ಕೊಪ್ಪಳ: ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ? ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ್ ರಾಯರೆಡ್ಡಿ ಹೇಳಿದ್ದಾರೆ. ಕೊಪ್ಪಳ ನಗರದಲ್ಲಿ ಮಾತನಾಡಿದ ಅವರು, ಈಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸೋದಿಲ್ಲ, ಮುಂದುವರಿಸುತ್ತೇವೆ. ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?. ಕೊಟ್ಟಿದ್ದನ್ನು ನಿಲ್ಲಿಸಲು ಆಗಲ್ಲ, ತಗೆಯಬಾರದು ಕೂಡ. ಲೋಕಸಭಾ ಚುನಾವಣೆ ಹಾಗೂ ಮುಂದಿನ ಚುನಾವಣೆಗೂ ನಮ್ಮ ಗ್ಯಾರಂಟಿ ಯೋಜನೆಗಳು ಇರುತ್ತವೆ.
ಗ್ಯಾರಂಟಿಯಿಂದ ಹಣದ ಬಾರವಿದೆ. ಆದ್ರೆ, ಅದಕ್ಕೆ ಪರಿಹಾರ ಹುಡುಕಿಕೊಂಡಿದ್ದೇವೆ ಎಂದು ಹೇಳಿದರು.ಆರು ಕೋಟಿ ತೊಂಬತ್ತು ಲಕ್ಷ ಜನರಿಗೆ ಬರೊಬ್ಬರಿ ಒಂದು ಲಕ್ಷ ಕೋಟಿ ಹಣ ನೀಡುತ್ತಿದ್ದೇವೆ. 7.10 ಲಕ್ಷ ನೌಕರರಿಗೆ ಸರಿಸುಮಾರು 96 ಲಕ್ಷ ಕೋಟಿ ಹಣ ನೀಡಲಾಗುತ್ತದೆ. ಹೀಗಿರುವಾಗ ಜನರಿಗೆ ಗ್ಯಾರಂಟಿ ಯೋಜನೆ ನೀಡುವುದು ತಪ್ಪಲ್ಲ ಎಂದರು.
ನಾವು ಗ್ಯಾರಂಟಿ ಬಂದ್ ಮಾಡಿದ್ರೆ ಜನ ಸುಮ್ಮನಿರುತ್ತಾರಾ?
Date: