ತೆಳುವಾದ ಬಿಳಿ ಪದರವು ಮೂಡಿರುತ್ತದೆ. ಇಂತಹ ಪದರವೇ ಮುಂದೆ ಅಪಾಯಕಾರಿಯಾಗಲಿದೆ.
ಬಾಯಿಯಲ್ಲಿ ಸಾಮಾನ್ಯವಾಗಿ ಬ್ಯಾಕ್ಟೀರಿಯಾಗಳಿರುತ್ತವೆ. ಅದರಲ್ಲೂ ನಿದ್ದೆಯ ಸಮಯದಲ್ಲಿ ಬಾಯಿಯಲ್ಲಿ ಸುಮಾರು ಸಾವಿಕ್ಕೂ ಹೆಚ್ಚಿನ ಬ್ಯಾಕ್ಟೀರಿಯಾಗಳು ಇರುತ್ತವೆ. ಬೆಳಿಗ್ಗೆ ಎದ್ದು ಬ್ರಶ್ ಮಾಡಿದ ಬಳಿಕ ಇಂತಹ ಬ್ಯಾಕ್ಟೀರಿಯಾಗಳು ಕಡಿಮೆಯಾದರೂ, ನಾಲಿಗೆಯನ್ನು ಕ್ಲೀನ್ ಮಾಡಿದಿದ್ದರೆ ಅವುಗಳಲ್ಲಿ ಹೆಚ್ಚಿನವು ಹಾಗೆಯೇ ಉಳಿದು ಬಿಡುತ್ತವೆ. ಇದರಿಂದ ನಾಲಿಗೆ ಮೇಲೆ ಬೊಬ್ಬೆ ಏಳುವುದು, ನಾಲಿಗೆ ಸೀಳು, ಅಜೀರ್ಣ ಸಮಸ್ಯೆ ಸೇರಿದಂತೆ ಹಲವು ತೊಂದರೆಗಳು ಕಾಣಿಸುತ್ತವೆ. ಬಾಯಿಯ ದುರ್ಗಂಧ ಹಾಗೇ ಉಳಿದು ಬಿಡುತ್ತದೆ. ಇದರಿಂದ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಈ ಸಮಸ್ಯೆಗೆ ನಾಲಿಗೆಯನ್ನು ಸ್ವಚ್ಛ ಮಾಡದಿರುವುದೇ ಒಂದು ಕಾರಣ.ದೀರ್ಘಕಾಲದವರೆಗೆ ಮುಂದುವರೆದರೆ ಅನಾರೋಗ್ಯಕ್ಕೂ ಕಾರಣವಾಗಬಹುದು.

ನಾಲಿಗೆ ಮೇಲೆ ಬ್ಯಾಕ್ಟೀರಿಯಾಗಳು ಹೆಚ್ಚಾದಂತೆ ಅದು ಹಲ್ಲುಗಳಿಗೆ ಹರುಡುತ್ತವೆ. ನಂತರ ಹಲ್ಲುಜ್ಜಿಯೂ ಕೂಡ ಪ್ರಯೋಜನ ಇಲ್ಲದಂತಾಗುತ್ತೆ. ಒಸಡುಗಳ ಮೇಲೆ ನೇರ ಪರಿಣಾಮ ಬೀರುತ್ತವೆ. ಇದರಿಂದ ಆರೋಗ್ಯಕ್ಕೆ ಕುತ್ತು ತರುತ್ತವೆ.

Share post:

Subscribe

spot_imgspot_img

Popular

More like this
Related

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ

ಖಾನಾಪುರ ಆನೆಗಳ ಸಾವು: ತನಿಖೆಗೆ ಸಚಿವ ಈಶ್ವರ ಆದೇಶ ಬೆಳಗಾವಿ ಜಿಲ್ಲೆಯ ಖಾನಾಪುರ...

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ

ಬಿಹಾರ ಚುನಾವಣೆಯಲ್ಲಿ ಮೈತ್ರಿಕೂಟ ಜಯ ಸಾಧಿಸುವ ಭರವಸೆಯಿದೆ: ಸಿಎಂ ಸಿದ್ದರಾಮಯ್ಯ ಮೈಸೂರು: ಬಿಹಾರ...

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..?

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂದುವರೆದ ಒಣ ಹವೆ: ಹವಾಮಾನ ಇಲಾಖೆ ಹೇಳಿದ್ದೇನು..? ಬೆಂಗಳೂರು:...

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ ಬೇಕು

ಕಾಳು ಮೆಣಸು ಯಾವೆಲ್ಲಾ ಸಮಸ್ಯೆಗೆ ಮನೆಮದ್ದಾಗಿ ಬಳಸಬಹುದು ಗೊತ್ತಾ? ನೀವು ತಿಳಿಯಲೇ...