ನಾಳೆ ವಿಜಯೇಂದ್ರ, ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ BJP ಸೇರ್ಪಡೆ !

Date:

ಬೆಂಗಳೂರು: ನಾಳೆ ಬೆಳಗ್ಗೆ 10ಕ್ಕೆ ವಿಜಯೇಂದ್ರ ಮತ್ತು ಉಸ್ತುವಾರಿ ರಾಧಾಮೋಹನ್ ಸಮ್ಮುಖದಲ್ಲಿ ನಾಳೆ ಬಿಜೆಪಿ ಸೇರುತ್ತೇನೆ ಎಂದು ಜನಾರ್ದನ ರೆಡ್ಡಿ ಅಧಿಕೃತವಾಗಿ ಘೋಷಿಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ಬಿಜೆಪಿ ನಾಯಕರ ಆಹ್ವಾನದ ಮೇರೆಗೆ ನಾಳೆ ಪಕ್ಷ ಸೇರ್ಪಡೆಯಾಗುತ್ತಿದ್ದೇನೆ. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲಿ ನಾಳೆ ಬೆಳಗ್ಗೆ 10ಕ್ಕೆ ಬಿಜೆಪಿ ಸೇರ್ಪಡೆಯಾಗುತ್ತಿದ್ದು, ಬಿಜೆಪಿ ಸೇರ್ಪಡೆ ಬಗ್ಗೆ ಎಲ್ಲಾ ಬೆಂಬಲಿಗರ ಅಭಿಪ್ರಾಯ ಪಡೆದಿದ್ದೇನೆ. ಇದಕ್ಕೆ ಎಲ್ಲಾ ಬೆಂಬಲಿಗರು ಒಪ್ಪಿಗೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಕಳೆದ 10 ವರ್ಷದಿಂದ ಅಭಿವೃದ್ಧಿಯಾಗಿದೆ. ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಈ ನಿರ್ಧಾರ ಮಾಡಿದ್ದೇನೆ. KRPP ಸ್ಥಾಪನೆ ವೇಳೆ ಬಿಎಸ್ವೈರನ್ನು ತಂದೆ ರೀತಿ ನೋಡುತ್ತೇನೆ ಎಂದಿದ್ದೆ. ಮಾಜಿ ಸಚಿವ ಶ್ರೀರಾಮುಲು ಜೊತೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲರೂ ಒಟ್ಟಾಗಿ ಮೋದಿರನ್ನು ಮತ್ತೆ ಪ್ರಧಾನಿ ಮಾಡಲು ಶ್ರಮಿಸುತ್ತೇವೆ ಎಂದು ಹೇಳಿದರು.
ಬಿಜೆಪಿಗೆ ಅತೀ‌ಚಿಕ್ಕ ವಯಸ್ಸಿನಿಂದಲೂ ಕೆಲಸ ಮಾಡಿದ್ದೇನೆ. ಮಧ್ಯೆದಲ್ಲಿ ಏನೆನ್ನೆಲ್ಲಾ ಆಯ್ತು. ಅದು ನಿಮಗೂ ಗೊತ್ತು. ನಾನು ಕೂಡ ಬಿಜೆಪಿ ಸೇರ್ಪಡೆಯಾಗೋದಕ್ಕೂ ಮುನ್ನ ಬೆಂಬಲಿಗರ ಜೊತೆ ಸಭೆ ಮಾಡಿದ್ದೇನೆ. ಪಕ್ಷದ ಬೆಂಬಲಿಗರು ಬಿಜೆಪಿ ಸೇರುವುದಕ್ಕೆ ಒಪ್ಪಿದ್ದಾರೆ. ನಾಳೆ ಬೆಳಗ್ಗೆ 10 ಗಂಟೆಗೆ ವಿಜಯೇಂದ್ರ, ರಾಧಾ ಮೋಹನ್ ದಾಸ್ ನೇತೃತ್ವದಲ್ಲಿ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದರು.

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...