ಬೆಂಗಳೂರಿನ ಸಿದ್ದರಾಮಯ್ಯನವರ ಕಾವೇರಿ ನಿವಾಸದಲ್ಲಿ ಬೆಳಗ್ಗೆ 11 ಗಂಟೆಗೆ ಮಹಿಳಾ ಮಂಗಳ ವಾದ್ಯಗಾರರಿಂದ ಶುಭ ರಾಗ ಕೀರ್ತನೆಗಳನ್ನು ನುಡಿಸಿ ಹುಟ್ಟುಹಬ್ಬವನ್ನು ಆಚರಿಸಲಾಗುತ್ತದೆ.
ಖ್ಯಾತ ಸಾಹಿತಿ, ಪ್ರಗತಿಪರ ಚಿಂತಕರು ಪ್ರೊ.ಎನ್.ವಿ.ನರಸಿಂಹಯ್ಯ, ದೇವರಾಜ್ ಅರಸು ಸಂಶೋಧನಾ ಸಮಿತಿ ಮಾಜಿ ನಿರ್ದೇಶಕ, ವೇದಿಕೆ ಅಧ್ಯಕ್ಷ ಮುತ್ತುರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಎಂ.ಗುರುರಾಜ್ ಹಾಗೂ ಇನ್ನೂ ಹಲವು ಪ್ರಮುಖರು ಹಾಗೂ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಭಾಗವಹಿಸಲಿದ್ದಾರೆ.