ನಾಳೆ ಇಡೀ ದಿನ ನಿಮ್ಮ ಮನೆಯಲ್ಲಿ ನಿಮ್ಮ ನೆಚ್ಚಿನ ಧಾರಾವಾಹಿ, ಪ್ರೋಗ್ರಾಂ ಯಾವುದು ಬರಲ್ಲ..!! ಕಾರಣ..?
ಟ್ರಾಯ್ ಹಾಗೆ ಕೇಬಲ್ ಆಪರೇಟರ್ ಗಳ ನಡುವೆ ನಡೆಯುತ್ತಿರುವ ದರ ಸಮರ ಹಾಗು ಹೊಸ ಕೇಬಲ್ ನೀತಿಯ ಬಗ್ಗೆ ನಿಮಗೆ ಗೊತ್ತೆ ಇದೆ.. ಈಗಾಗ್ಲೇ ನಿಮ್ಮ ಮನೆಯ ಟಿವಿಗಳಲ್ಲಿ ನಮ್ಮ ಚಾನೆಲ್ ಅನ್ನ ಬಲ್ಕ್ ಆಗಿ ಕೇವಲ ದಿನಕ್ಕೆ ಒಂದು ರೂಪಾಯಿಗೆ, ಕೇವಲ 30 ರೂಪಾಯಿಗೆ ಖರೀದಿಸಿ ಅಂತ ಜಾಹೀರಾತುಗಳನ್ನ ನೀವು ನೋಡ್ತೀದ್ದೀರಿ.. ಮುಂದಿನ ಫೆಬ್ರವರಿಯಿಂದ ನಿಮಗೆ ಇಷ್ಟವಾದ ಚಾನೆಲ್ ಗಳನ್ನ ಆಯ್ಕೆ ಮಾಡಿಕೊಂಡು ಅದಕ್ಕೆ ಮಾತ್ರ ದುಡ್ಡು ಕಟ್ಟಿದ್ರೆ ಸಾಕು ಅಂತ ಟ್ರಾಯ್ ಸಂಸ್ಥೆ ಹೇಳಿದೆ..
ಆದರೆ ಇದಕ್ಕೆ ಕೇಬಲ್ ಆಪರೇಟರ್ ಗಳು ವಿರೋಧವನ್ನ ವ್ಯಕ್ತ ಪಡೆಸಿದ್ದು, ಇದರಿಂದ ಕೇಬಲ್ ಆಪರೇಟರ್ ಹಾಗು ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳಲಿದೆ ಅಂತ ಆಕ್ರೋಶ ವ್ಯಕ್ತಪಡೆಸಿದೆ.. ಹೀಗಾಗೆ ಮೊದಲ ಹಂತವಾಗಿ ನಾಳೆ ಇಡೀ ದಿನ ಕೇಬಲ್ ಆಪರೇಟರ್ಗಳು ರಾಜ್ಯಾದ್ಯಂತ ಬಂದ್ ಮಾಡಲು ಮುಂದಾಗಿದ್ದು,ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರಗೆ ಕೇಬಲ್ ನೀಡದಿರಲು ತೀರ್ಮಾನಿಸಲಾಗಿದೆ..
ಈ ತಿಂಗಳ ಅಂತ್ಯದೊಳಗೆ ಹೊಸ ಕೇಬಲ್ ನೀತಿಯನ್ನ ಕೈಬಿಡಿದಿದ್ದರೆ ಅಥವಾ ಬದಲಾವಣೆ ಮಾಡದಿದ್ದರೆ ಫೆಬ್ರವರಿ 1ರಿಂದ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಕೇಬಲ್ ಟಿವಿ ಆಪರೇಟರ್ ಸಂಘಟನೆ ತೀರ್ಮಾನಿಸಿದೆ..