ನಾಳಿನ ಆಸ್ಟ್ರೇಲಿಯಾ ವಿರುದ್ದ ಟೆಸ್ಟ್ ನಲ್ಲಿ ಇರಲ್ಲ ಈ ಆಟಗಾರರು..!!
ಪರ್ತ್ ನಲ್ಲಿ ನಾಳೆ ಆಸ್ಟ್ರೇಲಿಯಾ ವಿರುದ್ದ ಎರಡನೇ ಟೆಸ್ಟ್ ಆಡಲಿದೆ ಭಾರತ.. ಹೀಗಾಗೆ ಬಿಸಿಸಿಐ ಎರಡನೇ ಟೆಸ್ಟ್ ನ 13 ಸದಸ್ಯರ ತಂಡವನ್ನ ಪ್ರಕಟ ಮಾಡಿದೆ.. ಮೊದಲ ಟೆಸ್ಟ್ ನಲ್ಲಿ ಉತ್ತಮ ಪ್ರದರ್ಶನ ತೋರಿದ್ದ ಆರ್.ಅಶ್ವಿನಿ ಈ ಟೆಸ್ಟ್ ನಿಂದ ಹೊರಗುಳಿಯಲ್ಲಿದ್ದು, ಇವರೊಂದಿಗೆ ರೋಹಿತ್ ಶರ್ಮಾ ಸಹ ಆಡುತ್ತಿಲ್ಲ.. ಕಾರಣ ಈ ಇಬ್ಬರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು.. ಇವರೊಂದಿಗೆ ಯುವ ಆಟಗಾರ ಪೃಥ್ವಿ ಶಾ ಕೂಡ ಕಾಲಿಗೆ ಪೆಟ್ಟು ಮಾಡಿಕೊಂಡು ಹೊರಗುಳಿದಿದ್ದಾರೆ.. ಅಶ್ವಿನ್ ಅವರ ಜಾಗವನ್ನ ಕುಲ್ ದೀಪ್ ಯಾದವ್ ತುಂಬುವ ಸಾಧ್ಯತೆ ಹೆಚ್ಚಾಗಿದೆ.. ರೋಹಿತ್ ಶರ್ಮಾ ಸ್ಥಾನವನ್ನ ಹನುಮ ವಿಹಾರಿ ತುಂಬಲ್ಲಿದ್ದಾರೆ..
ನಾಳಿನ ಟೆಸ್ಟ್ ನಲ್ಲಿ ವಿರಾಟ್ ಕೊಹ್ಲಿ, ಮುರುಳಿ ವಿಜಯ್, ಕೆ.ಎಲ್.ರಾಹುಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ರಿಷಭ್ ಪಂತ್, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್, ಜಸ್ ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಸ್ಥಾನ ಪಡೆದಿದ್ದಾರೆ..