ನಾವು ಸುಧಾರಣಾ ಎಕ್ಸ್‌ಪ್ರೆಸ್‌ ನಲ್ಲಿ ಸಾಗುತ್ತಿದ್ದೇವೆ’: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಹೇಳಿಕೆ

Date:

ನಾವು ಸುಧಾರಣಾ ಎಕ್ಸ್‌ಪ್ರೆಸ್‌ ನಲ್ಲಿ ಸಾಗುತ್ತಿದ್ದೇವೆ’: ಬಜೆಟ್ ಅಧಿವೇಶನಕ್ಕೂ ಮುನ್ನ ಪ್ರಧಾನಿ ಮೋದಿ ಹೇಳಿಕೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಆರಂಭಕ್ಕೂ ಮುನ್ನ ಗುರುವಾರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಸರ್ಕಾರದ ಪ್ರಮುಖ ಲಕ್ಷಣಗಳಾಗಿ ಸುಧಾರಣೆ, ಕಾರ್ಯಕ್ಷಮತೆ ಮತ್ತು ಬದಲಾವಣೆಗಳನ್ನು ಉಲ್ಲೇಖಿಸಿದರು. “ಈಗ ನಾವು ಸುಧಾರಣಾ ಎಕ್ಸ್‌ಪ್ರೆಸ್‌ನಲ್ಲಿ ಸಾಗುತ್ತಿದ್ದೇವೆ” ಎಂದು ಪ್ರಧಾನಿ ಹೇಳಿದರು.

ರಾಷ್ಟ್ರಪತಿ ಭಾಷಣವನ್ನು ಉಲ್ಲೇಖಿಸಿದ ಅವರು, ಆ ಭಾಷಣವು 140 ಕೋಟಿ ಭಾರತೀಯರ ವಿಶ್ವಾಸದ ಅಭಿವ್ಯಕ್ತಿಯಾಗಿದ್ದು, ಅವರ ಸಾಮರ್ಥ್ಯ ಹಾಗೂ ಆಕಾಂಕ್ಷೆಗಳ ಸ್ಪಷ್ಟ ರೇಖಾಚಿತ್ರವಾಗಿದೆ ಎಂದು ಅಭಿಪ್ರಾಯಪಟ್ಟರು. ವಿಶೇಷವಾಗಿ ಯುವಜನರ ಆಶಯಗಳು ಭಾಷಣದಲ್ಲಿ ಸ್ಪಷ್ಟವಾಗಿ ಪ್ರತಿಬಿಂಬಿಸಿದ್ದವು ಎಂದು ಮೋದಿ ಹೇಳಿದರು.

ರಾಷ್ಟ್ರಪತಿ ಭಾಷಣದಲ್ಲಿ ಸಂಸದರಿಗೆ ಮಾರ್ಗದರ್ಶನ ನೀಡುವ ಹಲವಾರು ಅಂಶಗಳಿದ್ದು, ಎಲ್ಲಾ ಸಂಸದರೂ ಅದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂಬ ವಿಶ್ವಾಸ ನನಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು.

ಇದಕ್ಕೂ ನಡುವೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಭಾರತದ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಈ ಸಮೀಕ್ಷೆ ದೇಶದ ಆರ್ಥಿಕ ಸ್ಥಿತಿಗತಿಯ ಸಮಗ್ರ ಮೌಲ್ಯಮಾಪನವನ್ನು ನೀಡಲಿದ್ದು, ಬಜೆಟ್‌ಗೂ ಮುನ್ನ ಅಗತ್ಯ ಮಾಹಿತಿಯನ್ನು ಒದಗಿಸಲಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಲೋಕಸಭೆಯಲ್ಲಿ 2026ರ ಕೇಂದ್ರ ಬಜೆಟ್ ಅನ್ನು ಮಂಡಿಸಲಿದ್ದಾರೆ.

Share post:

Subscribe

spot_imgspot_img

Popular

More like this
Related

ಸಿಎಂ ಭೇಟಿಯಾಗಿ ರಾಜೀನಾಮೆ ನೀಡಲು ಮುಂದಾಗಿದ್ದೇಕೆ ಸಚಿವ ಜಾರ್ಜ್?

ಸಿಎಂ ಭೇಟಿಯಾಗಿ ರಾಜೀನಾಮೆ ನೀಡಲು ಮುಂದಾಗಿದ್ದೇಕೆ ಸಚಿವ ಜಾರ್ಜ್? ಬೆಂಗಳೂರು: ಇಂಧನ ಸಚಿವ...

ಪದೇ ಪದೇ ಸಿಹಿ ತಿನ್ನಬೇಕು ಎಂದು ಅನಿಸುವುದಕ್ಕೆ ಕಾರಣವಿದೆ! ಈ ಕಾರಣಗಳು ತಿಳಿಯಲೇಬೇಕು

ಪದೇ ಪದೇ ಸಿಹಿ ತಿನ್ನಬೇಕು ಎಂದು ಅನಿಸುವುದಕ್ಕೆ ಕಾರಣವಿದೆ! ಈ ಕಾರಣಗಳು...

ಸಕಲ ಸರ್ಕಾರಿ ಗೌರವದೊಂದಿಗೆ ಅಜಿತ್ ಪವಾರ್ ಅಂತ್ಯಕ್ರಿಯೆ; ಪ್ರಧಾನಿ, ಅಮಿತ್ ಶಾ ಭಾಗಿ

ಸಕಲ ಸರ್ಕಾರಿ ಗೌರವದೊಂದಿಗೆ ಅಜಿತ್ ಪವಾರ್ ಅಂತ್ಯಕ್ರಿಯೆ; ಪ್ರಧಾನಿ, ಅಮಿತ್ ಶಾ...

ಮುಡಾ ಹಗರಣ ಕೇಸ್: ಸಿಎಂ ಸಿದ್ದರಾಮಯ್ಯ ಬಿಗ್ ರಿಲೀಫ್ ನೀಡಿದ ಕೋರ್ಟ್​​!

ಮುಡಾ ಹಗರಣ ಕೇಸ್: ಸಿಎಂ ಸಿದ್ದರಾಮಯ್ಯ ಬಿಗ್ ರಿಲೀಫ್ ನೀಡಿದ ಕೋರ್ಟ್​​! ಬೆಂಗಳೂರು/ಮೈಸೂರು:...